ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 7 ಕೊನೆಯ ಹಂತವನ್ನ ತಲುಪಿದ್ದು ಫಿನಾಲೆಗೆ ಇನ್ನು ಕೆಲವು ದಿನಗಳು ಮಾತ್ರ ಭಾಕಿ ಉಳಿದುಕೊಂಡಿದೆ, ಈಗಾಗಲೇ 108 ಕ್ಕೂ ದಿನಗಳ ಕಾಲ ಬಿಗ್ ಬಾಸ್ ನಡೆದಿದ್ದು ಈ ವಾರ ಬಿಗ್ ಬಾಸ್ ಫೈನಲ್ ನಡೆಯಲಿದ್ದು ಐದು ಘಟಾನುಘಟಿ ಸ್ಪರ್ಧಿಗಳು ಬಿಗ್ ಬಾಸ್ ನಲ್ಲಿ ಫೈನಲ್ ಹಂತವನ್ನ ತಲುಪಿದ್ದಾರೆ. ಇನ್ನು ಆರಂಭದಲ್ಲಿ ಸ್ವಲ್ಪ ಮಂಕಾಗಿದ್ದ ಬಿಗ್ ಬಾಸ್ ಈಗ ಬಹಳ ರೋಚಕ ಹಂತವನ್ನ ತಲುಪಿದ್ದು TRP ಯಲ್ಲಿ ಕೂಡ ಮೇಲಕ್ಕೆ ಬರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಭಾರಿ ಬಿಗ್ ಬಾಸ್ ಬಹಳ ರೋಚಕ ಹಂತವನ್ನ ತಲುಪಿದ್ದು ಫೈನಲ್ ತಲುಪುತ್ತಾರೆ ಅಂದುಕೊಂಡಿದ್ದ ಕೆಲವು ಸ್ಪರ್ಧಿಗಳು ದಿಢೀರನೆ ಎಲಿಮಿನೇಟ್ ಆಗಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಇನ್ನು ಇಂದು ಬಿಗ್ ಬಾಸ್ ಮನೆಯಲ್ಲಿ ಇಂದು ದಿಡೀರ್ ಎಲಿಮಿನೇಟ್ ನಡೆದಿದ್ದು ನಟ ಹಾಗು ನಿರ್ದೇಶಕರಾದ ಹರೀಶ್ ರಾಜ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಕಳೆದ ಶನಿವಾರ ಮನೆಯಿಂದ ಪ್ರಿಯಾಂಕಾ ಅವರು ಹೊರಗೆ ಬಂದಿದ್ದರು, ಹಾಗಾದರೆ ರಾತ್ರೋರಾತ್ರಿ ದಿಡೀರ್ ಎಲಿಮಿನೇಟ್ ಆದ ಹರೀಶ್ ರಾಜ್ ಅವರು ಬಿಗ್ ಬಾಸ್ ಮನೆಯಲ್ಲಿ 108 ದಿನಗಳ ಕಾಲ ಇದ್ದಿದ್ದಕ್ಕೆ ಅವರು ಬಿಗ್ ಬಾಸ್ ಕಡೆಯಿಂದ ಪಡೆದ ಬೃಹತ್ ಸಂಭಾವನೆ ಎಷ್ಟು ಎಂದು ತಿಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಹಾಗಾದರೆ ಹರೀಶ್ ರಾಜ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಸಿಕ್ಕ ಬೃಹತ್ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನಿನ್ನೆ ದಿಡೀರ್ ಆಗಿ ಹರೀಶ್ ರಾಜ್ ಅವರನ್ನ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲಾಗಿದೆ.
ಎಲ್ಲರೂ ಭೂಮಿ ಶೆಟ್ಟಿ ಅಥವಾ ದೀಪಿಕಾ ದಾಸ್ ಅವರು ಎಲಿಮಿನೇಟ್ ಆಗುತ್ತಾರೆ ಎಂದು ಭಾವಿಸಿದ್ದರು, ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದ್ದು ಹರೀಶ್ ರಾಜ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಹರೀಶ್ ರಾಜ್ ಅವರು ಕನ್ನಡ ಚಿತ್ರರಂಗ ಮತ್ತು ಮತ್ತು ಕನ್ನಡ ಧಾರಾವಾಹಿ ಲೋಕದಲ್ಲಿ ಗುರುತಿಸಿಕೊಂಡಂತಹ ನಟ ಮತ್ತು ನಿರ್ದೇಶಕ, ತುಂಬಾ ಚಿತ್ರಗಳನ್ನ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು ಕನ್ನಡ ಒಬ್ಬ ಬಹುಮುಖ ಪ್ರತಿಭೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಹಿಂದಿನ ಬಿಗ್ ಬಾಸ್ ನಲ್ಲಿ ಕೂಡ ಹರೀಶ್ ರಾಜ್ ಅವರಿಗೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು ಆದರೆ ಆ ಸಮಯದಲ್ಲಿ ಅವರು ಒಪ್ಪಿಕೊಂಡಿರಲಿಲ್ಲ, ಈಗ ಬಿಗ್ ಬಾಸ್ 7 ರಲ್ಲಿ ಹರೀಶ್ ರಾಜ್ ಅವರಿಗೆ ಅವಕಾಶ ಸಿಕ್ಕಿದ್ದು ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಂಡಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ 108 ದಿನಗಳ ಕಾಲ ಇದ್ದ ಹರೀಶ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಬಹಳ ಒಳ್ಳೆಯ ಸಂಭಾವನೆ ಸಿಕ್ಕಿದ್ದು ವಾರಕ್ಕೆ 40 ಸಾವಿರ ರೂಪಾಯಿಯಂತೆ 15 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಹರೀಶ್ ರಾಜ್ ಅವರಿಗೆ ಸುಮಾರು 6 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಈ ಹಣದಿಂದ ಹರೀಶ್ ಅವರ ಹಲವು ಕಷ್ಟಗಳು ಪರಿಹಾರ ಆಗುವುದಲ್ಲದೆ ಹರೀಶ್ ಅವರು ಹಲವು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, 108 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ದೊಡ್ಡ ಸಾಧನೆಯನ್ನ ಮಾಡಿದ್ದಾರೆ ಹರೀಶ್ ರಾಜ್ ಅವರು, ಸ್ನೇಹಿತರೆ ನಿಮ್ಮ ಪ್ರಕಾರ ಈ ಭಾರಿಯ ಬಿಗ್ ಬಾಸ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.