ಮಂಗಳವಾರ, 24/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಮೇಷ:–
ಅನಿರೀಕ್ಷಿತ ಸಂಚಾರ. ಹೂವು ವ್ಯಾಪಾರಿಗಳಿಗೆ ಲಾಭ.ನಿರುದ್ಯೋಗಿಗಳಿಗೆ ಶುಭವಾರ್ತೆ. ಬಂದುಗಳ ಆಗಮನ. ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಪಡೆಯುತ್ತೀರಿ.
ವೃಷಭ :-
ಮನೆಯಲ್ಲಿ ದೇವತಾಕಾರ್ಯಗಳು ನಡೆಯಲಿವೆ. ಮನೆಯವರ ಹಾಗೂ ಸ್ನೇಹಿತರ ಸಹಕಾರ ಇರಲಿದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.ನಿಮ್ಮ ಹಣದ ಖರ್ಚಿನ ಬಗ್ಗೆ ಜಾಗ್ರತೆ ಇರಲಿ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ.ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
ಮಿಥುನ:–
ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಆದಾಯ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ವೃತ್ತಿರಂಗದಲ್ಲಿ ಪ್ರಗತಿ. ದೂರದ ಪ್ರಯಾಣದಿಂದ ಅತಿಯಾದ ಆಯಾಸ. ಮಕ್ಕಳ ಆರೋಗ್ಯದಲ್ಲಿ ಏರುಪೇರು. ಭೂಮಿ, ಗೃಹ ಖರೀದಿಗಳಿಗೆ ಅನುಕೂಲವಾಗಲಿದೆ.
ಕಟಕ :-
ದಂಪತಿಗಳಿಗೆ ಸಂತಾನಕ್ಕೆ ಸಮಸ್ಯೆ ಬರುವ ಸಾಧ್ಯತೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ವ್ಯಾಪಾರ, ವ್ಯವಹಾರಗಳಲ್ಲಿ ಜಾಗ್ರತೆ ಇರಲಿ. ಸ್ಥಿರಾಸ್ಥಿ ಕೊಂಡುಕೊಳ್ಳುವ ಪ್ರಯತ್ನ. ಪ್ರಯಾಣದಿಂದ ಅನುಕೂಲ. ಬಂಧುಗಳ ಭೇಟಿಯಾಗುವ ಸಂಭವ.
ಸಿಂಹ:–
ಹಣದ ಹೂಡಿಕೆಯಲ್ಲಿ ಜಾಗ್ರತೆ. ಸಾಮಾಜಿಕ ಕಾರ್ಯವೊಂದರ ನೇತೃತ್ವ ವಹಿಸುವ ಸಾಧ್ಯತೆ.ನೀವು ನಿಮ್ಮ ಆತ್ಮವಿಶ್ವಾಸದಿಂದ ಏನನ್ನಾನದರು ಗಳಿಸಲು ಬಯಸುತ್ತೀರಿ. ದಾಯಾದಿಗಳ ಕಿರಿಕಿರಿಯಿಂದ ಕೆಲಸಕಾರ್ಯಗಳು ವಿಳಂಬ.
ಕನ್ಯಾ :-
ವಿವಿಧ ರೀತಿಯಲ್ಲಿ ಧನಾಗಮನ. ಕೆಲಸ ಕಾರ್ಯಗಳಲ್ಲಿ ಯಾವುದೇ ತೊಂದರೆ ಇರಲಾರದು. ವಿದ್ಯಾರ್ಥಿಗಳು ಹೆಚ್ಚಿನ ಭವಿಷ್ಯಕ್ಕಾಗಿ ಪರದೇಶಕ್ಕೆ ಹೋಗುವ ಸಾಧ್ಯತೆ. ಭೂಮಿ, ಮನೆಯನ್ನು ಖರೀದಿಸುವ ಯೋಚನೆ ಮಾಡಲಿದ್ದೀರಿ.ನಿಮ್ಮ ವೈವಾಹಿಕ ಜೀವನ ಬೆಳಗಲಿದೆ.
