ಸುದ್ದಿ

ಬೆಂಗಳೂರಿನ ಪುಂಡ ಪೋಕರಿಗಳಿಗೆ ಇನ್ಮುಂದೆ ಬೀಳಲಿದೆ ಬ್ರೇಕ್..!ಏಕೆ ಗೊತ್ತಾ..?ಈ ಲೇಖನ ಓದಿ…

By admin

February 26, 2018

ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ,’ಕರ್ನಾಟಕದ ಸಿಂಗಂ’ ಎಂದೇ ಖ್ಯಾತಿ ಗಳಿಸಿರುವ ರವಿ.ಡಿ.ಚನ್ನಣ್ಣನವರ್ ಇನ್ನು ಮುಂದೆ,ಬೆಂಗಳೂರಿನ ಪುಂಡ, ಭ್ರಷ್ಟ,ಪೋಕರಿಗಳಿಗೆ ನೀರಿಳಿಸಲು ಬರುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

 

ಹೌದು, ಮಲೆನಾಡಿನ ಹುಲಿ ರವಿ.ಡಿ.ಚನ್ನಣ್ಣನವರ್ ಸದ್ಯ ಮೈಸೂರಿನಲ್ಲಿ IPS ಅಧಿಕಾರಿಯಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.ದಕ್ಷ ನಿಷ್ಟಾವಂತ ಅಧಿಕಾರಿ ರವಿ.ಡಿ.ಚನ್ನಣ್ಣನವರ್’ನ್ನು ಈಗ ಬೆಂಗಳೂರಿಗೆ ವರ್ಗಾಯಿಸಿ, ಬೆಂಗಳೂರು ಪಚ್ಚಿಮ ವಿಭಾಗದ ಡಿಸಿಪಿಯಾಗಿ ನೇಮಕಮಾಡಲಾಗಿದೆ.

ಈ ವಿಷಯ ಬೆಂಗಳೂರಿನ ಪುಂಡ,ಪೋಕರಿ,ರೌಡಿಗಳಿಗೆ ಖಾರವಾಗಿದ್ದರೂ,ಬೆಂಗಳೂರಿನ ಜನರಿಗೆ ತುಂಬಾ ಖುಷಿಯ ವಿಚಾರವಾಗಿದೆ.ಈ ವಿಷಯ ಮೈಸೂರಿನ ಜನರಿಗೆ ನೋವುಂಟು ಮಾಡಿರುವುದು ಅಷ್ಟೇ ಸತ್ಯ.ಜನರ ಈ ಪ್ರೀತಿ ರವಿ.ಡಿ.ಚನ್ನಣ್ಣನವರ್’ಗೆ ಇರುವ ದಕ್ಷ ಮತ್ತು ಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತದೆ.