ಸರ್ಕಾರದ ಯೋಜನೆಗಳು

ಪ್ರಧಾನಿ ನರೇಂದ್ರ ಮೋದಿಯವರಿಂದ ರೇಷನ್ ಕಾರ್ಡುದಾರರಿಗೆ ಸಿಹಿ ಸುದ್ದಿ ..!ತಿಳಿಯಲು ಈ ಲೇಖನ ಓದಿ..

By admin

February 05, 2018

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸಂಸದರ ಜತೆ ಸಭೆ ನಡೆಸಿ, ಪಡಿತರ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ನೀಡುವ ಬದಲಿಗೆ ಅದರ ಸಬ್ಸಿಡಿ ಹಣವನ್ನು ನೇರವಾಗಿ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.ಇದು ರೇಷನ್ ಕಾರ್ಡುದಾರರಿಗೆ ಲಾಭದಾಯಕವಾದರೆ ಕಾಳಸಂತೆಕೋರರ ಮೇಲೆ ನಿಯಂತ್ರಣ ಹಾಕಲಿದೆ.

ಫೆ. 9ರಿಂದ ಯೋಜನೆ ಜಾರಿ ಇನ್ಮುಂದೆ ಪಡಿತರ ಅಂಗಡಿಗಳಲ್ಲಿ ಬೆರಳಚ್ಚು ವ್ಯವಸ್ಥೆ ಕಡ್ಡಾಯವಾಗಲಿದೆ. ಫೆ. 9 ರಿಂದ ಈ ಯೋಜನೆ ಜಾರಿಗೆ ಬರಲಿದ್ದು, ರೇಷನ್ ಕಾರ್ಡ್ ತೋರಿಸಿದರೆ ಆಗಲ್ಲ. ಜತೆಗೆ ಪಡಿತರ ಪಡೆಯಲು ಕಾರ್ಡುದಾರರ ಬೆರಳಚ್ಚು ಬೇಕಾಗುತ್ತದೆ.

ಕಾರ್ಡುದಾರನ ಪರವಾಗಿ ಕುಟುಂಬದ ಸದಸ್ಯರು ಪಡೆಯಬಹುದು:-

ರೇಷನ್ ಕಾರ್ಡ್ ಸಂಖ್ಯೆ ಫೀಡ್ ಮಾಡಿದಾಗ, ಕಾರ್ಡ್ ಹೊಂದಿರುವವರ ಪೂರ್ಣ ವಿವರಗಳು ಬಹಿರಂಗಗೊಳ್ಳುತ್ತವೆ. ಇದರ ನಂತರ, ಕಾರ್ಡುದಾರರು ಬಯೋಮೆಟ್ರಿಕ್ ಗಣಕದಲ್ಲಿ ಹೆಬ್ಬೆಟ್ಟನ್ನು ಒತ್ತಬೇಕಾಗುತ್ತದೆ. ತದನಂತರ ರೇಷನ್ ವಿತರಿಸಲಾಗುತ್ತದೆ. ಕಾರ್ಡುದಾರನ ಪರವಾಗಿ ಅವನ ಕುಟುಂಬದ ಯಾವುದೇ ಸದಸ್ಯರು ಬಯೋಮೆಟ್ರಿಕ್ ಗಣಕದಲ್ಲಿ ಹೆಬ್ಬೆಟ್ಟನ್ನು ಒತ್ತಿದ ನಂತರ ರೇಷನ್ ನೀಡಲಾಗುವುದು.

ಡೆಹ್ರಾಡೂನ್ ನಲ್ಲಿ ಜಾರಿ:-

ಡೆಹ್ರಾಡೂನ್ ಜಿಲ್ಲೆಯ 1043 ರೇಷನ್ ಅಂಗಡಿಗಳಲ್ಲಿ ಯೋಜನೆ ಜಾರಿಗೆ ಬರುತ್ತಿದೆ. ನ್ಯಾಯಬೆಲೆ ಪಡಿತರ ಅಂಗಡಿಗಳಿಗೆ ಬಯೋಮೆಟ್ರಿಕ್ ಯಂತ್ರವನ್ನು ನೀಡಲಾಗುತ್ತಿದೆ. ಇದೇ ಫೆ. 9ರ ಒಳಗಾಗಿ ಎಲ್ಲ ಅಂಗಡಿಗಳಿಗೂ ಬಯೋಮೆಟ್ರಿಕ್ ಯಂತ್ರ ಲಭ್ಯವಾಗಲಿದೆ.

ಭ್ರಷ್ಟಾಚಾರ, ದುರುಪಯೋಗ ತಡೆ:-

ಪಡಿತರ ವ್ಯವಸ್ಥೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಈ ರಾಜ್ಯಗಳಲ್ಲಿ ‘ಸಾರ್ವಜನಿಕ ವಿತರಣ ವ್ಯವಸ್ಥೆ’ಯ ಮೂಲಕ ಪಡಿತರ ಆಹಾರ ಪದಾರ್ಥ ನೀಡುವ ಬದಲಿಗೆ, ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗೆ ಹಣ ನೀಡುವ ಕುರಿತಾದ ಚಿಂತನೆ ನಡೆಸಿದ್ದಾರೆ. ಈ ಹೊಸ ಯೋಚನೆಯಲ್ಲಿ ಫಲಾನುಭವಿಗಳು ಪಡಿತರ ವ್ಯವಸ್ಥೆಯಲ್ಲಿ ಪಡೆಯುವ ಸಬ್ಸಿಡಿ ಹಣ ನೇರವಾಗಿ ಅವರ ಖಾತೆಗೆ ಜಮೆಯಾಗುದು, ನಂತರ ಫಲಾನುಭವಿಗಳು ಆ ಹಣದಲ್ಲಿ ತಮ್ಮ ಸಮೀಪದಲ್ಲಿರುವ ಅಂಗಡಿಗಳಲ್ಲಿ ಅದೇ ಸಾಮಾಗ್ರಿ ಕೊಳ್ಳುವುದಾಗಿದೆ.

ಮೋದಿ ಅವರ ಈ ಹೊಸ ಚಿಂತನೆ ತಕ್ಷಣವೇ ಜಾರಿಯಾಗುತ್ತದೆಯೇ ಎಂದು ಕೇಳಿದರೆ, ಅದಕ್ಕೆ ಸಿಗುವ ಉತ್ತರ ಇಲ್ಲ. ಈ ಯೋಜನೆ ಸದ್ಯಕ್ಕೆ ಚರ್ಚೆ ಹಂತದಲ್ಲಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ಮೋದಿ ಅವರ ಮುಂದೆ ಅನೇಕ ಪ್ರಮುಖ ಸವಾಲುಗಳಿವೆ. ಅವುಗಳೆಂದರೆ.