ಇಂದು ಮಂಗಳವಾರದ, 13/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಮೇಷ:–
ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ಸೋಮಾರಿತನದಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆ. ಸಾಂಸಾರಿಕವಾಗಿ ಸುಖ,ಸಹಕಾರ. ಹಣಕಾಸಿನ ಸ್ಥಿತಿ ಉತ್ತಮ. ಪ್ರೀತಿಪಾತ್ರರ ಆಗಮನ. ಸಂಚಾರದ ಸಾಧ್ಯತೆ.
ವೃಷಭ :-
ಆರ್ಥಿಕವಾಗಿ ಧನಾಗಮನ.ಕೆಲಸ ಕಾರ್ಯಗಳಲ್ಲಿ ಮಂದಗತಿ. ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ. ಆರೋಗ್ಯದಲ್ಲಿ ತೊಂದರೆ. ನೀವಾಡುವ ಮಾತು ಪರರಿಗೆ ನೋವುಂಟು ಮಾಡುವ ಸಾಧ್ಯತೆ ಇರುತ್ತದೆ, ಆದ್ದರಿಂದ ನೀವು ಆಡುವ ಮಾತಿನಲ್ಲಿ ಜಾಗ್ರತೆ ಇರಲಿ.
ಮಿಥುನ:–
ವ್ಯವಹಾರದಲ್ಲಿ ಹಾನಿಯ ಸಾಧ್ಯತೆ. ಸಾಂಸಾರಿಕ ಸಂಬಂಧಗಳ ಬಗ್ಗೆ ಜಾಗ್ರತೆ. ಮನೆಯವರ ನೆರವಿನಿಂದ ನೆಮ್ಮದಿ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ,ಆದರೆ ಖರ್ಚಿನ ಬಗ್ಗೆ ಜಾಗ್ರತೆ ಇರಲಿ. ಸಾಲ ಪಡೆದ ಸ್ನೇಹಿತರು ಸಾಲ ಮರುಪಾವತಿ ಮಾಡುವ ಸಾಧ್ಯತೆ.
ಕಟಕ :-
ಹಣದ ವ್ಯವಹಾರದಲ್ಲಿನ ಅನುಮಾನ ಶಮನವಾಗಲಿದೆ. ಮಿತ್ರರ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ. ಅವಿವಾಹಿತರಿಗೆ ವಿವಾಹದ ಪ್ರಸ್ತಾವ.ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಹಾಕಿಯಾದ ಬಂಡವಾಳಕ್ಕೆ ಸಂಚಕಾರ ಬರುವ ಸಾಧ್ಯತೆ.
ಸಿಂಹ:–
ವ್ಯಾಪಾರದಲ್ಲಿ ನಿರೀಕ್ಷೆಗೆ ಮೀರಿದ ಲಾಭ. ವಾಹನ ಚಾಲಕರಿಗೆ ಆರ್ಥಿಕವಾಗಿ ಲಾಭ.ಮದ್ಯಪಾನದಿಂದ ಅನಾಹುತ. ವೈವಾಹಿಕ ಜೀವನ ಉತ್ತಮ. ಸಂಚಾರದಲ್ಲಿ ಸೌಖ್ಯ. ಬ್ಯಾಂಕಿಂಗ್ ವ್ಯವಹಾರದಲ್ಲಿ ಜಾಗ್ರತೆ ಇರಲಿ. ಆದಾಯದ ಉತ್ತಮ ಹರಿವು.
ಕನ್ಯಾ :-
ವ್ಯಾಪಾರದಲ್ಲಿ ಲಾಭ. ಆರ್ಥಿಕವಾಗಿ, ದೈಹಿಕವಾಗಿ ಮಾನಸಿಕ ವಿಚಾರದಲ್ಲಿ ಪ್ರಗತಿ. ನಿಮ್ಮ ಆತ್ಮವಿಶ್ವಾಸವು ನಿಮಗೆ ಹೆಚ್ಚಿನ ಧನಲಾಭವನ್ನು ತಂದುಕೊಡುವುದು. ಮನೆಯಲ್ಲಿ ಶುಭಸಮಾರಂಭಕ್ಕಾಗಿ ಓಡಾಟ. ಕೆಲಸದ ಸ್ಥಳದಲ್ಲಿ, ನಿರೀಕ್ಷಿತ ಫಲಿತಾಂಶ.
