ಉಪಯುಕ್ತ ಮಾಹಿತಿ

ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಇದನ್ನು ಓದಿ..ಮರೆಯದೇ ಶೇರ್ ಮಾಡಿ..

By admin

May 18, 2017

ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವಿದೆಯೇ…

ಪುಟ್ಟ ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿಗಳನ್ನು ವೀಕ್ಷಿಸುವ ಹವ್ಯಾಸ ಬೆಳೆಸಿಕೊಂಡರೆ ಅಂತಹ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಏರ್ಪಡುವ ಅಪಾಯ ಹೆಚ್ಚು ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಕೇವಲ ಸಕ್ಕರೆ ಕಾಯಿಲೆ ಮಾತ್ರವಷ್ಟೇ ಅಲ್ಲ ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿಗಳನ್ನು ವೀಕ್ಷಿಸುತ್ತಿದ್ದರೆ ಅವರ ಕಣ್ಣಿಗೂ ಗಂಭೀರ ಹಾನಿಯಾಗಲಿದ್ದು, ಮಕ್ಕಳ ಮೆದುಳಿನ ನರಮಂಡಲಕ್ಕೂ ಹಾನಿಯಾಗುತ್ತದೆ ಎಂದು  ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟಿವಿ ಮತ್ತು ಸ್ಮಾರ್ಟ್ ಫೋನ್ ಗಳಿಂದಾಗಿ ಜನರ ಜೀವನ ಶೈಲಿಯೇ ಬದಲಾಗಿ ಹೋಗಿದ್ದು, ಸ್ಮಾರ್ಟ್ ಫೋನ್ ಗಳು ಜನರ ಜೀವನದಲ್ಲಿ ಬೆರೆತು ಹೋಗಿದೆ.

ಇದಕ್ಕೆ ಪೂರಕ  ಎಂಬಂತೆ ರಿಯಾಲಿಟಿ ಷೋಗಳ ಅಬ್ಬರ ಮತ್ತು ಫ್ರೀ ಆ್ಯಪ್ ಗಳ ಆಡಂಬರ ಕೂಡ ಮಕ್ಕಳಲ್ಲಿ ಇಂತಹ ಅಪಾಯಕಾರಿ ಬೆಳವಣಿಗೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಬದಲಾದ ಜೀವನ ಶೈಲಿ ಹಾಗೂ ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಪಾಲನೆ ಅಷ್ಟು ಸುಲಭವಲ್ಲ. ಹೀಗಾಗಿ ಇತ್ತೀಚಿನ ಪೋಷಕರು ಮಕ್ಕಳು ಅತ್ತಾಗ, ಮಕ್ಕಳಿಗೆ ಹಸಿವಾದಾಗ ಸ್ಮಾರ್ಟ್ ಫೋನ್ ತೋರಿಸಿ ಸಮಾಧಾನ ಮಾಡುವಂತಹ  ಪರಿಪಾಠ ತಾನೇ ತಾನಾಗಿ ಬೆಳೆದಿದೆ. ಇದೂ ಕೂಡ ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ. ಇಲ್ಲಿ ಓದಿ :- ನಿಮ್ಮ ಕಣ್ಣುಗಳ ಆರೋಗ್ಯದ ಕಾಳಜಿ ಇದ್ದರೆ ಇದನ್ನು ಓದಿ…..

ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಣೆಯಿಂದಾಗಿ ಮಕ್ಕಳ ಕಣ್ಣಿನ ಮೇಲೆ ಹೆಚ್ಚು ಒತ್ತಡ ಬಿದ್ದು, ಅವುಗಳ ನರಗಳಿಗೆ  ಹಾನಿಯಾಗುತ್ತದೆ. ಅಂತೆಯೇ ಮೆದುಳಿನ ನರಮಂಡಲ ವ್ಯವಸ್ಥೆಯ ಕಾರ್ಯದ ಸಾಮರ್ಥ್ಯದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಒಂದು ಗಂಟೆಗೂ ಅಧಿಕ ಸಮಯ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸಿದರೆ ಸಕ್ಕರೆ ಕಾಯಿಲೆ ಖಂಡಿತಾ :-

ಇನ್ನು ಪ್ರತಿನಿತ್ಯ ಮಕ್ಕಳು ಒಂದು ಗಂಟೆಗೂ ಅಧಿಕ ಸಮಯ ಸ್ಮಾರ್ಟ್ ಫೋನ್ ಮತ್ತು ಟಿವಿ ನೋಡುತ್ತ ಮಗ್ನರಾಗಿದ್ದರೆ ಅಂತಹ ಮಕ್ಕಳಲ್ಲಿ ಖಂಡಿತಾ ಸಕ್ಕರೆ ಕಾಯಿಲೆ ಅಪಾಯ ಹೆಚ್ಚು.

