ಕ್ರೀಡೆ

ಭಾರತ ಅಂಡರ್ 19 ವಿಶ್ವಕಪ್ ಚಾಂಪಿಯನ್:ಬಗ್ಗುಬಡಿದ ದ್ರಾವಿಡ್ ಯುವ ಪಡೆ..!ತಿಳಿಯಲು ಈ ಲೇಖನ ಓದಿ..

By admin

February 03, 2018

ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ  ಗೆಲುವು ಸಾಧಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಟೀಮ್ ಇಂಡಿಯಾ ನಾಲ್ಕನೇ ಬಾರಿಗೆ ಕಿರಿಯರ ವಿಶ್ವಕಪ್ ಎತ್ತಿ ಹಿಡಿದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 47.2 ಓವರುಗಳಲ್ಲಿ ಭಾರತ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 216 ರನ್ ಗಳಿಗೆ ಆಲೌಟ್ ಆಯಿತು..

ಆಸ್ಟ್ರೇಲಿಯಾ ಪರವಾಗಿ ಜೋನಾಥನ್ ಮೆರ್ಲೊ 76, ಪರಮ್ ಉಪ್ಪಲ್ 34 ಜ್ಯಾಕ್ ಎಡ್ವಾರ್ಡ್ಸ್ 28 ರನ್ ಗಳಿಸಿದರು. ಭಾರತದ ಇಶಾನ್ ಪೊರೆಲ್, ಶಿವಾ ಸಿಂಗ್, ಕಮಲೇಶ್ ನಗರಕೋಟಿ, ಅನುಕೂಲ್ ರಾಯ್ ತಲಾ 2 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕ ಬ್ಯಾಟ್ಸಮನ್ ಗಳಾದ ಪೃಥ್ವಿ ಶಾ ಹಾಗೂ ಮಂಜೋತ್ ಕಾಲ್ರಾ ಉತ್ತಮ ಆರಂಭ ಒದಗಿಸಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಮಂಜೋತ್ ಕಾಲ್ರಾ (101) ಅಜೇಯ ಶತಕ ಬಾರಿಸಿದರು. ನಾಯಕ ಪೃಥ್ವಿ ಶಾ 29, ಶುಭಮನ್ ಗಿಲ್ 31, ಹಾರ್ವಿಕ್ ದೇಸಾಯಿ 47 ರನ್ ಗಳಿಸಿದರು. ಭಾರತ 38.5 ಓವರುಗಳಲ್ಲಿ ಗುರಿಯನ್ನು ತಲುಪಿ ಭರ್ಜರಿ ಜಯ ಗಳಿಸಿತು.