ಹೌದು, ಸುನಿತಾ ಮಂಜುನಾಥ್ ರವರ ನೂತನ ಪ್ರಯತ್ನದ ಫಲವಾಗಿ ರಾಧಾಕೃಷ್ಣ ಪಬ್ಲಿಕ್ ಶಾಲೆಯ ತುಂಬಾ ಹಳ್ಳಿಯ ವಾತಾವರಣ ನಿರ್ಮಾಣವಾಗಿತ್ತು..
ಆಧುನಿಕ ಜೀವನ ಶೈಲಿಯಲ್ಲಿ ಸಂಸ್ಕೃತಿ ಮರೆತು ಹೋಗಿರುವ ಸಂದರ್ಭವಿದು.. ಆದರೆ ತಮ್ಮ ಶಾಲೆಯ ಮಕ್ಕಳಿಗೆ ಹಳ್ಳಿಯ ಜೀವನ.. ಅಲ್ಲಿನ ರೈತರು.. ಗೋಮಾತೆ, ಹಳ್ಳಿಗಳಲ್ಲಿ ಆಚರಿಸುವ ಹಬ್ಬದ ರೀತಿ ನೀತಿಗಳ ಪರಿಚಯ ಮಾಡಲು ನಾಗಶೆಟ್ಟಿಹಳ್ಳಿಯ ತಮ್ಮ ಶಾಲೆಯಲ್ಲಿ ಅದ್ಭುತವಾಗಿ ಹಳ್ಳಿಯನ್ನೇ ಮರುನಿರ್ಮಾಣ ಮಾಡಿದ್ದರು..
ಶಾಲೆಯ ತುಂಬೆಲ್ಲಾ ಸಾಂಸ್ಕೃತಿಕ ಉಡುಗೆ ತೊಡುಗೆಯಲ್ಲಿ ಮಿಂಚಿದ ಮಕ್ಕಳು.. ಅಲ್ಲಲ್ಲಿ ಕಬ್ಬಿನ ರಾಶಿ.. ತರಕಾರಿ ಅಂಗಡಿಗಳ ಅಣುಕುಗಳು… ಭಕ್ತಿಯಿಂದ ನಡೆದ ಗೋಪೂಜೆ.. ಅಂಗಳ ತುಂಬೆಲ್ಲಾ ಸಗಣಿಯಿಂದ ತಾರಸಿ ಬಿಟ್ಟ ರಂಗೋಲಿಗಳು.. ಮಡಿಕೆಯಲ್ಲಿ ಅಲ್ಲೇ ತಯಾರು ಮಾಡಿದ ಪೊಂಗಲ್.. ನಿಜವಾಗಿಯೂ ನೋಡಲೆರೆಡು ಕಣ್ಣು ಸಾಲದು..
ಶಿಕ್ಷಕರ ಸಹಕಾರದಿಂದ ಶಾಲೆಯನ್ನು ಹಳ್ಳಿಯ ರೀತಿ ಸಿಂಗರಿಸಿ ಸಗಣಿಯಿಂದ ಸಾರಸಿ, ರಂಗೋಲಿಯನ್ನು ಹಾಕಿ, ಮಾವಿನ ತೋರಣ, ಬಾಳೆಕಂದುಗಳನ್ನು ಕಟ್ಟಿ, ಕೃತಕ ಸಂತೆಯನ್ನು ಸೃಷ್ಟಿಸಿದ್ದು ನೋಡುಗರ ಮನ ತಣಿಸುವುದರ ಜೊತೆಗೆ ನಮ್ಮ ಹಳ್ಳಿಯ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತಿತ್ತು..
*ಸುಗ್ಗಿ ಕಣದ ನಿರ್ಮಾಣ*
ರೈತರು, ದೇವರೆಂದು ಪೂಜಿಸುವ ಸುಗ್ಗಿ ರಾಶಿಯನ್ನು ನಿರ್ಮಾಣ ಮಾಡಿ ಅದಕ್ಕೆ ಪೂಜೆ ಮಾಡಿದ್ದು ವಿಶೇಷವಾಗಿತ್ತು..
*ಸಾಮೂಹಿಕ ಪೊಂಗಲ್*
ಇಷ್ಟೇ ಅಲ್ಲದೇ ಸುನಿತಾ ಮಂಜುನಾಥ್ ರವರು ಶಾಲಾ ಶಿಕ್ಷಕರೊಡಗೂಡಿ ಸಾಮೂಹಿಕವಾಗಿ ಶಾಲಾ ಆವರಣದಲ್ಲೇ ಪೊಂಗಲ್ ಅನ್ನು ತಯಾರು ಮಾಡಿ ಮಕ್ಕಳಿಗೆ ಬಡಿಸಿದರು..
*ಗೋ ಪೂಜೆಯ ಮಹತ್ವ*
ಕೃತಕವಾಗಿ ನೆಲ್ಲು ಹುಲ್ಲಿನ ಗುಡಿಸಲನ್ನು ನಿರ್ಮಾಣ ಮಾಡಿ ಅಲ್ಲಿ ಹಬ್ಬದ ಅಂಗವಾಗಿ ಗೋಮಾತೆಗೆ ಭಕ್ತಿಯಿಂದ ಪೂಜೆಯನ್ನು ಮಾಡಿ ಮಕ್ಕಳಿಗೆ ಕಾಮಧೇನು ವಿನ ಮಹತ್ವವನ್ನು ತಿಳಿಸಿಕೊಟ್ಟರು..
*ಮುಖ್ಯ ಅತಿಥಿಯಾಗಿ ಪ್ರಥಮ್*
ಸಾಮಾಜಿಕ ಕೆಲಸಗಳಲ್ಲಿ ಯಾವತ್ತಿದ್ದರೂ ಮುಂದು ಎನಿಸಿಕೊಳ್ಳುವ ಪ್ರಥಮ್ ರವರು ಸುನಿತಾ ಮಂಜುನಾಥ್ ರವರ ಮಾತಿಗೆ ಓಗೊಟ್ಟು ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಕ್ಕಳಿಗೆ ಅರಿವು ಮೂಡಿಸುತ್ತಿರುವ ರೀತಿಯನ್ನು ನೋಡಿ ಖುಷಿ ಪಟ್ಟರು..
*ವಿಭಿನ್ನ ಪ್ರಯತ್ನಕ್ಕೆ ನಮ್ಮದೊಂದು ಸಲಾಮ್*
ಈ ರೀತಿಯಾದ ಒಂದು ಅದ್ಭುತವಾದ ಪರಿಕಲ್ಪನೆಯನ್ನು ವಾಸ್ತವ ರೂಪಕ್ಕೆ ತಂದು ಮಕ್ಕಳಿಗೆ ನಮ್ಮ ರೈತರ ಜೀವನ ಶೈಲಿಯನ್ನು ತೋರಿಸುವುದರ ಜೊತೆಗೆ ಸಂಕ್ರಾಂತಿ ಹಬ್ಬದ ಸುಗ್ಗಿ ಪೂಜೆಯ ಮಹತ್ವವನ್ನು ತಿಳಿಸಿಕೊಟ್ಟ *ಸುನಿತಾ ಮಂಜುನಾಥ್* ರವರಿಗೆ ನಮ್ಮ ಕಡೆಯಿಂದ ಧನ್ಯವಾದಗಳು..