ಕಳೆದ 21 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ನಡೆಸುವ ಮೂಲಕ ಸಾವಿರಾರು ಬಡ ಜನರ ಬಾಳಿನ್ನು ಹಸನುಗೊಳಿಸಿವ,ಸಮಾಜದ ಬಡ ವರ್ಗಗಳ ರೋಗಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ.
ಸ್ವಯಂ ಸೇವಾ ಸಂಸ್ಥೆಯಾದ ಫ್ರೆಂಡ್ಸ್ ವೆಲ್ ಫೇರ್ ಆರ್ಗನೈಸೇಷನ್ ಕಳೆದ 21 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ.ಈ ಶಿಬಿರದಮೂಲಕಸಂಸ್ಥೆಯು ಸಾವಿರಾರು ಬಡ ಜನರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಅವರ ಬದುಕನ್ನು ಹಸನುಗೊಳಿಸುವಂತೆ ಮಾಡಿದೆ.
ಈ 21 ವರ್ಷದ ಅವಧಿಯಲ್ಲಿ ಸಂಸ್ಥೆಯು ನಡೆಸಿಕೊಂಡುಬಂದಿರುವ ಹತ್ತಾರು ಸಮಾಜಮುಖಿ ಮತ್ತು ಸೇವಾ ಕಾರ್ಯಕ್ರಮ. ಸಾವಿರಾರು ಬಡ ಜನರ ಬಾಳಿನ್ನು ಹಸನುಗೊಳಿಸಿರುವ ಫ್ರೆಂಡ್ಸ್ ವೆಲ್‌ಫೇರ್ ಆರ್ಗನೈಸೇಷನ್, ಪ್ರತಿವರ್ಷದಂತೆ ಈ ಬಾರಿಯೂ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಆಯೋಜಿಸಿದೆ.
ಪ್ರತಿ ವರ್ಷದಂತೆ ಫ್ರೆಂಡ್ಸ್ ವೆಲ್ ಫೇರ್ ಆರ್ಗನೈಸೇಷನ್ ಈ ವರ್ಷವೂ ಆಯೋಜಿಸುತ್ತಿದೆ. ಇದು ಸಂಸ್ಥೆ ನಡೆಸುತ್ತಿರುವ 22 ನೇ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವಾಗಿದೆ. ಈ ವರ್ಷದ ಶಿಬಿರದವಿಶೇಷವೆಂದರೆ ಜರ್ಮನಿಯ ನುರಿತ ಪ್ಲಾಸ್ಟಿಕ್ ತಜ್ಞರ ತಂಡ ಆಗಮಿಸಿ ಸೂಕ್ತ ಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಿದೆ. ಸೀಳು ತುಟಿ, ಸೀಳು ಮೇಲ್ದವಡೆ, ಸುಟ್ಟ ಗಾಯಗಳಿಂದ ಚರ್ಮಕ್ಕೆಆಗಿರುವ ಹಾನಿಯನ್ನು ಈ ಪ್ಲಾಸ್ಟಿಕ್ ಸರ್ಜರಿ ಶಿಬಿರದಲ್ಲಿ ಸರಿಪಡಿಸಲಾಗುವುದು.
ಈ ಶಿಬಿರದ ವಿವರಗಳು ಇಂತಿವೆ:-
ಪರೀಕ್ಷಾ/ತಪಾಸಣೆ ದಿನ: 14 ಜನವರಿ 2018 ರಂದು ಬೆಳಗ್ಗೆ 8.30 ರಿಂದ.
ಶಸ್ತ್ರ ಚಿಕಿತ್ಸೆ ದಿನಾಂಕ: 15 ಜನವರಿ 2018 ರಿಂದ 24 ಜನವರಿ 2018 ರವರೆಗೆ.
ಸ್ಥಳ: ವಗುಸ್ ಸೂಪರ್ ವಿಶೇಷ ಆಸ್ಪತ್ರೆ
18 ನೇ ಕ್ರಾಸ್, ಬಸ್ ನಿಲ್ದಾಣದ ಹತ್ತಿರ ಮಲ್ಲೇಶ್ವರಂ ಬೆಂಗಳೂರು– 560003.
ಈ ಶಿಬಿರದಲ್ಲಿ ಪಾಲ್ಗೊಳ್ಳುವ ರೋಗಿಗಳು 14 ಜನವರಿ 2018 ರಂದು ಬೆಳಗ್ಗೆ 8 ಗಂಟೆಗೆ ಈ ಮೇಲಿನ ವಿಳಾಸದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ದೀಪೇನ್ ದವೆ– 9591398060 ಅಥವಾಪಾಯಲ್ ಶಾಹ್ – 9591398489 ಇವರನ್ನು ಸಂಪರ್ಕಿಸಬಹುದು.