ಬಿಸಿಲು ಬಿಸಿಲು ಬಿಸಿಲು…!!!

By admin

April 04, 2017

ಬಿಸಿಲು,ಬಿಸಿಲು, ಎಲ್ಲಿ ನೋಡಿದರೂ ಬಿಸಿಲ ಬೇಗೆ, ಧಗೆ. ಇಷ್ಟು ದಿನ ಕಣ್ಣಿಗೆ, ಮನಸಿಗೆ ತಂಪಾಗಿದ್ದ ಬೆಂಗಳೂರು, ಈಗ ಬಿರು ಬಸಿಲಿನ ನಾಡಾಗಿದೆ. ಜನರಿಗೆ ಕುಳಿತಲ್ಲಿ ಕೂರಲಾಗದೆ, ನಿಂತಲ್ಲಿ ನಿಲ್ಲಲಾಗದ ಹಾಗೆ ಮಾಡಿದೆ ಈ ಬಿಸಿಲು. ಬೇಸಿಗೆಯು ಶುಭಾರಂಭವಾಗಿ 4 ದಿನ ಆಗಿಲ್ಲ ಆಗಲೇ ಜನರ ಮೈನೀರಿಳಿಸುತ್ತಿದೆ ಈ ಬೇಸಿಗೆ.

ತಂಪು ತಂಪಾದ ತಂಪು ಪಾನೀಯಗಳ ಬಳಕೆ ಹೆಚ್ಚಾಗಿದೆ. ಹಾಗೆ ಕಲ್ಲಂಗಡಿ, ಕಿತ್ತಳೆ ಮತ್ತು ಎಳೆನೀರಿನ ಉಪಯೋಗ ಆಗಲೇ ಶುರುವಾಗಿದೆ. ನೀರಿನ ಕಷ್ಟ ಎದುರಾಗಿದೆ. ಪ್ರಾಣಿಗಳು ಪಕ್ಷಿಗಳಿಗೂ ಈ ಬಿರು ಬಸಿಲಿನ ಬೇಗೆ ತಟ್ಟತೊಡಗಿದೆ.

ಬೆಂಗಳೂರೇ ಹೀಗಾದರೆ ಇನ್ನು ಉತ್ತರ ಕನ್ನಡ, ಗಡಿ ನಾಡುಗಳ ಪರಿಸ್ಥಿತಿ ಹೇಳಲೂ ಆಗದ ಹಾಗಿದೆ. 10 ರಿಂದ 4 ಗಂಟೆಯವರೆಗೆ ಹೊರಗೆ ಬರಲಾಗದ ಸ್ಥಿತಿ ಈ ಊರುಗಳಲ್ಲಿದೆ. ಹಣ್ಣು ಹಾಗೂ ತಂಪು ಪಾನೀಯಗಳ ಮಾರಾಟ ಬಲು ಭರಾಟೆಯಿಂದ ಸಾಗಿದೆ.

ತಾಯಂದಿರ ಕಷ್ಟ ಹೇಳಲಿಕ್ಕಾಗದಷ್ಟಿದೆ. ಮಕ್ಕಳಿಗೆ ಪರೀಕ್ಷೆ ಮುಗಿದು ಬೇಸಿಗೆ ರಜಾ ಶುರುವಾಗಿದೆ. ಇನ್ನು ಪುಟ್ಟ ಕಂದಮ್ಮಗಳ ಗೋಳಂತೂ ಹೇಳಲಾಗದು. ಅಳು ಒಂದೇ ಗೋಳಾಗಿದೆ. ಇವೆಲ್ಲದರ ನಡುವೆ ಕರೆಂಟ್ ಹೋದರಂತೂ ಒಂದು ಕ್ಷಣ ಕೂಡ ಇರಲಿಕ್ಕೆ ಆಗಿಲ್ಲ.

ಇದು ಮಕ್ಕಳ ಕತೆಯಾದರೆ ವಯಸ್ಸಾದವರ ಕಷ್ಟ ಮತ್ತೊಂದು ಥರ. ಮಲಗಲೂ ಆಗದೆ, ಕೂರಲೂ ಆಗದ ಅವರ ಪರಿಸ್ಥಿತಿ ಹೇಳತೀರದು. ಮಾರ್ಚ್ ನಲ್ಲೇ ಈ ಗತಿಯಾದರೆ ಇನ್ನೂ ಮೇ ಜೂನ್ ನಲ್ಲಿ ಏನಾಗಬಹುದು ಹೇಳಿ.

ನಾವೆಲ್ಲರೂ ಇದಕ್ಕೆ ಪರಿಹಾರ ಏನೂ ಮಾಡದೇ ಬಿಸಿಲು, ಬೇಸಿಗೆ ಅಂತ ನಾವು ನಮ್ಮ ಕೆಲಸ ಮಾಡುತ್ತ ಸುಮ್ಮನೆ ಕುಳಿತುಕೊಳ್ಳುವುದು ಬಿಟ್ಟು ಮನೆಯಲ್ಲಿರೊ ಎಲ್ಲ ಸದಸ್ಯರಿಗೂ ಒಬ್ಬರಿಗೆ ಒಂದರಂತೆ ಗಿಡಗಳನ್ನು ನೆಟ್ಟು ಬೆಳೆಸಿ. ಮನೆ ಕಟ್ಟುವವರೆಲ್ಲರೂ ಮಳೆ ಕೋಯ್ಲ ಮಾಡಿ, ಊರಿನ ಸುತ್ತ ಮಳೆ ನೀರಿನ ಹೋರಟ ನಿರ್ಮಿಸಿ, ನಮ್ಮ ಕರ್ತವ್ಯ ಮಾಡಿದರೆ ಈ ಬಿಸಿ ಬಿಸಿ ಬೇಸಿಗೆಯಿಂದ ಸ್ವಲ್ಪವಾದರೂ ತಪ್ಪಿಸಿಕೊಳ್ಳಬಹುದು