ವಿಚಿತ್ರ ಆದರೂ ಸತ್ಯ

ಭಾರತವನ್ನು ಆಳಿದ ಮಾಹನ್ ರಾಜ ‘ಚಂದ್ರಗುಪ್ತ ಮೌರ್ಯ’ ತನ್ನ ಕೊನೆಯ ದಿನಗಳನ್ನು ಎಲ್ಲಿ ಕಳೆದನು ನಿಮಗೆ ಗೊತ್ತಾ..?ತಿಳಿಯಲು ಈ

By admin

November 02, 2017

ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು ಪ್ರಮುಖವಾಗಿತ್ತು.

ಚಂದ್ರಗುಪ್ತನ ವಿಜಯದ ನಂತರ ಮೌರ್ಯ ಸಾಮ್ರಾಜ್ಯವು ಪೂರ್ವದಲ್ಲಿ ಬೆಂಗಾಲ್ ಮತ್ತು ಆಸ್ಸಾಮದಿಂದ ಪಶ್ಚಿಮದಲ್ಲಿ ಅಫ್ಘಾನಿಸ್ಥಾನ ಮತ್ತು ಬಲೂಚಿಸ್ಥಾನ ದವರೆಗೂ , ಉತ್ತರದಲ್ಲಿ ವಾಯುವ್ಯ ಕಾಶ್ಮೀರ ಮತ್ತು ಈಶಾನ್ಯನೇಪಾಳದಿಂದ ದಕ್ಷಿಣದಲ್ಲಿ ಡೆಕ್ಕನ್ ಪ್ರಸ್ಥಭೂಮಿಯವರೆಗೂ ಹಬ್ಬಿತ್ತು.

ಇಪ್ಪತ್ತು ವರ್ಷದವನಿರುವಗಲೇ ಅಲೆಕ್ಸಾಂಡರನ   ಮೇಲೆ ದಾಳಿ:-

ಕೇವಲ ಇಪ್ಪತ್ತು ವರ್ಷದವನಿರುವಗಲೇ ಅಲೆಕ್ಸಾಂಡರನ ಸೈನ್ಯವನ್ನು ಸೋಲಿಸಿ ನಂದ ಸಾಮ್ರಾಜ್ಯವನ್ನು ಗೆದ್ದಿದ್ದು ,ಸೆಲ್ಯೂಕಸ್ ನಿಕೇಟರ್ ನನ್ನು ಸೋಲಿಸಿದ್ದು ಮತ್ತು ದಕ್ಷಿಣ ಏಶಿಯಾದಾದ್ಯಂತ ಕೇಂದ್ರೀಕೃತ ಆಳಿಕೆಯನ್ನು ನೆಲೆಗೊಳಿಸಿದ್ದು – ಈ ಘಟನೆಗಳು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥವು ಆಗಿವೆ .

ಎರಡು ಸಾವಿರ ವರ್ಷಗಳನಂತರವೂ ಚಂದ್ರಗುಪ್ತ ಮತ್ತು ಅಶೋಕ ನೂ ಸೇರಿದಂತೆ ಅವನ ನಂತರ ಬಂದ ರಾಜರ ಸಾಧನೆಗಳು ದಕ್ಷಿಣ ಏಶಿಯ ಮತ್ತು ಜಾಗತಿಕ ಇತಿಹಾಸದ ಅಧ್ಯಯನದ ವಸ್ತುಗಳಾಗಿವೆ.

ಮೌರ್ಯ ಸಾಮ್ರಾಜ್ಯದ ಸ್ಥಾಪನೆ: ಅಲೆಕ್ಸಾಂಡರ್ ನ ದಾಳಿಯ ಕಾಲಕ್ಕೆ ಚಾಣಕ್ಯನು ತಕ್ಷಶಿಲೆಯಲ್ಲಿದ್ದನು. ತಕ್ಷಶಿಲೆ ಮತ್ತು ಗಾಂಧಾರಗಳನ್ನು ಆಳುತ್ತಿದ್ದ ರಾಜ ಅಂಭಿಯು ಅಲೆಕ್ಸಾಂಡರನೊಂದಿಗೆ ಹೋರಾಟ ಮಾಡದೆ ಒಪ್ಪಂದ ಮಾಡಿಕೊಂಡನು.

