ಸಿನಿಮಾ

ಬಾಹುಬಲಿ-2 ದಾಖಲೆಗಳು ಉಡೀಸ್ !!!

By admin

June 05, 2017

ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದ್ದು ಈಗ ಹಳೆಯ ಮಾತು. ಇದೀಗ ‘ಬಾಹುಬಲಿ 2’ ಚಿತ್ರದ ಎಲ್ಲ ದಾಖಲೆಗಳನ್ನು ಮತ್ತೊಂದು ಸೌತ್‌ ಇಂಡಿಯನ್‌ ಚಿತ್ರ ಮುರಿಯಲಿದೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

ಸದ್ಯಕ್ಕೆ ಪ್ರಭಾಸ್‌ ಅಭಿನಯದ ‘ಬಾಹುಬಲಿ 2’ ಚಿತ್ರ ಜಗತ್ತಿನಾದ್ಯಂತ 1700 ಕೋಟಿ ಕಲೆಕ್ಷನ್‌ ಸನಿಹಕ್ಕೆ ಬಂದು ನಿಂತಿದೆ. ಅಷ್ಟೇ ಅಲ್ಲದೆ ಈ ಚಿತ್ರದ ಹಿಂದಿ ಅವತರಣಿಕೆಯೇ 500 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ. ಭಾರತೀಯ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲಾಗಿ ನಿಂತಿರುವ ‘ಬಾಹುಬಲಿ’ ಚಿತ್ರದ ದಾಖಲೆಗಳನ್ನು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ 2.0 ಚಿತ್ರ ಅಳಿಸಿಹಾಕಲಿದೆಯಂತೆ.

ಹೌದು, ಕೆಲ ಸಿನಿ ಪಂಡಿತರು ಈಗಾಗಲೇ 2.0 ಚಿತ್ರದ ಸಕ್ಸಸ್‌ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ ಶಂಕರ್‌ ನಿರ್ದೇಶನದ 2.0 ಚಿತ್ರ ದೇಶಾದ್ಯಂತ ಒಟ್ಟು 7000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಇದಷ್ಟೇ ಅಲ್ಲದೆ 15 ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿರುವುದು ಮತ್ತೊಂದು ವಿಶೇಷ.

ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆಯಾದ ‘ಬಾಹುಬಲಿ 2’ ಚಿತ್ರ ದೇಶಾದ್ಯಂತ 6500 ಚಿತ್ರಮಂದಿರಗಳಲ್ಲಿ ತೆರೆ ಕಂಡು, 5 ಭಾಷೆಗಳಲ್ಲಿ ಡಬ್‌ ಆಗಿ ಪ್ರೇಕ್ಷಕರನ್ನು ರಂಜಿಸಿದೆ. ಭಾಷೆ ಹಾಗೂ ಚಿತ್ರಮಂದಿರಗಳ ಲೆಕ್ಕಾಚಾರದಲ್ಲಿ ಹೊಸ ದಾಖಲೆ ಬರೆಯಲು ಅಣಿಯಗಿರುವ 2.0 ಚಿತ್ರ, ಕಲೆಕ್ಷನ್‌ ವಿಚಾರದಲ್ಲಿಯೂ ದಾಖಲೆ ಬರೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಲ್ಲಿ ಓದಿ :-ಕನ್ನಡಕ್ಕೆ ಬಾಹುಬಲಿಯ ಬಲ್ಲಾಳದೇವ !!!

ಬಹುಕೋಟಿ ವೆಚ್ಚದ ‘2.0’ ಚಿತ್ರದಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ನಿಮಗೆಲ್ಲ ಗೊತ್ತೇ ಇದೆ. ಸದ್ಯಕ್ಕೆ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ನಡೆಯುತ್ತಿದ್ದು, ಮುಂದಿನ ವರ್ಷ ಜನವರಿ 26ರಂದು ತೆರೆಗೆ ಬರುವ ನಿರೀಕ್ಷೆಯಿದೆ.