ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ…
ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ ಸುಮ್ಮನಾಗಿದ್ದಾರೆ! ಎತ್ತಿನಹೊಳೆ, ಮೇಕೇದಾಟು, ಪರಮಶಿವಯ್ಯ, ಎರಗೋಳು ಮುಂತಾದ ಯೋಜನೆಗಳನ್ನು ತರುತ್ತೇವೆಂದು ನಮಗೆ ನೀರಿನ ಆಸೆ ಹುಟ್ಟಿಸಿ ಸುಮ್ಮನಾಗಿದ್ದಾರೆ, ಆ ಎಲ್ಲಾ ಯೋಜನೆಗೆ ಎಥೇಚ್ಚವಾಗಿ ಹಣ ಪೋಲಾಗಿದ್ದು ನಮಗೆ ತಿಳಿದಿದೆ.ಸದನದಲ್ಲಿ ರಮೇಶ್ ಕುಮಾರ್ ಅವರ ನಡೆಯ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ….! ಸದನದಿಂದಾಚೆಗೆ ನಮ್ಮ ಜಿಲ್ಲೆಯ ರಾಜಕೀಯ ಮುತ್ಸದ್ದಿಗಳು ಎಂಬ ಗೌರವಕ್ಕೆ ಎಂದಿಗೂ ಅವರು ಚ್ಯುತಿ ಬರದಂತೆ ನಡೆದುಕೊಂಡ್ಡಿದ್ದಾರೆ,
ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯ ನೂರಾರು ಕೆರೆಗಳಿಗೆ ನೀರು ತರಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸಿದ್ದಾರೆ, ಸದನದಲ್ಲಿ ಅತ್ತಿದ್ದಾರೆ ಜಗಳವಾಡಿದ್ದಾರೆ ಸ್ವಂತ ಪಕ್ಷದವರನ್ನೇ ಎದುರು ಹಾಕಿಕೊಂಡಿದ್ದಾರೆ ಮತ್ತು ಸುಪ್ರೀಂಕೋರ್ಟ್ ಮಟ್ಟಿಲೇರಿ ಕೆಸಿ ವ್ಯಾಲಿ ಯೋಜನೆಯನ್ನು ಜಿಲ್ಲೆಗೆ ತಂದಿದ್ದಾರೆ.ಯೋಜನೆ ತಂದಿರುವುದಲ್ಲ ಅದನ್ನ ಸಮರ್ಪಕವಾಗಿ ಕಾರ್ಯಗತಗೊಳಿಸಲು ಶ್ರಮಿಸಿದ್ದಾರೆ.. ಕಾರ್ಯಗತಗೊಳಿಸಿದ್ದಾರೆ ಕೂಡ…. ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ..
ನೀರಿಲ್ಲ ನೀಲಗಿರಿ ಮರ ಹಾಕೋಣ, ನೀರಿಲ್ಲ ಮಕ್ಕಳಿಗೆ ಶಿಕ್ಷಣ ಕೊಡಿಸಿ ಕೆಲಸಕ್ಕೆ ಕಳಿಸೋಣ. ನೀರಿಲ್ಲ ಸಾಲ ಜಾಸ್ತಿಯಾಗಿ ತೀರಿಸಲಾಗುತ್ತಿಲ್ಲ ಸಾಯೋಣ ಎಂಬ ಮಾತುಗಳು ರೈತರ ಬಾಯಿಂದ ಕೇಳಿದ್ದೇವೆ ನೀರಿಲ್ಲ ಎಂಬ ನೋವನ್ನೂ ಅನುಭವಿಸಿದ್ದೇವೆ… ಈ ಯೋಜನೆಯಿಂದ ಆ ಮಾತುಗಳು ಇನ್ನು ನಾವು ಕೇಳಲ್ಲ ಅನ್ನಿಸುತ್ತೆ.. ಎಲ್ಲಾ ಕೆರೆಗಳು ತುಂಬುವ ಲಕ್ಷಣ ಕಾಣಿಸುತ್ತಿದೆ ಮತ್ತು ಅಂತರ್ಜಲದ ಮಟ್ಟ ಏರಿಕೆಯಾಗುತ್ತದೆ ಎಂಬ ನಂಬಿಕೆ ಇದೆ..
ನಂಬಿ ಇನ್ನ ಎರಡು ಮೂರುವರ್ಷಗಳಲ್ಲಿ ಜಿಲ್ಲೆಯ ಕೃಷಿ ಚಟುವಟಿಕೆಗಳುಮತ್ತಷ್ಟು ಗರಿಗೆದರುತ್ತದೆ ಜಿಲ್ಲೆಯ ರೈತರ ಆರ್ಥಿಕಪರಿಸ್ಥಿತಿ ಸುಧಾರಣೆ ಆಗುತ್ತದೆ ವ್ಯವಸಾಯಕ್ಕೆನೀರಿಲ್ಲ ಎಂದು ಊರಿಂದಾಚೆ ಇರುವಟೆಕ್ಕಿಗಳೂ ವಿವಿಧ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳುಮತ್ತೆ ತನ್ನೂರಿಗೆ ಮರಳಿ ವ್ಯವಸಾಯ ಶುರುಮಾಡುತ್ತಾರೆ..ಆ ಹಳೆಯ ವೈಭವಕ್ಕೆಮರಳುತ್ತಾರೆ.. ಕೆಸಿ ವ್ಯಾಲಿ ಯೋಜನೆಯಹರಿಕಾರ, ಜಿಲ್ಲೆಯ ಭಗೀರಥ ರಮೇಶ್ಕುಮಾರ್ ಅವರಿಗೆ ಹಾಗೂ ಈಯೋಜನೆ ಕಾರ್ಯರೂಪಕ್ಕೆ ತರಲು ಶ್ರಮಿಸಿದ ಎಲ್ಲಾಮಾಜಿಗಳಿಗೂ ಹಾಲಿಗಳಿಗೂ ಮತ್ತು ಎಲ್ಲಾ ಪಕ್ಷಗಳಮುಖಂಡರಿಗೂ ಧನ್ಯವಾದಗಳು .