ಸರ್ಕಾರಿ ಯೋಜನೆಗಳು

ಬೆಂಗಳೂರಿನಲ್ಲಿ ಮಹಿಳೆಯರಿಗಾಗಿ ಇಂದಿರಾ ಸಾರಿಗೆ ನಂತರ ಈಗ ಪಿಂಕ್ ಆಟೋಗಳು..!ತಿಳಿಯಲು ಈ ಲೇಖನ ಓದಿ..

By admin

January 23, 2018

ಈ ಹಿಂದೆ ಮಹಿಳೆಯರ ಸುರಕ್ಷತೆಗಾಗಿ ಉತ್ತರ ಪ್ರದೇಶದಲ್ಲಿ ಪಿಂಕ್ ಬಸ್ ರೋಡಿಗೆ ಇಳಿದಿವೆ. ಬೆಂಗಳೂರಿನಲ್ಲಿ ಇಂದಿರಾ ಸಾರಿಗೆ ಆಯಿತು ಇದೀಗ ಪಿಂಕ್ ಆಟೋ ಮಹಿಳೆಯಾರ ಸುರಕ್ಷತೆಗಾಗಿ  ರಸ್ತೆಗಿಳಿಯಲಿವೆ.

ವಿಶೇಷ:- ಈ ಆಟೋದಲ್ಲಿ ಮಹಿಳೆಯರು ಹಾಗು ಮಕ್ಕಳು ಮಾತ್ರ ಪ್ರಯಾಣಿಸಬಹುದಾಗಿದ್ದು ಇದರ ಚಾಲನೆಯನ್ನು ಪುರುಷರು ಹಾಗು ಮಹಿಳೆಯರು ಚಲಾಯಿಸುತ್ತಾರೆ.

ಬಿಬಿಎಂಪಿ ಸಮಾಜ ಕಲ್ಯಾಣ ಯೋಜನೆಯಡಿ ಶೇ.20 ರಷ್ಟು ಆಟೋಗಳನ್ನು ಈಗಾಗಲೇ ಮಹಿಳೆಯರಿಗಾಗಿ ಮೀಸಲಿಟ್ಟಿದೆ ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

ಮುಂಬರುವ ತಿಂಗಳುಗಳಲ್ಲಿ ಪಿಂಕ್ ಆಟೋ ಸಂಚರಿಸಲಿದ್ದು, ಬಿಬಿಎಂಪಿ 300-400 ಆಟೋಗಳನ್ನು ವಿತರಿಸಲಾಗಿದೆ. ಮೊಂದಿನ ತಿಂಗಳಲ್ಲಿ ಪೈಲಟ್ ಹಂತ ಆರಂಭವಾಗಲಿದೆ.

ಹೊಸ ಖರೀದಿಸಲು 25 ಸಾವಿರ ರು. ಸಬ್ಸಿಡಿ ಕೂಡ ನೀಡಲಾಗುತ್ತದೆ. ಬಿಬಿಎಂಪಿ ವಿವಿಧ ಕಂಪನಿಗಳೊಂದಿಗೆ ಮಾತನಾಡಿದ್ದು, ಸಿಎಸ್ ಆರ್ ಅಳವಡಿಸಲು ಚರ್ಚಿಸಿರುವುದಾಗಿ ತಿಳಿಸಿದ್ದಾರೆ.