ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಾಮಾನ್ಯ. ಅದರಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದ 5 ಗಂಟೆಯ ಒಳಗೆ ಬೀಳುವ ಕನಸುಗಳು ನಿಜವಾಗುತ್ತವೆ ಎಂಬ ನಂಬಿಕೆ ಇದೆ.ಕನಸಿನಲ್ಲಿ ಅನೇಕ ವ್ಯಕ್ತಿಗಳು ಹಾಗೂ ವಸ್ತುಗಳು ಬಂದು ಹೋಗುತ್ತವೆ.ಆದ್ರೆ ಕನಸಿನಲ್ಲಿ ಬರೋದೆಲ್ಲಾ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ ಅನೇಕರಿಗೆ ಗೊತ್ತಿರುವುದಿಲ್ಲ.ಅದರಲ್ಲಿ ದೇವರ ದೇವ ಮಹಾದೇವ ಸಂಭಂದಿಸಿದ ವಸ್ತುಗಳು ಕನಸಿನಲ್ಲಿ ಬಂದ್ರೆ ಅದೃಷ್ಟ ಬಾಗಿಲು ತೆರೆದಿದೆ ಎಂದೇ ಅರ್ಥ.
- ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡ್ರೆ ಅನೇಕ ದಿನಗಳಿಂದ ಕಾಡ್ತಿದ್ದ ಸಮಸ್ಯೆಗೆ ಸದ್ಯದಲ್ಲಿಯೇ ಪರಿಹಾರ ಸಿಗಲಿದೆ ಎಂದರ್ಥ. ಕನಸಿನಲ್ಲಿ ಶಿವಲಿಂಗ ಕಂಡ ಮರುದಿನ ಶಿವಲಿಂಗಕ್ಕೆ ಹಾಲನ್ನು ಅರ್ಪಿಸುವುದು ಒಳ್ಳೆಯದು.
- ಕನಸಿನಲ್ಲಿ ಶಿವ ತಾಂಡವ ನೃತ್ಯವಾಡುತ್ತಿದ್ದಂತೆ ಕಂಡರೆ ಭಯಪಡಬೇಡಿ.ಯಾಕೆಂದರೆ ಇದು ಶುಭ ಫಲದ ಸಂಕೇತ. ಸ್ವಲ್ಪ ಪ್ರಯತ್ನಪಟ್ಟರೆ ಯಶಸ್ಸು ಸಿಗುತ್ತೆ ಎಂಬುದು ಇದರ ಅರ್ಥ. ಈ ಕನಸು ಧನ ವೃದ್ಧಿಯ ಸಂಕೇತವೂ ಹೌದು.
- ಶಿವನ ದೇವಸ್ಥಾನ ಕನಸಿನಲ್ಲಿ ಕಂಡರೆ ದೀರ್ಘ ಕಾಲದಿಂದ ಕಾಡುತ್ತಿದ್ದ ರೋಗ ಗುಣಮುಖವಾಗಲಿದೆ ಎಂದು ಅರ್ಥ.
- ಕನಸಿನಲ್ಲಿ ಶಿವನ ಹಾವು ಕಾಣಿಸಿಕೊಂಡರೆ ಧನ ಲಾಭವಾಗಲಿದೆ ಎಂದರ್ಥ. ಹಾವು ನಿಮ್ಮ ಹಿಂದೆ ಇರುವಂತೆ ಕಂಡ್ರೆ ನಿಮಗೆ ನಾಗದೇವತೆಯ ಕೃಪೆಯಾಗಿದೆ ಎಂದು ಅರ್ಥೈಸಿಕೊಳ್ಳಿ. ಇಲ್ಲಿ ಓದಿ:-ಇದು ಬ್ರಹ್ಮ ದೇವರ ಜಗತ್ತಿನ ಏಕೈಕ ದೇವಾಲಯ !!!