ಸಿನಿಮಾ

ಬಿಚ್ಚಮ್ಮ ಸನ್ನಿ ಲಿಯೋನ್ ಮೇಲೆ ಎಫ್‍ಐಆರ್!ಅಸಲಿ ಕಾರಣ ಏನು ಗೊತ್ತಾ?

By admin

February 23, 2019

ಇತ್ತೀಚೆಗಷ್ಟೇ ಜೂನಿಯರ್ ಇಂಜಿನಿಯರ್ ಲಿಸ್ಟ್ ನಲ್ಲಿ ಟಾಪರ್ ಆಗಿ ಆಯ್ಕೆ ಆಗಿದ್ದ ಸನ್ನಿ ಲಿಯೋನ್ ವಿರುದ್ಧ ಈಗ ಎಫ್‍ಐಆರ್ ದಾಖಲಾಗಿದೆ. ಆದರೆ ಈ ಬಗ್ಗೆ ಸನ್ನಿ ಲಿಯೋನ್ ಅಭಿಮಾನಿಗಳು ಬೇಸರಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಕೇಸ್ ದಾಖಲಾಗಿರುವುದು “ಸನ್ನಿ ಲಿಯೋನ್” ಹೆಸರಿನಲ್ಲಿ ನಕಲಿ ದಾಖಲೆ ಸಲ್ಲಿಸಿ ಆಯ್ಕೆ ಆಗಿರುವ ಅಭ್ಯರ್ಥಿ ಮೇಲೆ.

ಬಿಹಾರದ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ಡಿಪಾರ್ಟ್‍ಮೆಂಟ್ (ಪಿಎಚ್‍ಇಡಿ)ನ ಜೂನಿಯರ್ ಇಂಜಿನಿಯರ್ ಮೆರಿಟ್ ಲಿಸ್ಟ್ ನಲ್ಲಿ ಸನ್ನಿ ಲಿಯೋನ್ ಹೆಸರು ಟಾಪರ್ ಸ್ಥಾನದಲ್ಲಿತ್ತು. ಆಕೆ ಶೇ. 98.50 ಸ್ಕೋರ್ ಮಾಡಿದ್ದಾರೆ ಎಂದು ಇಲಾಖೆಯೇ ಪ್ರಕಟಿಸಿತ್ತು.

ಆದರೆ ಅದು ನಿಜವಾದ ಸನ್ನಿ ಲಿಯೋನ್ ಅಲ್ಲ, ಆಕೆಯ ಹೆಸರಿನಲ್ಲಿ ಯಾರೋ ನಕಲಿ ದಾಖಲೆ ಸಲ್ಲಿಸಿದ್ದಾರೆ ಎಂದು ಇಲಾಖೆಗೆ ತಡವಾಗಿ ತಿಳಿದು ಬಂದಿದೆ.ಇಲಾಖೆಯಲ್ಲಿ ಖಾಲಿ ಇರುವ 214 ಹುದ್ದೆಗಳಿಗೆ 17,000 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಇದೂ ಒಂದಾಗಿತ್ತು. ಹೀಗೆ ಸುಳ್ಳು ದಾಖಲೆ ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಂಡಿರುವ ಆ ಆರೋಪಿ ವಿರುದ್ಧ ಇಲಾಖೆ ದೂರು ದಾಖಲಿಸಿದೆ.