inspirational

ಮಗನ ಟಿಕ್‌ಟಾಕ್ ಹುಚ್ಚು – ಸಾಸ್ ಚೆಲ್ಲಿ ಅಮ್ಮನಿಗೆ ಕಣ್ಣೀರು ಬರುವಂತೆ ಮಾಡಿದ ಪುತ್ರ..!

By admin

November 07, 2019

ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗುತ್ತಿದೆ. ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ.

ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದುಕುಳಿತಿದ್ದಾನೆ. ಮಗನ ಆಟಕ್ಕೆ ತಾಯಿ ಎದೆ ಬಡಿತವೇ ನಿಂತಾಂತಗಿ ಭಯಗೊಂಡಿದ್ದರು.

ಮಗ ಟಿಕ್ ಟಾಕ್ ಮಾಡುತ್ತಿರುವ ವಿಷಯ ತಿಳಿದ ತಾಯಿ ಮಗನಿಗೆ ಸರಿಯಾಗಿ ಹೊಡೆದಿದ್ದಾರೆ. ಅಲ್ಲದೆ ಭಯದಿಂದ ಜೋರಾಗಿ ಅಳುತ್ತಾ ಮಗನಿಗೆ ಬೈದಿದ್ದಾರೆ. ತಾಯಿ ಬೈಯುವಾಗ ಯುವಕ ನಗುತ್ತಾ ಚೆಲ್ಲಿರುವಸಾಸ್ ಕ್ಲೀನ್ ಮಾಡಿದ್ದಾನೆ.

ಯುವಕನ ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕನನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.