ಸುದ್ದಿ

ಬಾಳ ಸಂಗಾತಿಯನ್ನು ತಬ್ಬಿ ಮಲಗುವುದರಲ್ಲಿರುವ ಲಾಭವೇನು ಗೊತ್ತ…?ಇದನ್ನೊಮ್ಮೆ ಓದಿ..

By admin

September 09, 2019

ಕೆಲವರು ಸಂಗಾತಿಯನ್ನು ತಬ್ಬಿ ಮಲಗುತ್ತಾರೆ. ಆದ್ರೆ ಇದ್ರಿಂದ ಲಾಭವೇನು? ನಷ್ಟವೇನು? ಎಂಬುದು ಅವ್ರಿಗೆ ತಿಳಿದಿರುವುದಿಲ್ಲ. ಸಂಗಾತಿಯನ್ನು ತಬ್ಬಿ ಮಲಗುವುದ್ರಿಂದ ಸಾಕಷ್ಟು ಲಾಭವಿದೆ. ಕೇವಲ ಸಂಗಾತಿಗೆ ಪ್ರೀತಿ ವ್ಯಕ್ತಪಡಿಸುವ ವಿಧಾನ ಮಾತ್ರವಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳೂ ಇವೆ.

ಸಂಗಾತಿಯನ್ನು ತಬ್ಬಿ ಮಲಗುವುದ್ರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಸಂಶೋಧನೆಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ. ಪತಿ-ಪತ್ನಿ ತಬ್ಬಿ ಮಲಗಿದ್ರೆ ಇಬ್ಬರಿಗೂ ಆರೋಗ್ಯಕರ ಲಾಭವಿದೆ.

ತಲೆನೋವು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡ್ತಿದೆ. ರಾತ್ರಿ ಇಬ್ಬರು ತಬ್ಬಿ ಮಲಗುವುದ್ರಿಂದ ತಲೆನೋವು ಕಡಿಮೆಯಾಗುತ್ತದೆ. ಸಂಶೋಧಕರ ಪ್ರಕಾರ, ತಬ್ಬಿ ಮಲಗುವ ಸಂಗಾತಿಗೆ ಎಂದೂ ತಲೆನೋವು ಕಾಡುವುದಿಲ್ಲವಂತೆ.

ಮನಸ್ಸು ಕಿರಿಕಿರಿ ಅನುಭವಿಸುತ್ತಿದ್ದರೆ ತಬ್ಬಿ ಮಲಗಿ ಎನ್ನುತ್ತಾರೆ ತಜ್ಞರು. ತಬ್ಬಿ ಮಲಗಿದ್ರೆ ಕಿರಿಕಿರಿ ಕಡಿಮೆಯಾಗುತ್ತದೆಯಂತೆ. ಒತ್ತಡ ಕಡಿಮೆಯಾಗುವ ಜೊತೆಗೆ ದುಃಸ್ವಪ್ನ ಬೀಳುವುದಿಲ್ಲ.

ಉತ್ತಮ ನಿದ್ರೆಗೆ ಇದು ಸಹಕಾರಿ. ರಾತ್ರಿ ತಬ್ಬಿ ಮಲಗುವವರ ಆಲೋಚನಾ ಸಾಮರ್ಥ್ಯ ಸುಧಾರಿಸುತ್ತದೆಯಂತೆ.