ಸುದ್ದಿ

ಬ್ಯಾಟರಿ ಚಾಲಿತ ಹೃದಯ ಇದೆ ಅಂದ್ರೆ ನೀವು ನಂಬತೀರಾ..? ಈ ಪುಟ್ಟ ಬಾಲಕನ ಹೃದಯ ಈಗ ಆ ಮೊಬೈಲ್‌ನಲ್ಲಿದೆ..?

By admin

September 20, 2019

ನಾವೆಲ್ಲಾ ಬ್ಯಾಟರಿ ಚಾಲಿತ ಬೈಕ್​ಗಳನ್ನು ಹಾಗೂ ಕಾರುಗಳನ್ನು ನೋಡಿದ್ದೇವೆ. ಆದ್ರೆ, ಬ್ಯಾಟರಿ ಚಾಲಿತ ಹೃದಯ ಇದೆ ಅಂದ್ರೆ ನೀವು ನಂಬತೀರಾ..? ಹೌದು ಇದು ನಿಜಕ್ಕೂ ಹೌಹಾರುವಂತಹ ವಿಷಯ. 4 ವರ್ಷದ ಬಾಲಕನಿಗೆ ಬ್ಯಾಟರಿ ಮೂಲಕ ಹೃದಯದ ಬಡಿತ ನಡೆಯುತ್ತಿರುವ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ನಿಜಕ್ಕೂ ಇದೊಂದು ರೀತಿಯಲ್ಲಿ ವಿಚಿತ್ರ ಅನಿಸಿದ್ರೂ ಸತ್ಯ. ದಾಂಡೇಲಿ ಮೂಲದ ಪ್ರಕಾಶ ಹಾಗೂ ಅಶ್ವಿನಿ ದಂಪತಿಯ 4 ವರ್ಷದ ಬಾಲಕನಿಗೆ ಇಂತಹದೊಂದು ಆಪರೇಷನ್ ಮಾಡಲಾಗಿದೆ. ನಾಲ್ಕು ವರ್ಷದ ಈ ಬಾಲಕ ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದ. ಧಾರವಾಡದ ಎಸ್‌ಡಿಎಂ ನಾರಾಯಣ ಹೃದಯಾಲಯದ ವೈದ್ಯರು ಯಶಸ್ವಿ ಚಿಕಿತ್ಸೆ ಮಾಡಿದ್ದು, ಬ್ಯಾಟರಿ ಮೂಲಕ ಬಾಲಕನ ಹೃದಯಕ್ಕೆ ಚಾಲನೆ ನೀಡಿದ್ದಾರೆ. ಹೃದಯಕ್ಕೆ ಅಳವಡಿಸಿರುವ ಬ್ಯಾಟರಿಯಿಂದ ಬಾಲಕನ ಹೃದಯ ಚಾಲನೆಯಲ್ಲಿದೆ. ವೈದ್ಯ ಅರುಣ ಬಬಲೇಶ್ವರ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ..

ಹೃದಯ ಬಡಿತ ನಿಮಿಷಕ್ಕೆ 100ಕ್ಕಿಂತ ಅಧಿಕ ಇರುವಲ್ಲಿ ಈ ಬಾಲಕನ ಹೃದಯ ಬಡಿತ ಕೆವಲ 39 ಇತ್ತು. ಹೀಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಪೋಷಕರಿಗೆ ಬೆಂಗಳೂರಿನಲ್ಲಿ ತೋರಿಸಿ ಎಂದು ಹೇಳಿದ್ದರು ವೈದ್ಯರು. ಖುದ್ದು ಎಸ್​ಡಿಎಂ ನಾರಾಯಾಣ ಹೃದಯಾಲಯದ ವೈದ್ಯರ ಬಳಿ ಬಂದಾಗ, ಬಿಪಿಎಲ್​ ಕಾರ್ಡ್​ ಮೇಲೆ ಉಚಿತವಾಗಿ 4 ವರ್ಷದ ಬಾಲಕ ಅಮೊಘನಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಬಾಲಕ ಎಲ್ಲರಂತೆ ಈಗ ಆರೋಗ್ಯವಾಗಿದ್ದಾನೆ. ಇನ್ನು ಈ ರೀತಿಯಾಗಿ ಶಸ್ತ್ರ ಚಿಕೆತ್ಸೆ ಮಾಡಿದ ಬಳಿಕ ಸುಮಾರು 10 ವರ್ಷಕ್ಕೊಮ್ಮೆ ಈ ರೀತಿಯಾಗಿ ಹೃದಯಕ್ಕೆ ಅಳವಡಿಸಿರುವ ಬ್ಯಾಟರಿಯನ್ನು ಬದಲಾಯಿಸಬೇಕಾಗಿದೆ. ಅದಕ್ಕೆ ಬಾಲಕನ ಪೋಷಕರು ಕೂಡ ತಯಾರಾಗಿದ್ದಾರೆ. ವೃತ್ತಿಯಲ್ಲಿ ಗೌಂಡಿ ಕೆಲಸ ಮಾಡಿಕೊಂಡಿರುವ ದಾಂಡೇಲಿ ಮೂಲದ ಪ್ರಕಾಶ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ.

ಬಾಲಕ ಸದ್ಯಕ್ಕೆ ಆರೋಗ್ಯವಾಗಿದ್ದು, ಎಲ್ಲರಂತೆ ಓಡಾಡಿಕೊಂಡು ಇದ್ದಾನೆ. ಬಡ ದಂಪತಿಗಳು ಹಣದ ಖರ್ಚು ಜಾಸ್ತಿ ಆಗುತ್ತೆ ಎಂದು ಹಾಗೆ ಬಿಟ್ಟಿದ್ದರೆ, ಮುಂದಿನ ದಿನಗಳಲ್ಲಿ ಬಾಲಕನ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿತ್ತು. ಆದ್ರೆ ಅವೆಲ್ಲಾ ಸಮಸ್ಯೆಗಳನ್ನು ನಾರಾಯಾಣ ಹೃದಯಾಲಯದ ವೈದ್ಯರು ದೂರ ಮಾಡಿ, ಬಾಲಕನಿಗೆ ಮತ್ತೊಮ್ಮೆ ಮರುಜೀವ ಕೊಟ್ಟಂತೆ ಆಗಿದೆ.