ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೋಲು ಕಂಡಿದೆ. ವಿಶ್ವಕಪ್ ನಲ್ಲಿ ಸತತ ಗೆಲುವಿನೊಂದಿಗೆ ಮುನ್ನಡೆದಿದ್ದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿದ್ದು, ಈ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಸೋತಿದೆ.
ಸೋಲಿನ ಕಾರಣ ಕುರಿತಾಗಿ ಭಾರಿ ಚರ್ಚೆಗಳು ನಡೆದಿವೆ. ಹೀಗಿರುವಾಗ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಭಾರತದ ಸೋಲಿಗೆ ಜೆರ್ಸಿ ಕಾರಣ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಆಟಗಾರರು ಕೇಸರಿ ಜೆರ್ಸಿ ಧರಿಸಿ ಆಟವಾಡಿದ್ದು, ಸೋಲಿಗೆ ಕಾರಣ ಎಂದಿದ್ದಾರೆ. ಇದನ್ನು ಬೇಕಾದರೆ ಮೂಢನಂಬಿಕೆ ಎಂದಾದರೂ ಕರೆಯಿರಿ. ಈ ವಿಶ್ವಕಪ್ ನಲ್ಲಿ ಭಾರತದ ಗೆಲುವಿನ ಹಾದಿಯನ್ನು ಕೊನೆಗೊಳಿಸಿದ್ದು ಜೆರ್ಸಿ ಎಂದು ನಾನು ಹೇಳುತ್ತೇನೆ ಎಂದು ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.
ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬ್ಲೂ ಬಣ್ಣದ ಜೆರ್ಸಿ ಬದಲಿಗೆ ಕೇಸರಿ ಬಣ್ಣದ ಡ್ರೆಸ್ ನಲ್ಲಿ ಕಣಕ್ಕಿಳಿದಿದ್ದರು. ಇಂಗ್ಲೆಂಡ್ ವಿರುದ್ಧದ ಸೋಲು ಮತ್ತು ಜೆರ್ಸಿ ಈಗ ರಾಜಕೀಯಕ್ಕೆ ತಿರುಗಿದೆ ಎನ್ನಲಾಗಿದೆ.