ಹಿಂದೊಂದು ದಿನ ಊಟ ಇಲ್ಲದೆ, ಮಲಗೋಕೆ ಜಾಗ ಇಲ್ಲದೆ ಚೆನ್ನೈನ ಫುಟ್ಪಾತ್ ಮೇಲೆ ಇದ್ದ ಈ ಹುಡುಗನ ಇವತ್ತಿನ ಸಾಧನೆ ಕೇಳಿದ್ರೆ ನೀವೆಲ್ಲ ಹುಬ್ಬೇರುಸ್ತೀರಾ. ಜೀವನ ಒಂದೇ ರೀತಿಯಲ್ಲಿ ಯಾವತ್ತೂ ಇರೋದಿಲ್ಲ ಅನ್ನೋದಕ್ಕೆ ಈ ಹುಡುಗನೇ ಸ್ಪಷ್ಟ ಉದಾಹರಣ..
22 ವರ್ಷದ ಜಯವೇಲ್ ಈವಾಗ ಕೆಂಬ್ರಿಡ್ಜ್ರ್ ವಿಶ್ವ ವಿದ್ಯಾನಿಲಯದಲ್ಲಿ ಅಡ್ವಾನ್ಸ್ ಆಟೋಮೊಬೈಲ್ ಇಂಜಿನಿಯರಿಂಗ್ ಓದುತ್ತ ಇದ್ದಾರೆ. ಇವರು ಮೂಲತಃ ತಮಿಳುನಾಡಿನ ನೆಲ್ಲೂರಿನವರು, 1990 ರಲ್ಲಿ ಆದ ಬೆಳೆ ನಷ್ಟದಿಂದ ಜಯವೇಲ್ ಕುಟುಂಬ ಬದುಕು ಕಟ್ಟಿಕೊಳ್ಳೊಕೆ ಅಂತ ಚೆನ್ನೈ ಬಂದವರು, ಆದರೆ ಅದೇ ವೇಳೆ ಜಯವೇಲ್ ತಂದೆ ತೀರಿದ್ದಾರೆ ನಂತರ ಮಗನನ್ನು ಸಾಕಬೇಕಿದ್ದ ತಾಯಿಯು ಕುಡಿಯುವ ದುಶ್ಚಟಕ್ಕೆ ಬಿದ್ದಿದ್ದು, ಬಾಲಕ ಜಯವೇಲ್ ನ ಸಣ್ಣ ದುಡಿಮೆ ಇದಕ್ಕೆ ಸಾಲುತ್ತ ಇರ್ಲಿಲ್ಲ, ಇದರಿಂದ ಬಡತನ ಬಂದು ಬೀದಿಗೆ ಬಿದ್ದಿತ್ತು ಜಯವೇಲ್ ಕುಟುಂಬ.
ನಂತರ ಅಚಾನಕ್ ಆಗಿ ಭೆಟ್ಟಿಯಾದ ಜಯಾ ಮುತ್ತುರಾಮನ್ ರಿಂದ ಜಯವೇಲ್ ನ ಜೀವನ ಬದಲಾಗಿ ಹೊಯ್ತಂತೆ.!ಮೊದಲಿಗೆ ಸಹಾಯ ಮಾಡ್ತೀನಿ ಅಂತಿದ್ದ ಜಯಾ ಅವರ ಮಾತು ನಂಬುತ್ತಾ ಇರ್ಲಿಲ್ಲ ಆಮೇಲೆ ಅವರ ಮೇಲೆ ನಂಬಿಕೆ ಬಂತು ಅಂತ ಹೇಳ್ತಾರೆ ಜಯವೇಲ್ ಜಯಾ ಅವರು ಜಯವೇಲ್ ನ ಸುಯಮ್ ಚಾರಿಟೇಬಲ್ ಟ್ರಸ್ಟ್ ನಲ್ಲಿ ಓದಿಸಿದ್ದಾರೆ.
ನಂತರ ಜಯವೇಲ್ ನ ಶ್ರಮಕ್ಕೆ ತಕ್ಕ ಪ್ರತಿಫಲ ಎಂಬಂತೆ ಅವರು PUC ಅಲ್ಲಿ ಒಳ್ಳೆ ಅಂಕ ತಗೊಂಡು ತೇರ್ಗಡೆನೂ ಆದ್ರಂತೆ, ಇಷ್ಟಕ್ಕೆ ಸುಮ್ಮನಾಗದ ಜಯ ಅವ್ರು ಈಗ ಜಯವೇಲ್ ನ ಲಂಡನ್ ನ ಕೆಂಬ್ರಿಡ್ಜ್ರ್ ವಿಶ್ವವಿದ್ಯಾಲಯಕ್ಕೆ ಇಂಜಿನಿಯರಿಂಗ್ ಪದವಿ ಮಾಡಲು ಕಳುಹಿಸಿಕೊಟ್ಟಿದ್ದಾರೆ..! ಶ್ರದ್ದೆ, ಆಸಕ್ತಿ ಇದ್ರೆ ಯಾರು ಏನ್ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಜಯವೇಲ್ ಉತ್ತಮ ನಿದರ್ಶನ.