ಆರೋಗ್ಯ

ಬೆಳಿಗ್ಗೆದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿದ್ರೆ ಇವತ್ತೇ ಬಿಟ್ಬಿಡಿ..!ಯಾಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

By admin

March 27, 2018

ಬೆಳಿಗ್ಗೆದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿದೆಯೇ? ಅದೂ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ?ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಭಾರತದ ಹಲವು ಕಡೆಗಳಲ್ಲಿ ಒಂದು ಸಂಪ್ರದಾಯವೇ ಆಗಿದೆ. ಹಿಂದೆ ಬ್ರಿಟಿಷರು ಭಾರತದಲ್ಲಿದ್ದಾಗ ಬೆಡ್ ಟೀ ಎಂದು ಟೀ ಹೀರುತ್ತಿದ್ದರು.

ಟೀ ಸೇವನೆಯೂ ಒಂದು ವ್ಯಸನವಾಗಿದ್ದು ಹೀಗೇ ಮುಂಜಾನೆಯ ಪ್ರಥಮ ಆಹಾರವಾಗಿ ಟೀ ಸೇವಿಸುವ ಅಭ್ಯಾಸವಿರುವವರಿಗೆ ಇದು ವ್ಯಸನವೇ ಆಗಿ ಹೋಗಿರುತ್ತದೆ. ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಟ್ಯಾನಿನ್ ಎಂಬ ಪೋಷಕಾಂಶಗಳು ಅಥವಾ ಕ್ಯಾಟೆಚಿನ್ ಎಂಬ ಕಣಗಳು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತವೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಕೊಬ್ಬು ಕರಗಿಸುವ ನೈಸರ್ಗಿಕ ‘ಚಹಾ’:-

ಬೆಡ್ ಟೀ ಎಂಬ ಹೆಸರಿನಲ್ಲಿ ಖಾಲಿಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಹಲವು ರೀತಿಯಲ್ಲಿ ಆರೋಗ್ಯವನ್ನು ಬಾಧಿಸುತ್ತದೆ. ಮೊದಲಿಗೆ ಇದರಲ್ಲಿರುವ ಕೆಫೀನ್ ಜಠರ ರಸವನ್ನು ಹೆಚ್ಚಾಗಿ ಸ್ರವಿಸಲು ಪ್ರಚೋದಿಸುತ್ತದೆ ಹಾಗೂ ಇದು ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುತ್ತದೆ.

ಟೀ ಸೇವನೆಯಿಂದ ಮನೋಭಾವ ಉಲ್ಲಸಿತಗೊಂಡರೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ಈ ಅಭ್ಯಾಸವನ್ನು ಬಿಡುವುದೇ ಒಳ್ಳೆಯದು..

ಹೊಟ್ಟೆಯುಬ್ಬರಿಕೆ ಉಂಟಾಗುತ್ತದೆ :-

ಒಂದು ವೇಳೆ ಖಾಲಿಹೊಟ್ಟೆಯಲ್ಲಿ ಹಾಲಿರುವ ಟೀ ಕುಡಿದಾಗ ಹೊಟ್ಟೆಯುಬ್ಬರಿಕೆಯುಂಟಾಗುತ್ತದೆ. ಏಕೆಂದರೆ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಲ್ಯಾಕ್ಟೋಸ್ ಖಾಲಿಹೊಟ್ಟೆಯಲ್ಲಿ ಜೀರ್ಣರಸಗಳೊಂದಿಗೆ ಪ್ರತಿಕ್ರಿಯೆಗೆ ಒಳಗಾದಾದ ವಾಯು ಉತ್ಪತ್ತಿಯಾಗುತ್ತದೆ. ಇದು ಹೊಟ್ಟೆಯುಬ್ಬರಿಕೆ, ವಾಯುಪ್ರಕೋಪ ಹಾಗೂ ಮಲಬದ್ಧತೆಗೆ ಕಾರಣವಾಗುತ್ತದೆ.

ಹಲ್ಲುಗಳು ಹೆಚ್ಚು ಸವೆಯುತ್ತವೆ:-

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ಹಲ್ಲುಗಳ ಹೊರಕವಚ ಶೀಘ್ರವಾಗಿ ಸವೆಯುತ್ತದೆ. ಏಕೆಂದರೆ ರಾತ್ರಿಯ ಸಮಯದಲ್ಲಿ ಬಾಯಿಯಲ್ಲಿ ಹೆಚ್ಚೇ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿದ್ದು ಸಕ್ಕರೆಯನ್ನು ಒಡೆದು ಚಿಕ್ಕದಾಗಿಸಿರುತ್ತವೆ. ಪರಿಣಾಮವಾಗಿ ಬಾಯಿಯ ಆಮ್ಲೀಯತೆ ಹೆಚ್ಚಿರುತ್ತದೆ.

ಈ ಸಮಯದಲ್ಲಿ ಬಿಸಿ ಟೀ ಕುಡಿಯುವುದರಿಂದ ಆಮ್ಲೀಯತೆಯಿಂದ ಸಡಿಲವಾಗಿದ್ದ ಹಲ್ಲುಗಳ ಹೊರಪದರದ ಕಣಗಳು ಸುಲಭವಾಗಿ ತೊಳೆದುಹೋಗುತ್ತವೆ. ಇದು ಹಲ್ಲುಗಳ ಸವೆಯುವಿಕೆಗೆ ಕಾರಣವಾಗುತ್ತದೆ.