ಆಧ್ಯಾತ್ಮ

ಭಾರತೀಯ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹೀಗೆ ಇದ್ದರೆ ಧನ ಪ್ರಾಪ್ತಿ ಸಿಗುತ್ತದೆ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

By admin

April 12, 2018

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಭಾರತದ ವಾಸ್ತು ಶಾಸ್ತ್ರ ಬಹಳ ಪುರಾತನವಾದುದು. ಇದು ಅಪ್ಪಟ ವೈಜ್ಞಾನಿಕ ಶಾಸ್ತ್ರ ಎನ್ನುವ ಅಭಿಪ್ರಾಯಗಳಿವೆ. ನಮ್ಮ ನಡವಳಿಕೆಗಳು, ಸ್ವಭಾವಗಳು ಈ ಶಕ್ತಿಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗಾಗಿ, ಬಹುತೇಕ ಭಾರತೀಯರೆಲ್ಲರೂ ಈಗ ವಾಸ್ತು ಶಾಸ್ತ್ರದ ಮೊರೆ ಹೋಗುವುದು ಸಾಮಾನ್ಯವಾಗಿದೆ. ಭಾರತೀಯ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹೀಗೆ ಇದ್ದರೆ ಧನ ಪ್ರಾಪ್ತಿ ಸಿಗುತ್ತದೆ.

ಭಾರತೀಯ ವಾಸ್ತುವಿನ ಕೆಲ ಪ್ರಮುಖ ಮಾಹಿತಿಗಳು ಇಲ್ಲಿವೆ…

1) ನಾಮಫಲಕ:

ಮನೆಯ ಬಾಗಿಲಿನ ಹೊರಗೆ ನಾಮಫಲಕ ಇದ್ದರೆ ಒಳ್ಳೆಯದು.

2) ಅಗ್ನಿ:

ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಹಣತೆಯ ದೀಪ ಮತ್ತು ಊದುಬತ್ತಿ ಹಚ್ಚಿದರೆ ಒಳ್ಳೆಯದು.

3) ಅಡುಗೆ ಮನೆ:

ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು.

4) ನಿಂಬೆಹಣ್ಣು:

ಒಂದು ಗ್ಲಾಸ್ ನೀರಿನಲ್ಲಿ ನಿಂಬೆ ಹಣ್ಣು ಇಡಿ. ಪ್ರತೀ ಶನಿವಾರ ಅದನ್ನ ಬದಲಿಸುತ್ತಾ ಹೋಗಿ. ಇದರಿಂದ ಮನೆಯಲ್ಲಿರುವ ನೆಗಟಿವ್ ಎನರ್ಜಿ ನಶಿಸುತ್ತದೆ.

5) ಔಷಧ:

ಅಡುಗೆ ಮನೆಯಲ್ಲಿ ಔಷಧಗಳನ್ನ ಇಡಬಾರದು. ನೆಗಟಿವ್ ಎನರ್ಜಿ ವಕ್ಕರಿಸುವ ಅಪಾಯವಿರುತ್ತದೆ.

6) ಧ್ಯಾನ:

ದಿನಕ್ಕೆ ಒಮ್ಮೆಯಾದರೂ ಧ್ಯಾನ ಮತ್ತು ಮಂತ್ರೋಚ್ಛಾರ ಮಾಡಿ. ಇದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿ ಸಂಚಯವಾಗುತ್ತದೆ.

7) ಬೆಡ್’ರೂಂನಲ್ಲಿನ ಕನ್ನಡಿ..

ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ. ಒಂದು ವೇಳೆ, ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ಬೆಡ್’ನಿಂದ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನ ದೂರ ಇಡಿ. ಅಥವಾ ಕನ್ನಡಿಯನ್ನ ಬಟ್ಟೆಯಿಂದ ಮುಚ್ಚಿದ ಬಳಿಕವಷ್ಟೇ ಮಲಗಿಕೊಳ್ಳಿ. ಈ ಕನ್ನಡಿಯಿಂದ ಆರೋಗ್ಯ ಕೆಡುತ್ತದೆ, ಕುಟುಂಬದಲ್ಲಿ ವೈಮನಸ್ಸಿಗೆ ಕಾರಣವಾಗುತ್ತದೆ.

