ಮನರಂಜನೆ

ಬಿಗ್ ಬಾಸ್ ಮನೆಯಲ್ಲಿ ದಿವಾಕರ್ ರಿಯಾಜ್ ಮೇಲೆ ತನ್ನ ಸೇಡು ತೀರಿಸಿಕೊಂಡಿದ್ದು ಹೇಗೆ ಗೊತ್ತಾ…? ತಿಳಿಯಲು ಈ ಲೇಖನ ಓದಿ….

By admin

January 09, 2018

ಬಿಗ್ ಬಾಸ್ ಮನೆಗೆ ಕಾಮನ್ ಮ್ಯಾನ್ ಆಗಿ ಎಂಟ್ರಿ ಪಡೆದವರಲ್ಲಿ ದಿವಾಕರ್ ಕೂಡ ಒಬ್ಬರು.. ಇವರ ಜೊತೆ ರಿಯಾಜ್ ಕೂಡ ಕಾಮನ್ ಮ್ಯಾನ್ ಲಿಸ್ಟ್ ನಿಂದ ಬಂದವರೇ.. ಸೆಲೆಬ್ರಿಟಿ ಹಾಗೂ ಕಾಮನ್ ಮ್ಯಾನ್ ನಡುವೆ ಬಿರುಕು ಉಂಟಾದಾಗ ದಿವಾಕರ್ ಪರ ನಿಂತರವೇ ರಿಯಾಜ್.

 

ಟಾಸ್ಕ್ ಇಲ್ಲದಿದ್ದರೂ ಒಮ್ಮೊಮ್ಮೆ ವಾಕ್ ಸಮರಗಳು ಇವರಿಬ್ಬರ ನಡುವೆ ಆಗಾಗ ನಡೆಯುತ್ತಿರುತ್ತೆ.. ಇನ್ನೂ ದಿವಾಕರ್ ಬಿಗ್ ಬಾಸ್ ಮನೆಯಿಂದ ಹೊರ‌ ಹೋಗಿ, ಮತ್ತೆ‌ ಒಂದು ವಾರ ಬಿಟ್ಟು ಬಿಗ್ ಬಾಸ್ ಮನೆಗೆ ವಾಪಸ್ ಬಂದ್ಮೇಲೆ, ರಿಯಾಜ್ ಕೆಂಡ ಮಂಡಲವಾಗಿದ್ದಾರೆ

ದಿವಾಕರ್ ತಪ್ಪು ಇದ್ದರೂ ಇಲ್ಲದೇ ಇದ್ದರೂ ಸಹ ಪ್ರಾರಂಭದಿಂದಲೂ ರಿಯಾಜ್ ದಿವಾಕರ್ ಬೆನ್ನಿಗೆ ನಿಂತಿದ್ರೂ. ಅದು ಯಾರ‌ ಕಾಣ್ಣು ಬಿತ್ತೊ ಏನೋ ಅಣ್ತಮ್ಮಂದಿರಂತೆ ಇದ್ದವರು ದಾಯಾದಿಗಳಾಗಿದ್ದಾರೆ. ಯಾವುದೇ ಟಾಸ್ಕ್ ಪ್ರಾರಂಭವಾದಲ್ಲಿ ರಿಯಾಜ್ ಹಾಗೂ ದಿವಾಕರ್ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿರುತ್ತಾರೆ.

ಇಂದು ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಇಷ್ಟ ಇರುವವರಿಗೆ ಹಾರ ಹಾಕಬೇಕು, ಇಷ್ಟ ಇಲ್ಲದೆ ಇರುವವರಿಗೆ ಮಸಿ ಬಳಿಯಬೇಕು.‌ ಈ ಟಾಸ್ಕ್ ನಲ್ಲಿ ಚಂದನ್ ದಿವಾಕರ್ ಅವರಿಗೆ ಹಾರ ಹಾಕಿದರು. ಇದಕ್ಕೆ ಪೂರಕವಾಗಿ ದಿವಾಕರ್ ಚಂದನ್ ಅವರಿಗೆ ಹಾರ ಹಾಕಿದರು.

 

ಇನ್ನೂ ಇಷ್ಟ ಇಲ್ಲದವರಿಗೆ ಮಸಿ ಬಳಿಯುವ ಸರದಿ ಬಂದಾಗ ದಿವಾಕರ್, ರಿಯಾಜ್ ಅವರಿಗೆ ಮಸಿ ಬಳಿದರು. ಇದ್ದರಿಂದ ಕೋಪಕೊಂಡ ರಿಯಾಜ್ ದಿವಾಕರ್ ಅವರ‌ ವಿರುದ್ಧ ಮಾತಾನಾಡಲು ಶುರು ಮಾಡಿದರು. ದಿವಾಕರ್ ಮನೆಯಿಂದ ಹೊರ‌ ಹೋಗಿ ಬಂದ್ಮೇಲೆ ಹೊಸಬರಂತೆ ಆಡ್ತಾರೆ ಎಂದು ಮಾತು ಪ್ರಾರಂಭವಾಗುತ್ತಿದ್ದಂತೆ ದಿವಾಕರ್ ಇದು ದುರಹಂಕಾರ ಎಂದು ವಿರೋಧ ವ್ಯಕ್ತಪಡಿಸಿದರು.