ಕನ್ನಡದ ಖಾಸಗಿ ಚಾನಲ್ ನಡೆಸುವ, ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಈಗಾಗಲೇ ತುಂಬಾ ಜನಪ್ರಿಯವಾಗಿದೆ. ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಲ್ಲಿಯವರಿಗೂ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡ ಸೆಲೆಬ್ರೆಟಿಗಳಿಗೆ ಮಾತ್ರ ಭಾಗವಹಿಸುವುದಕ್ಕೆ ಅವಕಾಶವಿತ್ತು.
ಆದ್ರೆ ಈಗ ಬಿಗ್ ಬಾಸ್ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಾನೇ ಇದ್ದು, ಬಿಗ್ ಬಾಸ್ ಮೂಲಕ ಮತ್ತೊಂದು ಹೊಸ ದಾಖಲೆ ಮಾಡುವ ಪ್ರಯತ್ನ ಕೂಡ ನಡೆದಿದೆ. ಅದೇನಂದ್ರೆ ಮುಂದೆ ಬರಲಿರುವ ಬಿಗ್ ಬಾಸ್ ಸೀಸನ್ 5ರಲ್ಲಿ ಪಾಲ್ಗೊಳ್ಳಲು ವಾಹಿನಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿದೆ.
ಬಿಗ್ ಬಾಸ್ ಸೀಸನ್ 5ರಲ್ಲಿ ಜನಸಾಮಾನ್ಯರಿಗೂ ಅವಕಾಶ…
ಬಿಗ್ ಬಾಸ್ ನಲ್ಲಿ ಭಾಗವಹಿಸುವ ಆಸಕ್ತಿ ಉಳ್ಳವರು ಆನ್ ಲೈನ್ ಆಡಿಶನ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಬಹುದು. ನೀವ್ಯಾಕೆ ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸಲು ಇಷ್ಟಪಡುತ್ತೀರಾ? ಇತರರಿಗಿಂತ ನೀವು ಅರ್ಹರೆಂದು ನಿಮಗೇಕೆ ಅನಿಸುತ್ತದೆ? ಇಂತಹ ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಆಡಿಶನ್ ಗೆ ರಿಜಿಸ್ಟ್ರೇಶನ್ ಈಗಾಗಲೇ ಓಪನ್ ಆಗಿದೆ. ಆಡಿಶನ್ ಮುಗಿದ ಬಳಿಕ ವಿಜೇತರ ಹೆಸರನ್ನು ಪ್ರಕಟಿಸಲಾಗುತ್ತದೆ. ಬಿಗ್ ಬಾಸ್ ಸೀಸನ್ 5 ಸಪ್ಟೆಂಬರ್ ನಲ್ಲಿ ಆರಂಭವಾಗಲಿದ್ದು, ಈ ಆಡಿಶನ್ ನಲ್ಲಿ ಗೆದ್ದವರು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಸೀಸನ್ 5’ ಪ್ರಸಾರವಾಗಲಿದೆ. ನಟ ಕಿಚ್ಚ ಸುದೀಪ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.