inspirational

ಬಿಗ್ ಶಾಕ್..!ಅಡುಗೆ ಅನಿಲ ಬಳಕೆದಾರರ ಜೇಬಿಗೆ ಬೀಳಲಿದೆ ಕತ್ತರಿ…ತಿಳಿಯಲು ಈ ಲೇಖನ ಓದಿ…

By admin

March 26, 2018

ಏಪ್ರಿಲ್ 1ರಿಂದ ವಾಹನ ಚಲಾಯಿಸಲು ನೈಸರ್ಗಿಕ ಅನಿಲ ಬಳಸುತ್ತಿರುವವರು ಹಾಗೂ ಅಡುಗೆ ಅನಿಲ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ಏಪ್ರಿಲ್ 1ರಂದು ಸ್ಥಳೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದ ದರ ಪರಿಷ್ಕರಣೆಯಾಗಲಿದೆ. 2 ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಏರಿಕೆ ಮಾಡುವ ಸಾಧ್ಯತೆ ಇದೆ.

ಬೆಲೆ ಏರಿಕೆ ಕಾರಣ:-

ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊಡೆತ ಬೀಳಲಿದೆ. ಆದ್ರೆ ಅನಿಲ ಕ್ಷೇತ್ರಗಳಲ್ಲಿ 10 ಬಿಲಿಯನ್ ಡಾಲರ್ ನಷ್ಟು ಭಾರೀ ಮೊತ್ತ ಹೂಡಿಕೆ ಮಾಡಲು ಮುಂದಾಗಿರುವ ಖಾಸಗಿ ಕಂಪನಿ ರಿಲಯೆನ್ಸ್ ಇಂಡಸ್ಟ್ರೀಸ್ ಹಾಗೂ ಸರ್ಕಾರಿ ಸಂಸ್ಥೆ ಓ ಎನ್ ಜಿ ಸಿ ಯಂತಹ ಕಂಪನಿಗಳು ಕೊಂಚ ನಿರಾಳವಾಗಲಿವೆ.

ಸದ್ಯ ಪ್ರತಿ ಯೂನಿಟ್ ಗೆ 2.89 ಡಾಲರ್ ಇದೆ. ಪರಿಷ್ಕರಣೆ ಬಳಿಕ ಬೆಲೆ ಪ್ರತಿ ಯೂನಿಟ್ ಗೆ 3.06 ಡಾಲರ್ ನಷ್ಟಾಗುವ ಸಂಭವವಿದೆ. 2016ರ ಮಾರ್ಚ್ ನಲ್ಲೂ ಇದೇ ರೀತಿ ಬೆಲೆ ಏರಿಕೆ ಆಗಿತ್ತು. ಆಗ ಒಂದು ಯೂನಿಟ್ ಬೆಲೆ 3.32 ಡಾಲರ್ ಗೆ ತಲುಪಿತ್ತು.