ಕಪ್ಪುಹಣ ಹೊಂದಿರುವ ಅನುಮಾನಾಸ್ಪದ ಖಾತೆಯ ಮಾಹಿತಿಗಳನ್ನು ಭಾರತದೊಂದಿದೆ ಹಂಚಿಕೊಳ್ಳುವುದಾಗಿ ಸ್ವಿಡ್ಜರ್ ಲ್ಯಾಂಡ್ ಸ್ಪಷ್ಟಪಡಿಸಿದೆ.
ಸ್ವಿಸ್ ಬ್ಯಾಂಕ್ ಖಾತೆಯ ಮಾಹಿತಿಯನ್ನು ಆಗಿಂದಾಗ್ಗೆ ಹಂಚಿಕೊಳ್ಳುವುದಾಗಿ ಹೇಳಿದೆ.
ಜಾರಿಗೆ ಯಾವಾಗ?
ಇದು 2018 ರಿಂದ ಜಾರಿಗೊಳಿಸಲು ಯೋಜನೆ ಮಾಡಲಾಗಿದೆ. 2019 ರಲ್ಲಿ ಮೊದಲ ಹಂತದ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗುವುದು.
ಯಾವಾಗಿಂದ ಇದು ಶುರುವಾಗುವುದೆಂದು ಶೀಘ್ರದಲ್ಲಿಯೇ ಮೋದಿ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಸ್ವಿಸ್ ಫೆಡರಲ್ ಕೌನ್ಸಿಲ್ ಹೇಳಿದೆ.
ವಿದೇಶದಲ್ಲಿ ಸಂಗ್ರಹಿಸಿರುವ ಅಕ್ರಮ ಸಂಪತ್ತನ್ನು ಕೂಡಿಡಲು ಸ್ವಿಡ್ಜರ್ ಲ್ಯಾಂಡ್ ಸ್ವರ್ಗವಾಗಿತ್ತು. ಇದೀಗ ಸ್ವಿಸ್ ಬ್ಯಾಂಕ್’ನ ನಿರ್ಧಾರದಿಂದ ಕಾಳಧನಿಕರಲ್ಲಿ ನಡುಕ ಹುಟ್ಟಿದೆ.