ದೇವರಿಗೆ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರೆದ ಭಕ್ತನೊಬ್ಬ ಅದನ್ನು ಹುಂಡಿಯಲ್ಲಿ ಹಾಕಿದ್ದಾನೆ…
ಅವನ ಒಪ್ಪಂದ ಹೇಗಿತ್ತು ಗೊತ್ತಾ..? ನೀನು ನನಗೆ ಕೊಡು, ನಾನು ನಿನಗೆ ಕೊಡುತ್ತೇನೆ…
ಹೌದು, ಒಪ್ಪಂದದ ಆಧಾರದಂತೆ ಭಕ್ತನೊಬ್ಬ ದೇವರಿಗೆ ಪತ್ರ ಬರೆದು ಹುಂಡಿಯಲ್ಲಿ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಾವ ದೇವಸ್ಥಾನದಲ್ಲಿ..?
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಶ್ರೀ ಕ್ಷೇತ್ರ ಚಿಕ್ಕ ತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ವೇಳೆ ಈ ಪತ್ರ ಪತ್ತೆಯಾಗಿದ್ದು.
ಭಕ್ತ ನೊಬ್ಬ ತನ್ನ ಬೇಡಿಕೆ ಈಡೇರಿಸಿದರೆ, ಅಭಿಷೇಕ, ವಿಶೇಷ ಪೂಜೆ, ಕಾಣಿಕೆ ನೀಡುವುದಾಗಿ ಮನವಿ ಪತ್ರ ಬರೆದಿದ್ದಾನೆ.
ಈ ಒಪ್ಪಂದದ ಪತ್ರದಲ್ಲೇನಿದೆ..?
ತಮ್ಮ ಕುಟುಂಬಕ್ಕೆ ಸ್ವಂತ ನೆಲೆ ಇಲ್ಲ, ನಮಗೊಂದು ಮನೆ ಬೇಕು. ನಾವು ಇರುವ ಮನೆ ಭೋಗ್ಯಕ್ಕಿದ್ದು ಮಾಲೀಕನಿಂದ ಬರುವ 6 ಲಕ್ಷ ಬರುವಂತೆ ಮಾಡು. ನಮ್ಮ ಮಕ್ಕಳಿಗೆ ಉದ್ಯೋಗ, ವ್ಯಾಪಾರ, ವಾಹನ, ಆರೋಗ್ಯ- ಆಯುಷ್ಯ ನಿನ್ನ ಆಶೀರ್ವಾದದಿಂದ ಸಿಗಬೇಕು.
ನಮ್ಮ ಅಳಿಯ, ಮಗಳು, ಮೊಮ್ಮಕ್ಕಳು ಎಲ್ಲರೂ ಚೆನ್ನಾಗಿರಬೇಕು. ಇದೆಲ್ಲಾ ಈಡೇರಿಸಿದ್ರೆ ನಿನಗೆ ಅಭಿಷೇಕ, ಕಾಣಿಕೆ ವಿಶೇಷ ಪೂಜೆ ನೆರವೇರಿಸುತ್ತೇನೆ.
ನೀನು ನನಗೆ ಕೊಡು, ನಾನು ನಿನಗೆ ಕೊಡುತ್ತೇನೆ. ಎಂದು ಸತ್ಯದ ಪ್ರಮಾಣ ಮಾಡಿದ್ದಾನೆ. ಆದರೆ ಪತ್ರ ಬರೆದವರು ತಮ್ಮ ವಿಳಾಸವನ್ನು ಬರೆದಿಲ್ಲ.