ಸಂಬಂಧ

ಮದುವೆಯಾಗುವ ಹುಡುಗನಿಗೆ ಅಡುಗೆ ಬರುತ್ತಾ???ಶಾಕ್ ಆಗ್ಬೇಡಿ!ಮುಂದೆ ಓದಿ…..

By admin

June 12, 2017

ತಮ್ಮ ಮಕ್ಕಳನ್ನು ಮದುವೆ ಮಾಡುವ ಸಂದರ್ಭದಲ್ಲಿ, ಸಾಮಾನ್ಯವಾಗಿ ಹುಡುಗನ ಮನೆಯವರು ಹುಡುಗಿಗೆ ಅಡುಗೆ ಮಾಡಲು ಬರುತ್ತಾ ಎಂದು ಪ್ರಶ್ನೆ ಕೇಳುವುದು ಸಾಮಾನ್ಯ.

ಹುಡುಗನ ಮನೆಯವರು ಹುಡುಗಿಗೆ ಚೆನ್ನಾಗಿ ಅಡುಗೆ ಮಾಡಲು ಬರಬೇಕು, ಮನೆ ಕೆಲಸ ಗೊತ್ತಿರಬೇಕು ಎಂದು ಬಯಸುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಯುವತಿಯರು ತಮ್ಮ ಸಂಗಾತಿಗೆ, ಮದುವೆಯಾಗುವವನಿಗೆ ಅಡುಗೆ ಮಾಡಲು ಬರುತ್ತದೆಯೇ ಎಂದು ಯೋಚಿಸುತ್ತಾರಂತೆ. ಹೀಗಂತ ಸಮೀಕ್ಷೆಯೊಂದು ತಿಳಿಸಿದೆ.

ಹೆಣ್ಣು-ಗಂಡುಗಳನ್ನು ಹೊಂದಾಣಿಕೆ ಮಾಡಿಕೊಡುವ ಸಂಸ್ಥೆಯಾದ ಶಾದಿ.ಕಾಂ ನಡೆಸಿದ ಸಮೀಕ್ಷೆ ಪ್ರಕಾರ, ಸಂಬಂಧದ ವಿಚಾರ ಬಂದಾಗ ಯುವತಿಯರು ಹುಡುಗನ ಬಗ್ಗೆ ಏನನ್ನು ತಿಳಿದುಕೊಳ್ಳಲು, ಹಾಗೂ ಯಾವುದಕ್ಕೆ ಒಪ್ಪಿಕೊಳ್ಳುತ್ತಾರೆ ಎಂದು ಅಧ್ಯಯನ ಮಾಡಿದೆ.

ಶಾದಿ.ಕಾಂ ನಡೆಸಿದ ಆನ್ ಲೈನ್ ಸಮೀಕ್ಷೆಯಲ್ಲಿ  ಸುಮಾರು     6,800 ಮಂದಿ ಪುರುಷರು ಮತ್ತು ಮಹಿಳೆಯರು ತಮ್ಮ ಮತ ಚಲಾವಣೆ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಶಾದಿ.ಕಾಂ ಮೂಲಕ ಮದುವೆ ಮಾಡಿಕೊಂಡ 25ರಿಂದ 34 ವರ್ಷ  ವಯಸ್ಸಿನ ಮದುವೆಯಾದ ಭಾರತೀಯರು ಇದರಲ್ಲಿ ಸೇರಿಕೊಂಡಿದ್ದಾರೆ.

ನಿಮ್ಮ ಭಾವೀ ಪತಿಗೆ ಓಕೆ ಅನ್ನಲು ನೀವು ಯಾವೆಲ್ಲಾ ಮೂರು ಗುಣಗಳನ್ನು ಅವರಲ್ಲಿ ಕಂಡು ಮೆಚ್ಚಿ ಮದುವೆ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ಶೇಕಡಾ 36 ಮಹಿಳೆಯರು, ನೀವು ಕೂಡು ಕುಟುಂಬದಲ್ಲಿ ಅಥವಾ ಒಬ್ಬರೇ ನೆಲೆಸಿದ್ದೀರಾ ಎಂದು ಕೇಳಿದ್ದೇವೆ ಎಂದಿದ್ದಾರೆ. ನೀವು ನನ್ನ ವೃತ್ತಿಗೆ ಬೆಂಬಲ ನೀಡುತ್ತೀರಾ ಎಂದು ಶೇಕಡಾ 30 ಯುವತಿಯರು ಕೇಳಿದ್ದಾರಂತೆ.

ಶೇಕಡಾ 26 ಯುವತಿಯರು ನಿಮಗೆ ಅಡುಗೆ ಮಾಡಲು ಬರುತ್ತಾ ಎಂದು ಭಾವಿ ಪತಿಯಲ್ಲಿ ಕೇಳಿದ್ದಾರಂತೆ. ಈ ಶೇಕಡಾವಾರು ಪ್ರಮಾಣ ಪುರುಷರ ವಿಚಾರ ಬಂದಾಗ ಸ್ವಲ್ಪ ಭಿನ್ನವಾಗಿದೆ. ಪುರುಷರು ತಮ್ಮ ಭಾವಿ ಪತ್ನಿಯಲ್ಲಿ ನೀವು ನಮ್ಮ ಕುಟುಂಬದ ಜೊತೆ ನೆಲೆಸಲು ಇಚ್ಛಿಸುತ್ತೀರಾ? ಎಂದು, ಶೇಕಡಾ 34 ಮಂದಿ ಮದುವೆ ನಂತರ ಕೆಲಸ ಮಾಡುವ ಯೋಚನೆಯಿದೆಯೇ ಎಂದು ಮತ್ತು ಕೇವಲ ಶೇಕಡಾ 19 ಮಂದಿ ಪುರುಷರು ಮಾತ್ರ ನಿಮಗೆ ಅಡುಗೆ ಮಾಡಲು ಬರುತ್ತಾ ಎಂದು ಕೇಳಿದ್ದಾರಂತೆ.