ಸುದ್ದಿ

ಫೋನ್ ಪೇ, ಗೂಗಲ್ ಪೇ ಅಂಥಾ ಆನ್ ಲೈನ್‌ನಲ್ಲೇ ವ್ಯವಹಾರ ಮಾಡುವವರು ಎಚ್ಚರ.. ಎಚ್ಚರ…ಯಾಕೆ ಗೊತ್ತ ಇದನ್ನು ಓದಿ…?

By admin

July 06, 2019

ರಾಜಧಾನಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದ್ದರೆ ಮತ್ತೊಂದೆಡೆ ಸ್ಮಾರ್ಟ್ ಖದೀಮರು ಹೆಚ್ಚಾಗಿದ್ದಾರೆ. ಕೋಟಿ ಕೋಟಿ ಲೂಟಿಯ ಐಎಂಎ ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಚ್ಚಿಬೀಳುವಂತ ಘಟನೆ ಇದಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಾಗ ಆರೋಪಿಗಳು ನೆಲಮಂಗಲ ಪೊಲೀಸರ ಅತಿಥಿಗಳಾಗಿದ್ದಾರೆ.

ಆನ್ ಲೈನ್‌ನಲ್ಲಿ ಅಕೌಂಟ್‌ಗೆ ಸಂಬಂಧಪಟ್ಟ ಮೊಬೈಲ್ ನಂಬರ್ ಚೇಂಜ್ ಮಾಡಿ ಬರೋಬ್ಬರಿ 3ಕೋಟಿ ಹಣವನ್ನು ಡ್ರಾ ಮಾಡಿದ್ದ ಆರೋಪಿಗಳು, ಆ ಹಣವನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಲು ಬಂದಾಗ ಖಾಕಿ ಬಲೆಗೆ ಬಿದ್ದಿದ್ದಾರೆ. ಇನ್ನೂ ಈ ಹಣದ ಮೋಸಕ್ಕೆ ಸಂಬಂಧಪಟ್ಟಂತೆ ರಾಮಮೂರ್ತಿನಗರದಲ್ಲಿ ವಂಚನೆ ಪ್ರಕರಣ ಕೂಡ ದಾಖಲಾಗಿತ್ತು.

ಈ ಮೂವರು ಆರೋಪಿಗಳು ನಂಬರ್ ಪ್ಲೇಟ್ ಇಲ್ಲದ ಸ್ಕೋಡಾ ಕಾರಿನಲ್ಲಿ ಬಂದು ದೊಡ್ಡ ದೊಡ್ಡ ಬಾಕ್ಸ್‌ಗಳಲ್ಲಿ ನಿನ್ನೆ ಸಂಜೆ ನೆಲಮಂಗಲದಲ್ಲಿರುವ ICICI ಬ್ಯಾಂಕ್ ಬ್ರಾಂಚ್‌ನಲ್ಲಿ ಹಣ ಡೆಪಾಸಿಟ್ ಮಾಡಲು ಬಂದಿದ್ದರು. ರಾತ್ರಿ 11ಗಂಟೆವರೆಗೆ ಬ್ಯಾಂಕ್ ಸಿಬ್ಬಂದಿ ಹಣ ಎಣಿಕೆ ಮಾಡಿ, ಅನುಮಾನ ಮೇರೆಗೆ ಬ್ಯಾಂಕ್ ಮ್ಯಾನೇಜರ್ ನೆಲಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೂ ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಪರೀಕ್ಷಿತ್ ನಾಯ್ಡು, ಗುರು ಪ್ರಸಾದ್, ಹಾಗೂ ರಂಗಸ್ವಾಮಿ ಪೊಲೀಸ್ ವಶದಲ್ಲಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹಣ ಧಮ್ಮನಗಿ ವಿಷನ್ ಪೌಂಡೇಷನ್‌ಗೆ ಸೇರಿದ್ದು ಎಂಬ ಮಾಹಿತಿ ಬಹಿರಂಗವಾಗಿದ್ದು, ಸಿಕ್ಕಿಬಿದ್ದ ಮೂವರು ಆರೋಪಿಗಳು ಇದೆ ಧಮ್ಮನಗಿ ಪೌಂಡೇಷನ್ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪೌಂಡೇಷನ್ ನಕಲಿ ಪೋನ್ ನಂ ಬಳಸಿ ಹಣ ಡ್ರಾ ಮಾಡಿರುವ ಮಾಹಿತಿ, ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಒಟ್ನಲ್ಲಿ ಫೋನ್ ಪೇ, ಗೂಗಲ್ ಪೇ ಅಂಥಾ ಆನ್ ಲೈನ್‌ನಲ್ಲೇ ವ್ಯವಹಾರ ಮಾಡುವವರು ಎಚ್ಚರ.. ಎಚ್ಚರ..