ಬಿಜೆಪಿಯನ್ನು ಎದುರಿಸಲು ನಾನು ಉಪನಿಷದ್, ಭಗವದ್ಗೀತೆ ಓದ್ತಿದ್ದೇನೆ! ಹೀಗೆಂದು ಹೇಳಿರುವವರು ಬೇರಾರೂ ಅಲ್ಲ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು.
ನಿಮಗ್ಗೊತ್ತಾ? ನಾನು ಆರೆಸ್ಸೆಸ್ ಮತ್ತು ಬಿಜೆಪಿಯ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಹಾಗಾಗಿ, ಇತ್ತೀಚೆಗೆ ನಾನು ಉಪನಿಷದ್ ಮತ್ತು ಭಗವದ್ಗೀತೆಯನ್ನು ಓದ್ತಿದ್ದೇನೆ ಎಂದು ಸಮಾರಂಭವೊನ್ದರಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ರಾಹುಲ್ ಅವರು ತಿಳಿಸಿದ್ದಾರೆ.
ನಾನು ಅವರನ್ನು ಏನು ಕೇಳಲು ಇಚ್ಛಿಸುತ್ತೇನೆಂದರೆ : –
ನನ್ನ ಗೆಳೆಯನೇ, ನೀವು ಇದನ್ನು ಮಾಡುತ್ತಿದ್ದೀರಿ. ನೀವು ಜನತೆಯನ್ನು ತುಳಿಯುತ್ತಿದ್ದೀರಿ. ಆದರೆ ಉಪನಿಷತ್ತುಗಳಲ್ಲಿ… ನಾವೆಲ್ಲಾ ಒಂದೇ! ಎಂದು ಬರೆದಿದೆ ನೋಡಿ ಗೆಳೆಯರೇ! ನಿಮ್ಮದೇ ಧರ್ಮದಲ್ಲಿ ಹೇಳಿರುವುದಕ್ಕೆ ತದ್ವಿರುದ್ಧವಾಗಿ ನೀವೇಕೆ ನಡೆದುಕೊಳ್ಳುತ್ತಿದ್ದೀರಿ? ಎಂದು ಕಾರ್ಯಕರ್ತರನ್ನುದ್ದೇಶಿಸಿ ರಾಹುಲ್ ಹೇಳಿದರೆಂದು ಪಕ್ಷದ ಮೂಲಗಳು ತಿಳಿಸಿವೆ.
ಮೂಲಭೂತವಾಗಿ ಬಿಜೆಪಿ ಪಕ್ಷವು ”ಭಾರತವನ್ನು ಅರ್ಥ ಮಾಡಿಕೊಳ್ಳುವುದಿಲ್ಲ”. ಅದೇನಿದ್ದರೂ ”ನಾಗಪುರವನ್ನು ಅರ್ಥ ಮಾಡಿಕೊಳ್ಳುತ್ತದೆ” ಎಂದೂ ರಾಹುಲ್ ಗಾಂಧಿ ಹೇಳಿದ್ದಾರಂತೆ.