Health

ಮಂಡಿ ಮತ್ತು ಕೀಲು ನೋವು ಕಡಿಮೆ ಮಾಡುವ 9 ಆಹಾರಗಳು ಯಾವುದು ಗೊತ್ತಾ ,..!

By admin

September 16, 2019

ಮಂಡಿನೋವು ಬಂದರೆ ಚಿಕಿತ್ಸೆ ಜತೆಗೆ ಆಹಾರಕ್ರಮದ ಬಗ್ಗೆ ಗಮನ ಹರಿಸಿದರೆ ಬೇಗನೆ ಗುಣಮುಖರಾಗಬಹುದು. ಇಲ್ಲಿ ಮಂಡಿ ನೋವು ಕಡಿಮೆ ಮಾಡುವ 9 ಆಹಾರಗಳ ಬಗ್ಗೆ ಹೇಳಿದ್ದೇವೆ, ಇವುಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ ಆರೋಗ್ಯ ಮರಳಿ ಪಡೆಯಿರಿ.ಮಧ್ಯ ವಯಸ್ಸು ದಾಟುತ್ತಿದ್ದಂತೆ ಮಂಡಿ ನೋವು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಡೆಂಗೆ, ಚಿಕನ್‌ಗುನ್ಯಾ ಈ ರೀತಿಯ ಕಾಯಿಲೆಗಳು ಬಂದಾಗ ಕೂಡ ಮಂಡಿ ನೋವಿನ ಸಮಸ್ಯೆ ಕಾಡುವುದು.

ಮಂಡಿ ನೋವಿನ ಸಮಸ್ಯೆ ಬಂದಾಗ ಚಿಕಿತ್ಸೆ ಜತೆ ಡಯಟ್‌ ಕಡೆ ಗಮನ ನೀಡಿದರೆ ಬೇಗನೆ ಈ ಸಮಸ್ಯೆಯಿಂದ ಗುಣಮುಕ್ತರಾಗಬಹುದು.

ಮಂಡಿ ನೋವು ಕಡಿಮೆಮಾಡುವಲ್ಲಿ ಈ ಆಹಾರಗಳು ಪರಿಣಾಮಕಾರಿ:

ಪಾಲಾಕ್ : ನಿಮ್ಮ ದಿನನಿತ್ಯದ ಆಹಾರದಲ್ಲಿ ಪಾಲಾಕ್‌ ಸೇರಿಸಿ. ಪಾಲಾಕ್‌ ಸಂಧಿವಾತ, ಮಂಡಿ ನೋವು ಕಡಿಮೆ ಮಾಡುವಲ್ಲಿ ಸಹಕಾರಿ.

ಮೀನು : ಸಾಲಮೋನ್‌, ತುನ ಈ ಮೀನಿನಲ್ಲಿರುವ ಎಣ್ಣೆಯಂಶ ಹಾಗೂ ಒಮೆಗಾ 3 ಕೊಬ್ಬಿನಂಶ, ಫ್ಯಾಟಿ ಆ್ಯಸಿಡ್ ಇವುಗಳು ಮಂಡಿನೋವು ಕಡಿಮೆ ಮಾಡುವಲ್ಲಿ ಸಹಕಾರಿ. ಇದರಲ್ಲಿ ಅತ್ಯಧಿಕ ವಿಟಮಿನ್ ಡಿ ಇದ್ದು, ಸಂಧಿವಾತ ಇರುವವರು ಮೀನನ್ನು ಡಯಟ್‌ನಲ್ಲಿ ಸೇರಿಸಿದರೆ ಒಳ್ಳೆಯದು.

ವೆಜ್‌ ತಿನ್ನುವವರು ಫಿಶ್‌ ಆಯಿಲ್‌ ತೆಗೆದುಕೊಳ್ಳುವ ಮೂಲಕ ಮಂಡಿನೋವು ಕಡಿಮೆ ಮಾಡಿಕೊಳ್ಳಬಹುದು.

ಡ್ರೈ ಫ್ರೂಟ್ಸ್ : ವಾಲ್‌ನಟ್‌, ಪಿಸ್ತಾ, ಬಾದಾಮಿ ಇವುಗಳಲ್ಲಿ ಕ್ಯಾಲ್ಸಿಯಂ, ಮೆಗ್ನಿಷಿಯಂ, ವಿಟಮಿನ್ ಇ, ಪ್ರೊಟಿನ್ ಇವುಗಳು ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚುವುದು, ಅಲ್ಲದೆ ಡ್ರೈ ಫ್ರೂಟ್ಸ್‌ನಲ್ಲಿರುವ ಒಮೆಗಾ 3 ಕೊಬ್ಬಿನಂಶ ಮಂಡಿನೋವು ಕಡಿಮೆ ಮಾಡುವಲ್ಲಿ ಸಹಕಾರಿ.

ಕೇಸರಿ : ಮಂಡಿನೋವು ಇರುವವರು ಹಾಲಿಗೆ ಕೇಸರಿ ಹಾಕಿ ತಿಂದರೆ ತುಂಬಾ ಒಳ್ಳೆಯದು. ಕೇಸರಿಯಲ್ಲಿ ಉರಿಊತ ಕಡಿಮೆ ಮಾಡುವ ಸಾಮರ್ಥ್ಯ ಇದೆ.

ಬ್ರೊಕೋಲಿ : ಬ್ರೊಕೋಲಿ ಸಲಾಡ್‌ ಜತೆ ತಿನ್ನಿ, ಮಂಡಿನೋವು ಇರುವವರು ತಮಮ್ ಡಯಟ್‌ನಲ್ಲಿ ಸೇರಿಸಬೇಕಾದ ಆಹಾರಗಳಲ್ಲಿ ಇದು ಕೂಡ ಒಂದು.

ಸಿಟ್ರಸ್‌ ಹಣ್ಣುಗಳು : ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಿಟ್ರಸ್ ಹಣ್ಣುಗಳು ಪ್ರಯೋಜನಕಾರಿ. ದ್ರಾಕ್ಷಿ, ಕಿತ್ತಳೆ, ಕಿವಿ ಹಣ್ಣು ಇವುಗಳಲ್ಲಿ ವಿಟಮಿನ್ ಸಿ ಅಧಿಕವಿದೆ.

ಚೆರ್ರಿ ಹಣ್ಣು : ಸಿಹಿಯಿಲ್ಲದ ಚೆರ್ರಿ ಜ್ಯೂಸ್‌ ಸಂಧಿವಾತ ಇರುವವರು ಕುಡಿಯುವುದು ಒಳ್ಳೆಯದು. ಇವುಗಳಲ್ಲಿರುವ anthocyanins ಅಂಶ ಉರಿ ಊತ ಕಡಿಮೆ ಮಾಡುವುದು.

ಬೆಳ್ಳುಳ್ಳಿ : ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಮಂಡಿ ನೋವು ಕಡಿಮೆ ಮಾಡುವಲ್ಲಿ ಸಹಕಾರಿ.

ರೆಡ್‌ ಬೀನ್ಸ್ : ರೆಡ್‌ ಬೀನ್ಸ್‌ನಲ್ಲಿ ವಿಟಮಿನ್‌ ಸಿ, ಪ್ರೊಟೀನ್‌, ಫಾಲಿಕ್‌ ಆಮ್ಲ, ಕಬ್ಬಿಣದಂಶ, ಮ್ಯಾಗ್ನಿಷಿಯಂ ಮತ್ತು ಪೊಟಾಷ್ಯಿಯಂ ಇವೆಲ್ಲಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ.