; ಅರ್ಜಿ ಆಹ್ವಾನಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಟ್ರೇನಿ ಇಂಜಿನಿಯರ್ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.ವಿದ್ಯಾರ್ಹತೆಬಿಇ / ಬಿ.ಟೆಕ್ ವಿದ್ಯಾರ್ಹತೆಯನ್ನು ಸಿವಿಲ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಕಂಮ್ಯೂನಿಕೇಷನ್ , ಇಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಂಮ್ಯೂನಿಕೇಷನ್ ವಿಭಾಗಗಳಲ್ಲಿ ಪಡೆದಿರಬೇಕು.ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ರೂ.500,
ಟ್ರೇನಿ ಇಂಜಿನಿಯರ್ ಹುದ್ದೆಗಳಿಗೆ ರೂ.200. ಅಪ್ಲಿಕೇಶನ್ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬಹುದು.ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 28 ವರ್ಷ, ಟ್ರೇನಿ ಇಂಜಿನಿಯರ್ ಹುದ್ದೆಗಳಿಗೆ ಗರಿಷ್ಠ 25 ವರ್ಷವನ್ನು ದಿನಾಂಕ 01-09-2020 ಕ್ಕೆ ಮೀರಿರಬಾರದು. ವರ್ಗವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಈ ಹುದ್ದೆಗಳನ್ನು ಎರಡು ವರ್ಷಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರದಲ್ಲಿ ಪ್ರಾಜೆಕ್ಟ್ ಅಗತ್ಯತೆಗೆ ಅನುಗುಣವಾಗಿ ಮತ್ತೆ ಎರಡು ವರ್ಷಗಳ ಕಾಲ ಉದ್ಯೋಗ ಅವಧಿ ಮುಂದೂಡುವ ಅವಕಾಶ ಇರುತ್ತದೆ.