ಉಪಯುಕ್ತ ಮಾಹಿತಿ

ಫೇಸ್ಬುಕ್’ನಲ್ಲಿ ಸಿಗಲಿದೆ ನಿರುದ್ಯೋಗಿಗಳಿಗೆ ಕೆಲಸ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

By admin

April 16, 2018

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಡೇಟಾ ಲೀಕ್ ಪ್ರಕರಣದಲ್ಲಿ ವಿಶ್ವದಾದ್ಯಂತ ಫೇಸ್ಬುಕ್ ಟೀಕೆಗೆ ಗುರಿಯಾಗಿದೆ. ಈ ಮಧ್ಯೆಯೇ ವಿಶ್ವದಾದ್ಯಂತ ಫೇಸ್ಬುಕ್ ದೊಡ್ಡ ಮಟ್ಟದಲ್ಲಿ ನೇಮಕಾತಿಗೆ ಮುಂದಾಗಿದೆ. ಫೇಸ್ಬುಕ್ ಒಟ್ಟೂ 20000 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗಿದೆ.

ಕಂಪನಿ ವಿಷಯ ಪರಿಶೀಲನೆ ಹಾಗೂ ಭದ್ರತೆ ವಿಭಾಗಕ್ಕಾಗಿ 15000 ಜನರನ್ನು ನೇಮಿಸಿಕೊಳ್ಳಲಿದೆ. ಉಳಿದ 5000 ಮಂದಿ ಇತರ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಫೇಸ್ಬುಕ್ ಸಿಇಓ ಮಾರ್ಕ್ ಜ್ಯೂಕರ್ಬರ್ಗ್ ಅಧಿಕೃತ ಮಾಹಿತಿ ನೀಡಿದ್ದಾರೆ. ಯುಎಸ್ ಸೆನೆಟ್ ನಲ್ಲಿ ಮಾರ್ಕ್ ಜ್ಯೂಕರ್ಬರ್ಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವರ್ಷಾಂತ್ಯದಲ್ಲಿ 20000 ನೇಮಕಾತಿ ನಡೆಯಲಿದೆ. ಭದ್ರತೆ ಹಾಗೂ ವಿಷಯ ಪರಿಶೀಲನೆ ವಿಭಾಗಕ್ಕೆ ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳುವುದ್ರಿಂದ ಮುಂದಿನ ದಿನಗಳಲ್ಲಿ ಡೇಟಾ ಕಳ್ಳತನವನ್ನು ತಡೆಯಲು ಸಾಧ್ಯವೆಂದು ಮಾರ್ಕ್ ಜ್ಯೂಕರ್ಬರ್ಗ್ ಹೇಳಿದ್ದಾರೆ.

ಡೇಟಾ ಲೀಕ್ ಆಗ್ತಿದ್ದಂತೆ ಯುಎಸ್ ಸೆನೆಟ್ ಮುಂದೆ ಕಾಣಿಸಿಕೊಂಡ ಮಾರ್ಕ್ ಜ್ಯೂಕರ್ಬರ್ಗ್ ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಸೆನೆಟ್ ನ ಕ್ಷಮೆ ಕೋರಿದ್ದಾರೆ. ಡೇಟಾ ಸೋರಿಕೆ ಸಂಬಂಧ ಮಾರ್ಕ್ ಜ್ಯೂಕರ್ಬರ್ಗ್ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.