ಈ ದಾಳಿಯು ಭಾರತೀಯ ಸಂಸ್ಕೃತಿಯ ಮೇಲಿನ ದಾಳಿ ಎಂದು ಚಾಣಕ್ಯನು ಬಗೆದು ಉಳಿದ ರಾಜರನ್ನು ಒಟ್ಟಾಗಿ ಅಲೆಕ್ಸಾಂಡರನನ್ನು ಎದುರಿಸಲು ಕೇಳಿಕೊಂಡನು. ಪಂಜಾಬಿನ ರಾಜ ಪೋರಸ್ (ಪರ್ವತೇಶ್ವರ) ನೊಬ್ಬಾತನೇ ಅಲೆಕ್ಸಾಂಡರನನ್ನು ಎದುರಿಸಿದವನು ಆದರೆ ಸೋತು ಹೋದನು.

ಚಾಣಕ್ಯ: ಚಾಣಕ್ಯನು ಕೌಟಿಲ್ಯ ಎಂಬ ಹೆಸರಿನಿಂದಲೂ ಪ್ರಸಿದ್ಧನಾಗಿದ್ದಾನೆ .

ಅವನು ಚಂದ್ರಗುಪ್ತನನ್ನು ಅಧಿಕಾರಕ್ಕೆ ತರುವಲ್ಲಿ ಅವನಿಗೆ ಮಾರ್ಗದರ್ಶನ ನೀಡಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ನಂತರ ಅವನ ಮಂತ್ರಿಯಾಗಿಯೂ ಕೆಲಸ ಮಾಡಿದನು . ಅವನು ‘ಅರ್ಥಶಾಸ್ತ್ರ’ ಎಂಬ ಕೃತಿಯನ್ನು ರಚಿಸಿದ್ದಾನೆ.

ನಂದ ಸಾಮ್ರಾಜ್ಯವನ್ನು ಗೆದ್ದುಕೊಂಡದ್ದು ಮತ್ತು ವಿಸ್ತರಿಸಿದ್ದು: ಕ್ರಿ.ಪೂ ೩೨೩ ರಲ್ಲಿ ಅಲೆಕ್ಸಾಂಡರನ ಮರಣದ ನಂತರ ಅವನ ಪ್ರತಿನಿಧಿಗಳ ಆಡಳಿತದಲ್ಲಿದ್ದ ವಾಯುವ್ಯ ಭಾರತದ ಪ್ರದೇಶಗಳನ್ನು ಚಂದ್ರಗುಪ್ತನು ಗೆದ್ದುಕೊಂಡನು. ಅವನು ಪರ್ವತಕ ಅಥವಾ ಪೋರಸ್ ನ ಜತೆಗೂಡಿದುದಾಗಿ ವಿಶಾಖದತ್ತನ ಮುದ್ರಾರಾಕ್ಷಸ ಮತ್ತಿತರ ಕೃತಿಗಳು ಹೇಳುತ್ತವೆ.

ಚಂದ್ರಗುಪ್ತನ ಕೊನೆಯ ದಿನಗಳು: ಚಂದ್ರಗುಪ್ತನು ತನ್ನ ಜೀವನದ ಕೊನೆಗಾಲದಲ್ಲಿ ಸಿಂಹಾಸನವನ್ನು ತ್ಯಜಿಸಿ ಜೈನಧರ್ಮಕ್ಕೆ ಸೇರಿ ಸಂನ್ಯಾಸಿಯಾಗಿ ಕರ್ನಾಟಕದಲ್ಲಿರುವ ಶ್ರವಣಬೆಳಗೊಳದಲ್ಲಿ ತನ್ನ ಎಂದು ನಂಬಲಾಗಿದೆ.