ಉಪಯುಕ್ತ ಮಾಹಿತಿ

ಬುದ್ಧನ ಕಾಲದ ಈ ಮಹಾನ್ ಚಿಂತಕ ಹೇಳಿರೋ ಈ 10 ಮಾತಿನಿಂದ ನಿಮ್ಮ ಜೀವನದ ದಿಕ್ಕು ಬದಲಾಗುತ್ತೆ!ಆ ಮಹಾನ್ ಚಿಂತಕ ಯಾರು ಗೊತ್ತಾ?

By admin

July 24, 2017

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಬುದ್ಧನ ಕಾಲದ ಈ ಮಹಾನ್ ಚಿಂತಕ ಒಬ್ಬ ಹೇಳಿರೋ ಈ 10 ಮಾತಿನಿಂದ ನಿಮ್ಮ ಜೀವನದ ದಿಕ್ಕು ಬದಲಾಗುತ್ತೆ….

ಯಾರು ಗೊತ್ತಾ ?  ಅವರೇ ಕನ್ಫ್ಯೂಷಿಯಸ್. ಇವರು ಹೆಚ್ಚು ಕಡಿಮೆ ನಮ್ಮ ಗೌತಮ ಬುದ್ಧನ ಕಾಲದೋರು….

ಸಮಾಜ ಅಂದಮೇಲೆ ಅವರಲ್ಲಿ ಜನರ ನಡುವೆ ಎಂಥ ಸಂಬಂಧ ಇರಬೇಕು, ಎಂತೆಂಥ ನೀತಿಗಳಿರಬೇಕು ಅನ್ನೋ ವಿಷಯದ ಬಗ್ಗೆ ಎಲ್ಲಾ ಅವರು ತುಂಬಾ ಬರೆದಿಟ್ಟು ಹೋಗಿದ್ದಾರೆ.

ಇವರ ನುಡಿಮುತ್ತುಗಳು ಇಲ್ಲಿ ನಿಮಗೋಸ್ಕರ ಕೊಟ್ಟಿದ್ದೀವಿ.ಯಾಕೆಂದ್ರೆ ಇವುಗಳಿಗೆ ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸೋ ಶಕ್ತಿ ಇದೆ..

1. ನಿಲ್ಲುವ ಯೋಚನೆ ಇಲ್ಲದೆ ಹೋದರೆ ನೀವು ಎಷ್ಟು ನಿಧಾನವಾಗಿ ನಡೆದರೂ ಪರವಾಗಿಲ್ಲ.

2. ನಿಮ್ಮನ್ನು ಮೀರಿಸದಿರುವವರ ಜೊತೆ ಗೆಳೆತನ ಮಾಡಿಕೊಳ್ಳಬೇಡಿ.

3. ತುಂಬಾ ಕೋಪ ಮಾಡಿಕೊಳ್ಳುವುದಕ್ಕೆ ಮುಂಚೆ, ಅದರಿಂದಾಗುವ ಪರಿಣಾಮಗಳ ಬಗ್ಗೆ ಯೋಚನೆ ಮಾಡಿ.

4. ಗುರಿ ಮುಟ್ಟುವುದಕ್ಕೆ ಆಗುವುದಿಲ್ಲ ಎಂದು ಸ್ಪಷ್ಟವಾದಾಗ ಗುರಿ ಬದಲಾಯಿಸಬೇಡಿ.ನೀವಿಡುವ  ಹೆಜ್ಜೆ ಬದಲಾಯಿಸಿ.

5. ನೀವು ಯಾರನಾದರೂ ದ್ವೇಷಿಸಿದರೆ ಅವರು ನಿಮ್ಮನ್ನು ಸೋಲಿಸದಂತೆ.

6. ಅಧಮನಾದವನು ಬೇರೆಯವರಲ್ಲಿ ಏನನ್ನು ಹುಡುಕುತ್ತಾನೋ, ಅದನ್ನು ಉತ್ತಮನಾದವನು ತನ್ನಲ್ಲೇ ಹುಡುಕುತ್ತಾನೆ.

7. ನೀವು ಎಲ್ಲಿಗೆ ಹೋದರೂ ಪೂರ್ತಿ ಮನಸ್ಸಿನಿಂದ ಹೋಗಿ.

8. ತಮ್ಮ ಅಜ್ಞಾನವನ್ನು ತಾವೇ ಕಂಡುಕೊಂಡು ಜ್ಞಾನವನ್ನು ಯಾರು ಹುಡುಕುತ್ತಿರುವುರೋ ಅವರಿಗೆ ಮಾತ್ರ ಅದನ್ನು ಕೊಡಿ.

9. ಚಿಕ್ಕ ಲಾಭಗಳ ಬಲೆಗೆ ಬಿದ್ದರೆ ದೊಡ್ಡ ಕೆಲಸಗಳು ಆಗುವುದಿಲ್ಲ.

10. ಅವರು ನಿಮ್ಮ ಬೆನ್ನ ಮೇಲೆ ಉಗಿದರೆ ನೀವು ಅವರಿಗಿಂತ ಮುಂದೆ ಇದ್ದೀರಿ ಅಂತ ಅರ್ಥ.