8) ತೀರ್ಥ:

ಮನೆಯ ಮೂಲೆಯಲ್ಲಿರುವ ಕತ್ತಲೆಯ ಜಾಗದಲ್ಲಿ ದೇವರ ತೀರ್ಥವನ್ನು ಇಟ್ಟು ವಾರಕ್ಕೊಮ್ಮೆ ಬದಲಿಸಿ.

9) ಓಂ, ಸ್ವಸ್ತಿಕ್ ಚಿಹ್ನೆಗಳು:

ಸ್ವಸ್ತಿಕ್ ಮತ್ತು ಓಂ ಚಿಹ್ನೆಗಳನ್ನ ಮನೆಯ ಬಾಗಿಲಿನಲ್ಲಿ ಹಾಕಿ.

10) ಗಂಟೆ:

ಪೂಜೆಯ ವೇಳೆ ಗಂಟೆ ಭಾರಿಸುತ್ತೇವೆ. ಗಂಟೆಯ ಸದ್ದು ಪಾಸಿಟಿವ್ ಎನರ್ಜಿಯನ್ನ ಉತ್ತೇಜಿಸುತ್ತದೆ. ಹೀಗಾಗಿ, ಕಾಂಪೌಂಡ್’ನ ಗೇಟಿಗೆ ಗಂಟೆಗಳನ್ನ ಹಾಕಿರಿ.

11) ಉಪ್ಪು:

ಮನೆಯ ಎಲ್ಲಾ ಮೂಲೆಗಳಲ್ಲೂ ಒಂದೊಂದು ಡಬ್ಬಿಯಲ್ಲಿ ಲವಣವನ್ನ ಇಡಿ. ಈ ಉಪ್ಪು ನೆಗಟಿವ್ ಎನರ್ಜಿಯನ್ನ ಹೀರಿಕೊಳ್ಳುತ್ತದೆ.

12) ಗಣೇಶ ಪೂಜೆ:

ಮೂರು ವರ್ಷಕ್ಕೆ ಒಮ್ಮೆಯಾದರೂ ಗಣೇಶ ಪೂಜೆ ಮತ್ತು ನವಗ್ರಹ ಶಾಂತಿ ಪೂಜೆಯನ್ನ ಮಾಡಿಸಿದರೆ ಮನೆಯ ವಾಸ್ತು ದೋಷವನ್ನ ನಿವಾರಿಸಬಹುದು.

13) ನಿರ್ದಿಷ್ಟ ಫೋಟೋಗಳು:

ಅಳುತ್ತಿರುವ ಹೆಂಗಸು, ಯುದ್ಧದ ದೃಶ್ಯ, ಲೈಂಗಿಕವಾಗಿ ಉದ್ರೇಕಿಸುವ ಭಂಗಿಗಳು, ಕೋಪೋದ್ರಿಕ್ತ ವ್ಯಕ್ತಿ, ಗೂಬೆ, ರಣಹದ್ದು ಇವೆಲ್ಲವೂ ಅಪಶಕುನಗಳಾಗಿವೆ. ಈ ಫೋಟೋಗಳನ್ನ ಮನೆಯ ಗೋಡೆಗೆ ತೂಗುಹಾಕಬಾರದು.

14) ವಾಸುದೇವ ಮಂತ್ರ:

“ಓಂ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನ ಪಠಿಸಿದರೆ ಮನೆಯ ವಾಸ್ತು ದೋಷವನ್ನ ನಿವಾರಿಸಬಹುದು.

15) ಅಕ್ವೇರಿಯಂ:

ಲಿವಿಂಗ್ ರೂಮಿನ ಆಗ್ನೇಯ(ಸೌಥ್ ಈಸ್ಟ್) ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ಐಶ್ವರ್ಯ ತುಂಬುತ್ತದೆ.

ಕೃಪೆ: ಸುದರ್ಶನ್ ಭಟ್