ಬಾಯಿ ಹುಣ್ಣು ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಲ್ಲೂ ಕಂಡು ಬರುತ್ತದೆ. ಬಾಯಿ ಹುಣ್ಣು ಆದರೆ ಊಟಮಾಡುವುದು, ನೀರು ಕುಡಿಯುವುದು ಎಲ್ಲವೂ ಕಷ್ಟವಾಗುತ್ತದೆ. ಇದಕ್ಕೆ ಹಲವು ಬಗೆಯ ಮಾತ್ರೆಗಳನ್ನ ತೆಗೆದು ಕೊಂಡರು ಇದು ಕಡಿಮೆಯಾಗುವುದಿಲ್ಲ. ಈ ಬಾಯಿ ಹುಣ್ಣು ಕಾಣಿಸಿಕೊಳ್ಳಲು ಕಾರಣವೇನು…? ಈ ಬಾಯಿ ಹುಣ್ಣನ್ನ ಕಡಿಮೆ ಮಾಡುವುದು ಹೇಗೆ…? ಎಂಬುದಕ್ಕೆ ಇಲ್ಲಿದೆ ಮಾಹಿತಿ ಓದಿ ತಿಳಿಯಿರಿ…
ಬಾಯಿ ಹುಣ್ಣಿಗೆ ಮುಖ್ಯ ಕಾರಣಗಳು :-
ಬಾಯಿ ಸ್ವಚ್ಛವಾಗಿ ಇಲ್ಲದೆ ಇರುವುದು, ಬಿ ಕಾಂಪ್ಲೆಕ್ಸ್ ಕೊರತೆ ಇರುವುದು, ವೈರಸ್ ಬ್ಯಾಕ್ಟೀರಿಯಾ , ಫಂಗಲ್ ಇನ್ಫೆಕ್ಷನ್ ಇರುವುದು, ಆಗಾಗ್ಗೆ ಟೂತ್ ಪೇಸ್ಟ್ ಅನ್ನು ಬದಲಾಯಿಸುವುದು, ಹಲ್ಲಿನ ಸಮಸ್ಯೆ, ಹೊಟ್ಟೆ ಉರಿಯುವಿಗೆ, ಧೂಮಪಾನ ಮತ್ತು ಮದ್ಯ ಪಾನ ಸೇವನೆಯಿಂದ ಬಾಯಿ ಹುಣ್ಣು ಬರುವುದಕ್ಕೆ ಪ್ರಮುಖ ಕಾರಣಗಳು.
ನಿಮ್ಮ ಮನೆಯಲ್ಲೇ ಇವೆ ಮದ್ದುಗಳು:-
* ಬಿ ಕಾಂಪ್ಲೆಕ್ಸ್ ಅಧಿಕವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ನೀರು ಮತ್ತು ಎಳನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಬಾಯಿ ಹುಣ್ಣು ಬರದಂತೆ ನೋಡಿಕೊಳ್ಳ ಬಹುದು.
* ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನ ಅಗೆದು ತಿನ್ನುವುದರಿಂದ ಬಾಯಿ ಹುಣ್ಣಿನಿಂದ ಉಪಶಮನ ಪಡೆಯ ಬಹುದು.
* ತೆಂಗಿನ ಕಾಯಿಯ ಹಾಲಿನಲ್ಲಿ ಆಗಾಗ್ಗೆ ಬಾಯಿಯನ್ನ ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ, ಅಥವಾ ಅದು ಸಾಧ್ಯವಾಗದೆ ಇರುವಾಗ ಬೆಚ್ಚಗಿನ ನೀರಿನಲ್ಲಿ ಉಪ್ಪನ್ನ ಬೆರೆಸಿಕೊಂಡು ಬಾಯಿಯನ್ನು ಮುಕ್ಕಳಿಸಿದ್ದಾರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
* ನೀರಿನಲ್ಲಿ ಮೆಂತೆಯನ್ನು ಮಿಕ್ಸ್ ಮಾಡಿ ಕುಡಿಸಿ ನಂತರ ಆ ನೀರನ್ನು ಪಿಳ್ತಾರ್ ಮಾಡಿ ಸ್ವಲ್ಪ ತಣ್ಣಗಾದ ಮೇಲೆ ಅದರಿಂದ ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣಿಗೆ ಮುಕ್ತಿ ಸಿಗುತ್ತದೆ.
* ಬಾಯಿ ಹುಣ್ಣು ಇರುವ ಜಗದಲ್ಲಿ ಜೇನುತುಪ್ಪವನ್ನು ಅಥವಾ ಅರಿಶಿನಪುಡಿಯನ್ನು ಬೆರೆಸಿದ ನೀರನ್ನು ನಯವಾಗಿ ಹಚ್ಚುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.