ತುಲಾ: –
ಸಂಚಾರದಲ್ಲಿ ಆಗಾಗ ಅಡಚಣೆ. ಸಂಗಾತಿಯ ಸಲಹೆ ಸ್ವೀಕರಿಸಿ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ನಿಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿಟ್ಟು ಕೆಲಸ ಮಾಡಿ ಯಶಸ್ಸು ನಿಮ್ಮದಾಗಲಿದೆ.ನಿಮ್ಮ ಆರ್ಥಿಕ ವ್ಯವಹಾರದ ಬಗ್ಗೆ ಜಾಗ್ರತೆ ಇಎಅಲಿ. ಹೊಸ ಸ್ನೇಹಿತರು ಅಥವಾ ಸಂಗಾತಿ ಸಿಗುವ ಸಾಧ್ಯತೆ.
ವೃಶ್ಚಿಕ :-
ಮಾತಿನಿಂದ ನಿಮ್ಮ ಕಾರ್ಯ ಸಾಧನೆಯಾಗುತ್ತದೆ. ನೀವು ಜೀವನದ ಸವಾಲುಗಳನ್ನು ವೇಗವಾಗಿ ಎದುರಿಸಬೇಕಿದೆ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶ ನಿಮ್ಮದಾಗಲಿದೆ. ಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸುವ ಸಾಧ್ಯತೆ.
ಧನಸ್ಸು: –
ಅಧಿಕಾರಿ ವರ್ಗದವರಿಗೆ ಉನ್ನತ ಹುದ್ದೆಯ ಲಾಭ ಸಿಗಲಿದೆ. ಆರ್ಥಿಕ ಸಮಸ್ಯೆ ಇರಲಿದೆ. ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಯಶಸ್ಸು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ದೇಹಾರೋಗ್ಯದ ಬಗ್ಗೆ ಗಮನ ಇರಲಿ. ಮನೆಯವರ ಸಹಕಾರ ದೊರೆಯಲಿದೆ.
ಮಕರ :-
ದೂರ ಸಂಚಾರದ ಬಗ್ಗೆ ಹೆಚ್ಚಿನ ಜಾಗ್ರತೆ ಅವಶ್ಯಕ. ಗುಣವಂತರ ಸಹವಾಸ.ನಿಮ್ಮ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.ಮಾನಸಿಕ ತೊಳಲಾಟ.ವೈವಾಹಿಕ ಜೀವನ ಉತ್ತಮ.
ಕುಂಭ:-
ಆರೋಗ್ಯ ಚೆನ್ನಾಗಿದ್ದರೂ ಜಾಗ್ರತೆ ಅಂತೂ ಇರಲೇಬೇಕು. ಪ್ರೀತಿಪಾತ್ರರೊಬ್ಬರ ಬಗ್ಗೆ ಉದಾಸೀನ ತೋರುವುದು ಬೇಡ. ಹೆಂಡತಿಯಿಂದ ಶುಭಪ್ರದವಾದ ವಿಷಯ ಕೇಳುವಿರಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ. ನಿಮ್ಮ ಮಾತುಗಳ ಮೇಲೆ ಗಮನವಿರಲಿ. ಮಿತ್ರರ ಸಹಕಾರದಿಂದ ಕಾರ್ಯಸಿದ್ಧಿ.
ಮೀನ :-
ಆರ್ಥಿಕ ಕೊರತೆಗಳು ಇದ್ದರೂ, ಹಣದ ಆಗಮನದಿಂದ ಪರಿಹಾರ ಸಿಗಲಿದೆ. ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನ ಅಗತ್ಯ. ಸಂಗಾತಿಯ ಕಡೆಯಿಂದ ಉತ್ತಮ ಸಹಕಾರ. ಉತ್ತಮ ಮಾತುಗಳಿಂದ ಸ್ನೇಹ ಸಂಪಾದನೆ.