ಸತತವಾಗಿ ಟಿವಿ ಮತ್ತು ಸ್ಮಾರ್ಟ್ ಫೋನ್  ನೋಡುವುದರಿಂದ ಮಕ್ಕಳ ವಯಸ್ಸಿಗೆ ಸಂಬಂಧಿಸಿದ ನೋವುಗಳು ಆರಂಭವಾಗುತ್ತವೆ.

ಇದೇ ಮುಂದುವರೆದರೆ ಮಕ್ಕಳು ಯುವ ಹಂತಕ್ಕೆ ಬರುವ ವೇಳೆಗೆ ಸಕ್ಕರೆ ಕಾಯಿಲೆಗೆ ತುತ್ತಾಗಿರುತ್ತಾರೆ. ಇಂತಹ ಸಾವಿರಾರು ಪ್ರಕರಣಗಳು  ವಿಶ್ವಾದ್ಯಂತ ವರದಿಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈವರೆಗೂ ಮಕ್ಕಳ ದೈಹಿಕ ಚಟುವಟಿಕೆ, ಆಹಾರ ವ್ಯವಸ್ಥೆ ಮತ್ತು ಕುಟುಂಬದ ಆರೋಗ್ಯ ಇತಿಹಾಸದಿಂದ ಮಧುಮೇಹ ಖಾಯಿಲೆಯನ್ನು ಪರಿಗಣಿಸಲಾಗುತ್ತಿತ್ತು. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಸ್ಮಾರ್ಟ್ ಗ್ಯಾಜೆಟ್ ಗಳು  ಕೂಡ ಪರಿಣಾಮ ಬೀರುತ್ತಿವೆ.

ಈ ಬಗ್ಗೆ ತಜ್ಞರು ಸುಮಾರು 4500 ಮಕ್ಕಳ ಜೀವನ ಶೈಲಿಯನ್ನು ಅಧ್ಯಯನ ಮಾಡಿದ್ದು, ಈ ಪೈಕಿ ಹೆಚ್ಚು ಹೊತ್ತು ಸ್ಮಾರ್ಟ್ ಗ್ಯಾಜೆಟ್ ಗಳಾದ ಸ್ಮಾರ್ಟ್ ಫೋನ್, ಟಿವಿ, ಕಂಪ್ಯೂಟರ್, ಗೇಮರ್ ಗಳಲ್ಲಿ ಹೆಚ್ಚು ಹೊತ್ತು ಕಳೆಯುವ  ಮಕ್ಕಳಲ್ಲಿ ರೋಗದ ಅಪಾಯ ಹೆಚ್ಚಾಗಿತ್ತು.

ಇನ್ನು ಈ ಪೈಕಿ ಶೇ.37ರಷ್ಟು ಮಕ್ಕಳು ಮಾತ್ರ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಸ್ಮಾರ್ಟ್ ಗ್ಯಾಜೆಟ್ ಬಳಕೆ ಮಾಡುತ್ತಿದ್ದು, ಇಂತಹ ಮಕ್ಕಳಲ್ಲಿ ರೋಗದ ಅಪಾಯ ಕಡಿಮೆ  ಕಂಡುಬಂದಿದೆ.

ಇನ್ನು ಶೇ.28ರಷ್ಟು ಮಕ್ಕಳು 1-2 ಗಂಟೆ ಅವಧಿ ಸ್ಮಾರ್ಟ್ ಗ್ಯಾಜೆಟ್ ಬಳಕೆ ಮಾಡಿದರೆ, ಶೇ.13 ರಷ್ಟು ಮಕ್ಕಳು 2-3 ಗಂಟೆ ಅವಧಿಯವರೆಗೆ ಮತ್ತು ಶೇ.18ರಷ್ಟು ಮಕ್ಕಳು 3-4 ಗಂಟೆ ಹೊತ್ತು ಸ್ಮಾರ್ಟ್ ಗ್ಯಾಜೆಟ್ ಬಳಕೆ  ಮಾಡುತ್ತಿದ್ದರು ಎಂದು ತಜ್ಞರು ಹೇಳಿದ್ದಾರೆ.

ಈ ಪೈಕಿ 3-4 ಗಂಟೆ ಹೊತ್ತು ಸ್ಮಾರ್ಟ್ ಗ್ಯಾಜೆಟ್ ಬಳಕೆ ಮಾಡುವ ಮಕ್ಕಳಲ್ಲಿ ಟೈಪ್-2 ಸಕ್ಕರೆ ಕಾಯಿಲೆ ಅಪಾಯ ಹೆಚ್ಚಿತ್ತು ಎಂದು ವೈದ್ಯರು ತಿಳಿಸಿದ್ದಾರೆ.