ಸುದ್ದಿ

ಮದ್ಯ ಪ್ರಿಯರಿಗೊಂದು ಶಾಕಿಂಗ್ ಸುದ್ದಿ : ಆನ್ ಲೈನ್ ಮದ್ಯ ಮಾರಾಟಕ್ಕೆ ಹೈಕೋರ್ಟ್ ಬ್ರೇಕ್…!

By admin

September 19, 2019

ಆನ್ ಲೈನ್ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತಾದರೂ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರಿಂದ ಹಿಂದೆ ಸರಿದಿತ್ತು.

ಇದರ ಮಧ್ಯೆ ಚೆನ್ನೈ ಮೂಲದ ಹಿಪ್ ಬಾರ್ ಪ್ರೈವೇಟ್ ಲಿಮಿಟೆಡ್, ಡಿಜಿಟಲ್ ವಾಲೆಟ್ ಮೂಲಕ ಆನ್ ಲೈನ್ ಲಿಕ್ಕರ್ ವೆಡಿಂಗ್ ಗೆ ಅನುಮತಿ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

ಇದೀಗ ಈ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ಪೀಠ, ಆನ್ ಲೈನ್ ಮೂಲಕ ಮದ್ಯ ಸರಬರಾಜು ಮಾಡುವುದು ಅಕ್ರಮ ಹಾಗೂ ಅಬಕಾರಿ ನಿಯಮಗಳಡಿ ಅದಕ್ಕೆ ಅವಕಾಶವೂ ಇಲ್ಲ ಎಂದು ತೀರ್ಪು ನೀಡಿದೆ.

ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಲೈಸೆನ್ಸ್ ಹೊಂದಿರುವವರು ಮಾತ್ರ ನಿಗದಿಪಡಿಸಿದ ಸಮಯದಲ್ಲಿ ಮದ್ಯವನ್ನು ಮಾರಾಟ ಮಾಡಬಹುದಾಗಿದ್ದು, ಆದರೆ ಆನ್ ಲೈನ್ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ದಿನದ 24 ಗಂಟೆಯೂ ವಹಿವಾಟು ನಡೆಸಬಹುದಾಗಿದೆ. ಹಾಗಾಗಿ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.