ಸ್ಪೂರ್ತಿ

ಮಗಳ ಜನ್ಮದಿನಕ್ಕೆ ಬೆಂಗಳೂರು ದಂಪತಿಯಿಂದ ಕ್ಯಾನ್ಸರ್ ಆಸ್ಪತ್ರೆ ಗಿಫ್ಟ್..! ತಿಳಿಯಲು ಈ ಲೇಖನ ಓದಿ..

By admin

February 23, 2018

ನ್ಯೂ ಇಂಡಿಯಾ ಎ ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿದ ನಟ ಇಮ್ರಾನ್ ಹಶ್ಮಿ.ಬೆಂಗಳೂರು ಮೂಲದ ಉದ್ಯಮಿ ದಂಪತಿ ವಿಜಯ್ ಟಾಟಾ ಮತ್ತು ಅಮೃತಾ ಟಾಟಾ ದಂಪತಿ ನ್ಯೂ ಇಂಡಿಯಾ ಎ ಚಾರಿಟೆಬಲ್ ಟ್ರಸ್ಟ್ ಗೆ 200 ಕೋಟಿ ರು ಹಣ ನೀಡಿದ್ದಾರೆ.ಬೆಂಗಳೂರಿನಲ್ಲಿ ಉಚಿತ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕಾಗಿ ಈ ದಂಪತಿ ಹಣ ನೀಡಿದ್ದು ಬಾಲಿವುಡ್ ನಟ ಇಮ್ರಾನ್ ಹಸ್ಮಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಮ್ರಾನ್ ಹಸ್ಮಿ ಮಗಳ ಹುಟ್ಟುಹಬ್ಬದ ನಿಮಿತ್ತ ಆಸ್ಪತ್ರೆ ನಿರ್ಮಿಸಲು ಹಣ ನೀಡಲು ನಿರ್ಧರಿಸಿದ್ದರು.

 

ನೂರಾರು ಕೋಟಿ ಆಸ್ತಿ, ಒಬ್ಬಳು ರಾಜಕುಮಾರಿಯಂಥ ಮಗಳು… ಆಕೆಯ ಹುಟ್ಟುಹಬ್ಬವನ್ನು ಕೇರಿಗೆಲ್ಲ ಊಟ ಹಾಕಿಸಿ ಆಚರಿಸುವುದಕ್ಕೂ ಕೊರತೆಯಿಲ್ಲದ ಸಿರಿವಂತಿಕೆ… ಇಷ್ಟೆಲ್ಲ ಇದ್ದರೂ ಈ ದಂಪತಿ ಮಾತ್ರ ತಮ್ಮ ಮುದ್ದು ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದು ಅನುಕರಣೀಯವಾಗಿ! ಬೆಂಗಳೂರು ಮೂಲದ ಉದ್ಯಮಿ ದಂಪತಿ ವಿಜಯ್ ಟಾಟಾ ಮತ್ತು ಅವರ ಪತ್ನಿ ಅಮೃತಾ ಟಾಟಾ ತಮ್ಮ ಮಗಳ ಹುಟ್ಟು ಹಬ್ಬದ ಸವಿನೆನಪಿಗಾಗಿ ನ್ಯೂ ಇಂಡಿಯಾ ಎಂಬ ಹೆಸರಿನ ಎನ್ ಜಿಒ ವೊಂದನ್ನು ಆರಂಭಿಸಿ, ಆ ಮೂಲಕ 200 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ!

ಟ್ರಸ್ಟ್ ಗಾಗಿ ಈ ದಂಪತಿ 100 ಕೋಟಿ ರು. ಬೆಲೆಯ 50 ಎಕರೆ ಭೂಮಿಯನ್ನು ಟ್ರಸ್ಟ್ ಗೆ ನೀಡಿದ್ದು, 100 ಕೋಟಿ ರು ಹಣವನ್ನು ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಕೇರ್ ಆಸ್ಪತ್ರೆ ನಿರ್ಮಾಣಕ್ಕೆ ನೀಡಲಾಗುವುದು, ದೇಶಾದ್ಯಂತ ಎಲ್ಲಾ ಕ್ಯಾನ್ಸರ್ ರೋಗಿಗಳು ಬಂದು ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ, ಈ ಆಸ್ಪತ್ರೆಯಲ್ಲಿ 150 ಹಾಸಿಗೆಗಳಿರುತ್ತವೆ. ವಿವಿಧ ಹಂತಗಳಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದ್ದು, ಯುಕೆ ಮೂಲದ ಆರ್ಕಿಟೆಕ್ಟ್ ಮತ್ತು ಎಂಜಿನೀಯರ್ ಗಳು ಈ ಕಟ್ಟಡ ನಿರ್ಮಾಣ ಮಾಡಲಿದ್ದಾರೆ.

ಬಡವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ:-

ಬಡ ಮತ್ತು ಅಶಕ್ತರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶ ಈ ಆಸ್ಪತ್ರೆಯದು. ಇದು ಭಾರತದ ಮೊಟ್ಟಮೊದಲ ಕ್ಯಾಶ್ ಲೆಸ್ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆಯಲಿದೆ. ಈ ಆಸ್ಪತ್ರೆಗೆ ಟಾಟಾ ದಂಪತಿಯೇ ಸ್ವ ಇಚ್ಛೆಯಿಂದ ಹಣ ಹಾಕುತ್ತಿದ್ದು, ಬೇರೆ ಯಾರಿಂದಲೂ ದೇಣಿಗೆ ಪಡೆದಿಲ್ಲ. ಕಿಮೋಥೆರಪಿಯ ಒಂದು ಸಿಟ್ಟಿಂಗ್ ಗೆ ಸುಮಾರು 90,000 ರೂ. ವೆಚ್ಚವಾಗುತ್ತದೆ.

ಇದನ್ನು ಭರಿಸುವುದಕ್ಕೆ ಯಾವ ಬಡವರಿಗೆ ಸಾಧ್ಯ? ಅದಕ್ಕೆಂದೇ ಉಚಿತ ಚಿಕಿತ್ಸೆ ನೀಡುವ ಮಹೋನ್ನತ ಕಾರ್ಯಕ್ಕೆ ಈ ದಂಪತಿ ಕೈಹಾಕಿದ್ದಾರೆ.