ಮದುವೆಗಳಲ್ಲಿ ಹಲವಾರು ವಿಚಿತ್ರ ಸನ್ನಿವೇಶಗಳು ನಡೆಯುವುದನ್ನ ಕೇಳಿರುತ್ತೇವೆ, ನೋಡಿರುತ್ತೇವೆ.ಅದರಲ್ಲಿ ಕೆಲವೊಂದು ಇನ್ನೇನು ತಾಳಿ ಕಟ್ಟುವ ಸಮಯಕ್ಕೆ ಹುಡುಗಿ ಕಾಣೆಯಾಗುವುದು, ಇಲ್ಲವಾದ್ರೆ ಹುಡುಗನೇ ಇಲ್ಲದಿರುವುದು. ಅಣ್ಣನ ಮದುವೆಯಲ್ಲಿ ತಮ್ಮ ಅಣ್ಣನ ಕೈಯಿಂದ ತಾಳಿ ಕಿತ್ತುಕೊಂಡು ವಧುವಿಗೆ ಕಟ್ಟುವುದು ಇಂತಹ ಹಲವಾರು ಸನ್ನಿವೇಶಗಳನ್ನು ಎಲ್ಲರೂ ನೋಡಿಯೇ ಇರುತ್ತೇವೆ.
ಇದೇ ರೀತಿ ಇಲ್ಲಿ ವರ ಮಹಾಶಯನೊಬ್ಬ ವಧುವಿಗೆ ತಾಳಿ ತಾಳಿ ಕಟ್ಟುವ ವೇಳೆ ಎಡವಟ್ಟು ಮಾಡಿಕೊಂಡು ಬಿಟ್ಟಿದ್ದಾನೆ.ಇದನ್ನು ತಿಳಿದೇ ಮಾಡಿದ್ದಾನೋ, ತಿಳಿಯದೇ ಮಾಡಿದ್ದಾನೋ ಗೊತ್ತಿಲ್ಲ ಆ ವಿಡಿಯೋ ಮಾತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಏನದು ಎಡವಟ್ಟು..?
ಈ ವರ ಮಹಾಶಯ ತಾನು ವಧುವಿಗೆ ಹಾರ ಹಾಕುವದನ್ನು ಬಿಟ್ಟು, ಪಕ್ಕದಲ್ಲಿದ್ದ ವಧು ಸ್ನೇಹಿತೆಗೆ ಹಾರ ಹಾಕಿಬಿಟ್ಟು, ತನಗೆ ಏನೂ ತಿಳಿಯವದನಂತೆ ಹಾರ ಹಾಕಿ ಬಿಟ್ಟು ಎಡವಟ್ಟು ಮಾಡಿದ್ದಾನೆ.
ಇಲ್ಲಿದೆ ಆ ವಿಡಿಯೋ ನೋಡಿ…
ಅಸಲಿಗೆ ಆ ವಿಡಿಯೋದಲ್ಲಿ ಇರೋದಾದ್ರೂ ಏನು ಗೊತ್ತಾ.?
ಆ ವಿಡಿಯೋದಲ್ಲಿ ಇರುವ ಪ್ರಖಾರ ಮೊದಲಿಗೆ ವಧು ವರನಿಗೆ ಮಾಲೆ ಹಾಕಿದ್ದಾಳೆ.ವಧು ವರರಿಬ್ಬರು ಹಾರ ಬದಲಾಯಿಸುವ ಶಾಸ್ತ್ರಕ್ಕಾಗಿ ಮದುವೆಯ ಮಂಟಪದಲಿರುತ್ತಾರೆ. ಮೊದಲಿಗೆ ವಧು ವರನಿಗೆ ಮಾಲೆ ಹಾಕುತ್ತಾಳೆ.ನಂತರ ವರ ವಧುವಿಗೆ ಹಾರ ಹಾಕಬೇಕಿತ್ತು ಆಲ್ವಾ…
ಆದ್ರೆ ಈ ವರ ಮಹಾಶಯ ಹಾಗೆ ಮಾಡದೆ ವಧುವಿನ ಪಕ್ಕದಲ್ಲಿದ್ದ ವಧುವಿನ ಸ್ನೇಹಿತೆಗೆ ಹಾರ ಹಾಕಿಬಿಟ್ಟಿದ್ದಾನೆ. ಆದರೆ ಮಾಲೆ ಹಾಕಿದ ನಂತರ ತನಗೆ ಏನೂ ತಿಳಿಯದವನಂತೆ, ಅಮಾಯಕನಂತೆ ಸುಮ್ಮನೆ ನೋಡುತ್ತಾ ನಿಂತಿದ್ದಾನೆ.
ಇಲ್ಲಿ ಓದಿ..ಅಣ್ಣನ ಕೈಯಿಂದ ತಾಳಿ ಕಿತ್ಕೊಂಡು ವಧುವಿಗೆ ಕಟ್ಟಿದ ತಮ್ಮ..!
ಆದ್ರೆ ಹಾರ ಹಾಕಿಸಿಕೊಂಡ ಹುಡುಗಿ ಇದಕ್ಕೆ ಏನೂ ವಿರೋಧ ಮಾಡದೆ, ತನ್ನ ಸ್ನೇಹಿತೆ ವಧುವನ್ನು ಸಮಾಧಾನ ಮಾಡುತ್ತಿರುವುದು ಕಂಡುಬಂದಿದೆ.
ಇದನ್ನು ನೋಡಿದ ವಧು ಸೇರಿದಂತೆ ಸಂಭಂದಿಕರು, ಮದುವೆಗೆ ಬಂದಿದ್ದವರೆಲ್ಲಾ ದಂಗಾಗಿಹೋಗಿದ್ದಾರೆ.ವಿಡಿಯೋದಲ್ಲಿ ಅಲ್ಲಿದ್ದ ನೆರೆದಿದ್ದ ಜನರೆಲ್ಲಾ ವರನನ್ನೇ ನೋಡುತ್ತಿದ್ದಾರೆ. ಅಲ್ಲಿದ್ದವರೆಲ್ಲಾ ವರನಿಗೆ ಆ ವಧು ಸ್ನೇಹಿತೆಗೆ ಮೊದಲೇ ಪ್ರೀತಿ ಮಾಡುತಿದ್ದರು ಅನ್ನಿಸುತ್ತೆ ಅದಕ್ಕೆ ಹೀಗೆ ವರ ಮಾಡಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಅಮಾಯಕ ವರ…
ಇದೆಲ್ಲಾ ನಡೆಯುತ್ತಿದ್ದರೂ ಮಾಲೆ ಹಾಕಿದ ವರ ಮಹಾಶಯ ಮಾತ್ರ ತನಗೆ ಏನೂ ತಿಳಿಯದವನಂತೆ ತಪ್ಪೇ ಮಾಡಿಲ್ಲ ಎಂಬಂತೆ ನೋಡುತ್ತಾ ನಗುತ್ತಾ ನಿಂತಿದ್ದಾನೆ.ಇದರ ಅಸಲಿ ಸತ್ಯಾ ಸತ್ಯತೆ ಏನೂ ಅಂತ ಗೊತ್ತಿಲ್ಲ ಎಂದು ಹೇಳಲಾಗಿದೆ.