ರಾಜಕೀಯ

ಬಳ್ಳಾರಿ ಬ್ರದರ್ಸ್ಗೆ ಕೊಟ್ಟ ಮಾತಿನಂತೆ, ನಡೆಯದ ಸುಷ್ಮಾ ಸ್ವರಾಜ್..!ಏನು ಗೊತ್ತಾ…

By admin

August 03, 2017

ಶ್ರಾವಣ ಶುಕ್ರವಾರ ನಡೆಯುವ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಬಳ್ಳಾರಿಗೆ ಬರುತ್ತಿದ್ದ ಭಾರತ ಸರಕಾರದ ಸಚಿವೆಯಾಗಿರುವ ಸುಷ್ಮಾ ಸ್ವರಾಜ್’ರವರು ಈ ವರ್ಷವಾದರೂ ಬಳ್ಳಾರಿಗೆ ಬರುತ್ತಾರೆಯೇ?

ಯಾಕೆಂದರೆ 1999ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದಲೇ ಕಾಂಗ್ರೆಸ್‌ನ  ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಅವರು, ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭ ನಗರದ ವೈದ್ಯ ಡಾ.ಮೂರ್ತಿ ಅವರ ನಿವಾಸದಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ್ದರಲ್ಲದೆ, “ನಾನು ಬಳ್ಳಾರಿಯ ಮಗಳು” ಎಂದು ತಿಳಿಸಿ, ಸೋಲಲಿ, ಗೆಲ್ಲಲಿ ಪ್ರತಿ ವರ್ಷ ಬಳ್ಳಾರಿಗೆ ಬಂದು ಈ ಪೂಜೆಯಲ್ಲಿ ಪಾಲ್ಗೊಂಡು ಹೋಗುವೆ ಎಂದು ಘೋಷಿಸಿದ್ದರು.

ಅವರ ಕೊಟ್ಟ ಮಾತಿನಂತೆ ಪ್ರತೀ ವರ್ಷವೂ ವರಮಹಾಲಕ್ಷ್ಮಿ ಪೂಜೆಯ ದಿನ ಬಳ್ಳಾರಿಗೆ ಬಂದು, ಡಾ.ಮೂರ್ತಿ ಅವರ ನಿವಾಸದಲ್ಲಿ ಪೂಜೆ ಮಾಡಿ, ನಂತರ ಬಿ.ಶ್ರೀರಾಮುಲು ಅವರು ಹಮ್ಮಿಕೊಳ್ಳುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳುತ್ತಿದ್ದರು.

ಸುಷ್ಮಾ ಸ್ವರಾಜ್’ರವರಿಗೆ ಪ್ರತಿ ವರ್ಷವೂ ಪೂಜೆಯಲ್ಲಿ ಭಾಗವಹಿಸುವಂತೆ ಡಾ. ಬಿ.ಕೆ. ಶ್ರೀನಿವಾಸಮೂರ್ತಿ  ಎರಡು ವಾರ ಮೊದಲೇ ಅಧಿಕೃತ ಆಹ್ವಾನ ನೀಡುತ್ತಿದ್ದರು.

 

ರೆಡ್ಡಿ ಸೋದರರಿಂದ ಬಾಯ್ತುಂಬ ‘ಅಮ್ಮಾ’ ಎಂದು ಕರೆಸಿಕೊಳ್ಳುತ್ತಿದ್ದ ಸುಷ್ಮಾ ಸ್ವರಾಜ್’ರವರು ಈಗ ಯಾಕೆ ಬಳ್ಳಾರಿಗೆ ಬರುತ್ತಿಲ್ಲ? ಈಗ ರೆಡ್ಡಿ ಸಹೋದರರು ಬಿಜೆಪಿ ಪಕ್ಷದಲ್ಲಿಲ್ಲ. ಹಾಗಾಗಿ ಸುಷ್ಮಾ ಸ್ವರಾಜ್’ರವರು ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಳ್ಳಲು ಬರುತ್ತಿಲ್ಲವೇ?  ಏನೇ ಆಗಲಿ, ನಾನು ಬಳ್ಳಾರಿಯ ಮಗಳು ಎಂದ ಮೇಲೆ ಅವರಿಗೆ ಬಳ್ಳಾರಿ ತವರಾಯಿತಲ್ಲವೇ. ಆ ದಿನ ತಾನು ಕೊಟ್ಟ ಮಾತಿಗಾದರೂ,ಸುಷ್ಮಾ ಸ್ವರಾಜ್’ರವರು ಬಳ್ಳಾರಿಗೆ ಬರಬೇಕಿತ್ತು,ಅಲ್ಲವೇ???

ಇದಕ್ಕೆ ನಿಮ್ಮ ಅಭಿಪ್ರಾಯ ಏನು?ತಿಳಿಸಿ…