ತಂತ್ರಜ್ಞಾನ

ಭಾರತದ ಮೊದಲ ವಿಮಾನ ನಿಲ್ದಾಣ ಸಮುದ್ರದ ಮೇಲೆ ನಿರ್ಮಾಣವಾಗಲಿದೇ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

By admin

December 25, 2017

ಭಾರತವು ಶೀಘ್ರದಲ್ಲಿಯೇ ತನ್ನ ಮೊದಲ “ಸಮುದ್ರ ಸೇತುವೆ”ಯ ಮೇಲೆ ಇರುವಂತಹ ವಿಮಾನ ಸಂಚರಿಸುವ ರನ್ ವೆ ಪಡೆಯಲಿದೆ.

ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗಟ್ಟಿ ನಡುಗಡ್ಡೆ ಜನಪ್ರಿಯವಾಗಿದೆ. ಅಗಟ್ಟಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. 1988ರಲ್ಲಿ ಇಲ್ಲಿನ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ.

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ವಿಭಾಗವು ತನ್ನ ಲಕ್ಷದ್ವೀಪ್ ನಲ್ಲಿರುವ ಅಗಟ್ಟಿ ವಿಮಾನ ನಿಲ್ದಾಣದ ಉಸ್ತುವಾರಿ ಹೊತ್ತಿದ್ದು, ಈ ಪ್ರತಿಷ್ಠಿತ ವಿಮಾನ ನಿಲ್ದಾಣವನ್ನು ಸಮುದ್ರದ ಕಡೆ ವಿಸ್ತರಿಸಲು ಸರ್ಕಾರದಿಂದ ಹಸಿರು ನಿಶಾನೆ ಪಡೆದುಕೊಂಡಿದೆ.

ಆರ್‌ಸಿಸಿ ಪ್ಲಾಟ್‌ಫಾರಂ ನಿರ್ಮಿಸುವ ಮೂಲಕ ಭಾರತದ ಮೊದಲ “ಸಮುದ್ರ ಸೇತುವೆ”ಯ ಮೇಲೆ ಇರುವಂತಹ ವಿಮಾನ ಸಂಚರಿಸುವ ರನ್ ವೆಯನ್ನು ನಿರ್ಮಿಸಲಿದೆ.

ಈ ಪ್ಲಾಟ್‌ಫಾರಂ ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಠ ವೇದಿಕೆಯಾಗಿದ್ದು, ಇದರಿಂದಾಗಿ ದೊಡ್ಡ ದೊಡ್ಡ ವಿಮಾನಗಳನ್ನು ದ್ವೀಪದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಎರಡು ದ್ವೀಪಗಳನ್ನು ಸಂಪರ್ಕಿಸಲು ಇರುವಂತಹ ಸೇತುವೆಯನ್ನು ರನ್ ವೆ ನಿರ್ಮಾಣಕ್ಕೆ ಬಳಸುವುದು ಬೇಡ ಎಂಬ ತೀರ್ಮಾನಕ್ಕೆ ಮೊದಲು ಬರಲಾಗಿತ್ತು ಹಾಗು ಈ ಕುರಿತಂತೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ವಿಭಾಗಕ್ಕೂ ನಿರ್ದೇಶನ ನೀಡಲಾಗಿತ್ತು.