ತುಲಾ: –
ಆನಾರೋಗ್ಯ ಕಾಡಲಿದೆ.ವ್ಯಾಪಾರದಲ್ಲಿ ಗ್ರಾಹಕರೊಂದಿಗೆ ಕಲಹ. ಕುಟುಂಬ ಸದಸ್ಯರಲ್ಲಿ ರಕ್ತದೊತ್ತಡದಂತಹ ವ್ಯಾಧಿ ಕಾಡುವ ಸಾಧ್ಯತೆ. ಸಾಂಸಾರಿಕವಾಗಿ ಬಂಧುಮಿತ್ರರ ಆಗಮನ.ಕೆಲಸದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಮುನ್ನಡೆ. ದುಂದುವೆಚ್ಚಕ್ಕೆ ಕಡಿವಾಣ ಇರಲಿ. ವೃಥಾ ಸುಮ್ಮನೆ ಕೆಲವು ಆರೋಪಗಳು.
ವೃಶ್ಚಿಕ :-
ಲೇವಾದೇವಿ ವ್ಯವಹಾರದಲ್ಲಿ ಅಧಿಕ ಲಾಭ. ಆಸ್ತಿ ಕಲಹದಲ್ಲಿ ಸೋಲು. ದೇಹಾರೋಗ್ಯದ ಬಗ್ಗೆ ಗಮನ ಇರಲಿ. ಕಾರ್ಯಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳ ಕಿರಿಕಿರಿ. ಪ್ರೇಮ ಸಂಬಂಧದಲ್ಲಿರುವವರು ಹೆಚ್ಚು ಗಮನ ಇರಲಿ.
ಧನಸ್ಸು: –
ಸ್ವಯಂ ಉದ್ಯೋಗ ಕೈಗೊಳ್ಳುವ ಯೋಜನೆ. ದೇಹಾರೋಗ್ಯದಲ್ಲಿ ಉದಾಸೀನತೆ ಬೇಡ. ಶುಭವಾರ್ತೆ ಬರಲಿದೆ. ನಿಮ್ಮ ಬಾಳಸಂಗಾತಿಯಲ್ಲಿ ಕೆಲವು ಅನಾರೋಗ್ಯ ಅಥವಾ ವಾಗ್ವಾದಗಳು ಉಂಟಾಗಬಹುದು. ಧನಾಗಮನದಿಂದ ಹೆಚ್ಚಿನ ಸಮಸ್ಯೆ ಇಲ್ಲ.
ಮಕರ :-
ಬ್ಯಾಂಕ್ ವ್ಯವಹಾರಗಳಲ್ಲಿ ಅಪನಂಬಿಕೆ. ಅನ್ಯ ಮನಸ್ಥಿತಿಯಿಂದ ಹೊರಬನ್ನಿ. ದುಡಿಮೆ ಮಾಡಲು ಹಲವು ದಾರಿಗಳಿವೆ. ಅಧಿಕಾರಿಗಳೊಂದಿಗೆ ವಾಗ್ವಾದ.ಆರೋಗ್ಯದಲ್ಲಿ ಜಾಗ್ರತೆ ಇರಲಿ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಬಾಂಧವ್ಯದ ಭಾವ.
ಕುಂಭ:-
ವಿದ್ಯಾಭ್ಯಾಸದಲ್ಲಿ ಪ್ರಗತಿ. ಅಸಾಧ್ಯ ಕೆಲಸವೊಂದನ್ನು ಮಾಡಲೀದ್ದೀರಿ. ವಿವಾಹ ಯೋಗ್ಯ ವಧು, ವರರಿಗೆ ಕಂಕಣಭಾಗ್ಯ. ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ. ದೀರ್ಘ ಪ್ರಯಾಣದ ಸಾಧ್ಯತೆ.ನಿರುದ್ಯೋಗಿಗಳಿಗೆ ಹಲವಾರು ಅವಕಾಶ.ಸಂಚಾರದಲ್ಲಿ ಜಾಗ್ರತೆ. ಆರೋಗ್ಯದ ಸ್ಥಿತಿ ಉತ್ತಮ.
ಮೀನ :-
ಉದ್ಯೋಗ ರಂಗದಲ್ಲಿ ಯಶಸ್ಸು. ಹಳೆಯ ಮಿತ್ರರ ಭೇಟಿಯಿಂದ ಸಮಸ್ಯೆ. ಅತಿಯಾದ ಕೆಲಸದಿಂದ ದೇಹಾಲಸ್ಯ. ಸಾಂಸಾರಿಕವಾಗಿ ಸುಖ ಸಮಾಧಾನ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ.