ಸಂಬಂಧ

ಮಗು ಹುಟ್ಟಿದ ತಕ್ಷಣ ತಕ್ಷಣ ಗಂಟಲು ಕಿತ್ತುಹೋಗುವಂತೆ ಅಳುವುದು ಯಾಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

By admin

January 23, 2018

ತಾಯಿ ಗರ್ಭದಿಂದ ಹೊರಬಂದ ತಕ್ಷಣ  ಗಂಟಲು ಕಿತ್ತುಹೋಗುವಂತೆ ಅಳುವುದು. ಹುಟ್ಟಿದ ತಕ್ಷಣ ಮಗು ಅಳುವುದು ಯಾಕೆ ಗೊತ್ತಾ..?

ತಾಯಿ ಹೊಟ್ಟೆಯಲ್ಲಿದ್ದಾಗ ಮಗು 9 ತಿಂಗಳು ಲಯಬದ್ಧವಾಗಿ ತಾಯಿಯ ಹೃದಯದ ಬಡಿತವನ್ನು ಕೇಳುತ್ತಾ, ಅದರಲ್ಲೇ ತನ್ಮಯವಾಗಿರುತ್ತದೆ. ತಾಯಿಯ ಎದೆಬಡಿತದ ಶಬ್ಧ ತನಗೆ ರಕ್ಷಣೆ ಎಂದೇ ಮಗು ಭಾವಿಸಿರುತ್ತದೆ.

ಆದರೆ ಹೊರ ಪ್ರಪಂಚಕ್ಕೆ ಬಂದ ತಕ್ಷಣ ಆ ಶಬ್ಧ ದೂರವಾಗಿ ಮಗುವಿಗೆ ತಾನೇನು ಅನುರಕ್ಷಿತ ಜಾಗಕ್ಕೆ ಬಂದನೇನೋ ಎಂಬ ಭಯ ಕಾಡಲಾರಂಭಿಸಿ, ಮಗು ಜೋರಾಗಿ ಅಳುತ್ತದೆ.ಆದರೆ ಅಳುತ್ತಿರುವ ಮಗುವನ್ನು ತಾಯಿ ತನ್ನ ಹತ್ತಿರಕ್ಕೆ ಕರೆದುಕೊಂಡ ತಕ್ಷಣ ಮಗು ಅಳು ನಿಲ್ಲಿಸುತ್ತದೆ. ಕಾರಣ ಮಗುವಿಗೆ ಅಮ್ಮನ ಎದೆ ಹತ್ತಿರ ಬಂದಾಗ ಅದಕ್ಕೆ ಲಯಬದ್ಧ ಸದ್ದು ಕೇಳಿಸುತ್ತದೆ.

ಇದರಿಂದ ತಾನು ಸುರಕ್ಷಿತವಾಗಿದ್ದೇನೆ ಎಂಬ ಭಾವನೆ ಬರುತ್ತದೆ. ಮಗುವಿಗೆ ತನ್ನ ಅಮ್ಮನ ಮೇಲೆ ಅಷ್ಟು ನಂಬಿಕೆ. ಹಾಗಾಗಿಯೇ ತಾಯಿ – ಮಗುವಿನ ಸಂಬಂಧ ಅವಿನಾಭಾವ. ಇದನ್ನೇ `ತಾಯಿಗಿಂತ ದೇವರಿಲ್ಲ’ ಎಂದು ವ್ಯಾಖ್ಯಾನಿಸಬಹುದು.