ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಆಕಾಶದಿಂದ ಫುಟ್‌ಬಾಲ್ ಗಾತ್ರದ ಬಾನುಗಲ್ಲು ಬಿದ್ದ ಅಪರೂಪದ ಘಟನೆ ವರದಿಯಾಗಿದೆ.ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು.
ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು.
“ರೈತರು ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಭಾರೀ ಗಾತ್ರದ ಕಲ್ಲು ಆಕಾಶದಿಂದ ದೊಡ್ಡ ಸದ್ದಿನೊಂದಿಗೆ ಬಿತ್ತು” ಎಂದು ಮಧುಬಾನಿ ಜಿಲ್ಲಾದಿಕಾರಿ ಶಿರ್ಸತ್ ಕಪಿಲ್ ಅಶೋಕ್ ಹೇಳಿದ್ದಾರೆ.
ಹೊಗೆ ಸಂಪೂರ್ಣ ನಿಂತ ಬಳಿಕ ರೈತರು ಹೊಲಕ್ಕೆ ವಾಪಾಸ್ಸಾಗಿದ್ದಾರೆ. ನಾಲ್ಕು ಅಡಿಯ ಹೊಂಡದಿಂದ ಕಲ್ಲನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ವಿವರಿಸಿದ್ದಾರೆ.”ಇದು ಅತ್ಯಂತ ಶಕ್ತಿಶಾಲಿ ಬಾನುಗಲ್ಲು ಆಗಿದ್ದು, ಹೊಳಪಿನಿಂದ ಕೂಡಿತ್ತು. ಸುಮಾರು 15 ಕೆಜಿ ತೂಕವಿತ್ತು” ಎಂದು ವಿವರ ನೀಡಿದ್ದಾರೆ. ವಿಜ್ಞಾನಿಗಳು ಈ ವಸ್ತುವನ್ನು ವಿಶ್ಲೇಷಿಸಿ ಇದು ಬಾನುಗಲ್ಲು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಬಾನುಗಲ್ಲುಗಳು ಧೂಳು ಹಾಗೂ ಕಲ್ಲಿನ ಕಣಗಳಾಗಿದ್ದು, ಸಾಮಾನ್ಯವಾಗಿ ಭೂಮಿಯ ವಾತಾವರಣದ ಮೂಲಕ ಹಾದು ಬರುವಾಗ ಭಸ್ಮವಾಗುತ್ತವೆ. ಭಸ್ಮವಾಗಿ ಉಳಿದ ಭಾಗವನ್ನು ಬಾನುಗಲ್ಲು ಎನ್ನಲಾಗುತ್ತದೆ. 2016ರಲ್ಲಿ ತಮಿಳುನಾಡಿನಲ್ಲಿ ಇಂಥ ಬಾನುಗಲ್ಲು ಬಿದ್ದು ಬಸ್ ಚಾಲಕನೊಬ್ಬ ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದರು. 2013ರ ಫೆಬ್ರುವರಿಯಲ್ಲಿ ಇಂಥ ಬೃಹತ್ ಬಾನುಗಲ್ಲು ರಷ್ಯಾದ ಉರಲ್ ಪರ್ವತದ ಮೇಲೆ ಬಿದ್ದು, ಸೃಷ್ಟಿಯಾದ ಶಾಕ್‌ವೇವ್‌ನಿಂದ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸಾವಿರಾರು ಮನೆಗಳು ಧ್ವಂಸಗೊಂಡಿದ್ದವು.