ಮಗಳಿಗೋ ಮಗನಿಗೋ ಮದುವೆ ಮಾಡಬೇಕಾದರೆ ಹಲವಾರು ಕಡೆ ವಿಚಾರಿಸಿ ಎರಡೂ ಕುಟುಂಬಗಳ ಕಡೆ ವಿಚಾರಿಸಿ ಮದುವೆ ಮಾಡುತ್ತಾರೆ. ಹೆಣ್ಣು ಗಂಡು ಚೆನ್ನಾಗಿ ಬಾಳಬೇಕೆಂಬ ಬಯಕೆಯಿಂದ ಹೀಗೆ ಮಾಡುತ್ತಾರೆ. ಆದರೆ ಇಲ್ಲಿ ಮದುವೆಯೊಂದು ಮುರಿದು ಬಿದ್ದಿದೆ. ಮೊದಲ ರಾತ್ರಿ ಕಣ್ಣೀರಿನಲ್ಲಿ ಕೈತೊಳೆದ ವಧು ಬೆಳಿಗ್ಗೆ ಗಂಡನ ಮನೆ ತೊರೆದಿದ್ದಾಳೆ. ಎರಡು ದಿನ ರೂಮಿನಲ್ಲಿ ಬಂಧಿಯಾಗಿದ್ದ ವರ ಹಾಗೂ ಆತನ ತಂದೆ-ತಾಯಿ ಈಗ ಆಸ್ಪತ್ರೆ ಸೇರಿದ್ದಾರೆ.
ಜನವರಿ 22ರಂದು ಧೀರಜ್ ಮದುವೆ ತನು ಜೊತೆ ನಡೆದಿತ್ತು. ಜನವರಿ 23ರಂದು ತನು ಗಂಡನ ಮನೆಗೆ ಬಂದಿದ್ದಳು. ಮೊದಲ ರಾತ್ರಿಯೇ ಗಂಡನ ಬಣ್ಣ ಬಯಲಾಗಿದೆ. ಧೀರಜ್ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಗಿದೆ. ಧೀರಜ್ ತಂದೆ-ತಾಯಿ ಕೂಡ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದ್ರಿಂದ ನೊಂದ ವಧು ಬೆಳಿಗ್ಗೆ ಮನೆ ಬಿಟ್ಟಿದ್ದಾಳೆ.
ಕೋಣೆಯಲ್ಲಿ ಬಂಧಿಯಾಗಿದ್ದ ಧೀರಜ್ ಹಾಗೂ ಪಾಲಕರು ಕಿರುಚಿಕೊಂಡಾಗ ಸ್ಥಳೀಯರ ಮಾಹಿತಿ ಮೇಲೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಮನೆ ಬೀಗ ಮುರಿದು ಅವ್ರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮೂವರೂ ಹುಚ್ಚಾಸ್ಪತ್ರೆ ಸೇರಿದ್ದಾರೆ. ಒಂದೇ ಬಾರಿ ಮೂವರ ಮಾನಸಿಕ ಸ್ಥಿತಿ ಹದಗೆಡಲು ಕಾರಣವೇನು ಎಂಬುದು ಪತ್ತೆಯಾಗಿಲ್ಲ.