ಒಂದು ನಿಮಿಷ ಸುಮ್ಮನೆ ಕುಳಿತುಕೊಳ್ಳಿ. ಜೊತೆಗೆ ಮುಂಜಾನೆ ಎದ್ದ ತಕ್ಷಣ ಏನು ಮಾಡುತ್ತೀರಾ? ಎನ್ನುವುದನ್ನು ಮೆಲುಕುಹಾಕಿ. ಸಾಮಾನ್ಯವಾಗಿ ಎಲ್ಲರ ಉತ್ತರ ಒಂದೇ ಆಗಿರಬಹುದು. ನೀರು ಕುಡಿಯುತ್ತೇವೆ, ಹಲ್ಲುಜ್ಜುತ್ತೇವೆ, ವ್ಯಾಯಾಮ ಮಾಡುತ್ತೇವೆ ಎನ್ನುವುದಾಗಿರಬಹುದು. ಅದೇ ಯಾರಾದರೂ ತುಪ್ಪವನ್ನು ತಿನ್ನುತ್ತೇವೆ ಎಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು? ತುಪ್ಪ ಎಂದರೆ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಬರುವುದು. ಜಿಡ್ಡಿನ ಪದಾರ್ಥ, ಅತಿಯಾದ ಕೊಬ್ಬನ್ನು ಹೊಂದಿರುತ್ತದೆ, ಅದನ್ನು ಮಿತವಾಗಿ ಸೇವಿಸಬೇಕು, ಅತಿಯಾಗಿ ತಿಂದರೆ ಆರೋಗ್ಯ ಹಾಳಾಗುವುದು, ತೂಕ ಹೆಚ್ಚುವುದು ಸೇರಿದಂತೆ ಇನ್ನಿತರ ವಿಚಾರ ಮನಸ್ಸಿಗೆ ಬರಬಹುದು ಅಲ್ಲವೇ?
ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು. ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು.
ಜೀವಕೋಶದ ಕಾರ್ಯ ಹೆಚ್ಚುವುದು:-
ಆಯುರ್ವೇದದ ಪ್ರಕಾರ ಖಾಳಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ದೇಹದ ಎಲ್ಲಾ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುದು.
ಜೀವಕೋಶವನ್ನು ಪುನಃ ಶ್ಚೇತನಗೊಳಿಸಬೇಕು ಎಂದಾದರೆ ತುಪ್ಪವನ್ನು ಸೇವಿಸಬೇಕು.
ಚರ್ಮದ ಕಾಂತಿ ಹೆಚ್ಚುವುದು:-
ತುಪ್ಪ ಜೀವಕೋಶಗಳ ಪೋಷಣೆ ಮತ್ತು ಪುನರುಜ್ಜೀವನ ಗೊಳಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಆರೋಗ್ಯವನ್ನು ಪಡೆದುಕೊಳ್ಳುತ್ತದೆ.
ತ್ವಚೆಯಲ್ಲಿರುವ ಶುಷ್ಕತೆಯನ್ನು ಹೋಗಲಾಡಿಸಿ, ಸದಾ ಕಾಂತಿ ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.
ಸಂಧಿವಾತವನ್ನು ತಡೆಯುತ್ತದೆ:-
ತುಪ್ಪ ನೈಸರ್ಗಿಕವಾದ ಲುಬ್ರಿಕೆಂಟ್ ಮತ್ತು ಓಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿದೆ. ಹಾಗಾಗಿ ಇದನ್ನು ಕೀಲುಗಳಿಗೆ ಉತ್ತಮ ಆರೈಕೆ ಮಾಡುವುದು.
ಸಂಧುಗಳ ನೋವಿಗೆ ಹಾಗೂ ಇನ್ನಿತರ ಮೂಳೆ ಸಂಬಂಧಿತ ಅನಾರೋಗ್ಯಕ್ಕೆ ತುಪ್ಪದ ಲೇಪನವನ್ನು ಮಾಡಬಹುದು.
ಮಿದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ:-
ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ನೆನಪಿನ ಶಕ್ತಿ, ಕಲಿಕೆ, ಜ್ಞಾನ ಗ್ರಹಣ, ಕಾರ್ಯಚಟುವಟಿಕೆಗಳನ್ನು ಸುಧಾರಿಸುತ್ತದೆ.
ಅಲ್ಲದೆ ಬುದ್ಧಿಮಾಂಧ್ಯತೆ ಅಲ್ಝಮೈರ್ ನಂತಹ ಕಾಯಿಲೆ ಬರದಂತೆ ತಡೆಯುವುದು.
ತೂಕ ಇಳಿಸುವುದು:-
ಸಾಮಾನ್ಯವಾಗಿ ತೂಕ ಹೆಚ್ಚಿಸಲು ತುಪ್ಪ ಸೇವಿಸಬೇಕು ಎನ್ನುವುದನ್ನು ಕೇಳಿರುತ್ತೀರಿ. ಅದೇ ನೀವು ಮುಂಜಾನೆ ಖಾಲಿ ಹೊಟ್ಟೆಯಲ್ಲಿ 5-10 ಮಿಲಿಯಷ್ಟು ತುಪ್ಪವನ್ನು ಸೇವಿಸಿದರೆ ನಿಮ್ಮ ಚಯಾಪಚಯ ಕ್ರಿಯೆ ಸುಧಾರಣೆ ಕಾಣುತ್ತದೆ.
ಕೂದಲು ಉದುರುವಿಕೆಯನ್ನು ತಡೆಯುತ್ತದೆ:-
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಅದು ಕೇಶರಾಶಿಯ ಸಂರಕ್ಷಣೆಗೆ ಸಹಾಯವಾಗುತ್ತದೆ.
ಕೂದಲಿನ ಫೋಲಿಸೆಲ್ಸ್ ಗಳು ಆರೋಗ್ಯವಾಗಿರುವಂತೆ ಮಾಡುತ್ತದೆ