ಕಳೆದ ವಾರವಷ್ಟೇ ಆರ್’ಬಿಐ ನೂತನ 200 ಹಾಗೂ 50 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷದ ನವೆಂಬರ್’ನಲ್ಲಿ 1000 ರೂ. ಮತ್ತು 500ರೂ ಮುಖಬೆಲೆಯ ನೋಟುಗಳನ್ನು ಅಪಮಾನ್ಯಗೊಳಿಸಿ ಆದೇಶ ಹೊರಡಿಸಿದ್ದರು.
ನಂತರ 2000 ಮತ್ತು 500ರೂ ನೂತನ ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದಿದ್ದರು. ಆಗ ಚಿಲ್ಲರೆಯ ಅಭಾವ ಕೂಡ ತಲೆದೋರಿತ್ತು.
ಆಗ ಜನರಲ್ಲಿ 1000ರೂ ನೋಟು ಮತ್ತೆ ಚಲಾವಣೆಗೆ ಬರುತ್ತದೆಂಬ ಮಾತುಗಳು ಬಂದಿದ್ದವು.
ಹಾಗಾಗಿ, ಕಳೆದ ವರ್ಷದ ನವೆಂಬರ್’ನಲ್ಲಿ 1000 ರೂ. ಮುಖಬೆಲೆಯ ನೋಟುಗಳನ್ನು ಅಪಮೌಲ್ಯಿಕರಣಗೊಂಡಿದ್ದ ಕೇಂದ್ರ ಸರ್ಕಾರ, ಪುನಃ ಹೊಸ ರೂಪದಲ್ಲಿ ಮುದ್ರಿಸಲು ನಿರ್ಧರಿಸಿದೆ.
ಮಾಧ್ಯಮವೊಂದರ ವರದಿ ಪ್ರಕಾರ ಹೊಸದಾಗಿ ಮುದ್ರಣವಾಗುವ 1 ಸಾವಿರ ಮುಖ ಬೆಲೆಯ ನೋಟುಗಳು ತಾಂತ್ರಿಕವಾಗಿ ವಿವಿಧ ಭದ್ರತೆಗಳನ್ನು ಹೊಂದಿರುತ್ತವೆ. ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ನೂತನ ನೋಟುಗಳು ನಿಮ್ಮ ಕೈ ತಲುಪಲಿದೆ.
ಈಗಾಗಲೆ ಮೈಸೂರು ಹಾಗೂ ಮಧ್ಯಪ್ರದೇಶದ ಸಲ್ಬೋನಿ’ಯಲ್ಲಿ ಮುದ್ರಣ ಕಾರ್ಯಗಳು ನಡೆಯುತ್ತಿವೆ.ಎಂದು ಮಾಧ್ಯವೊಂದರಿಂದ ವರದಿಯಾಗಿದೆ.