ಈಗ ಎಲ್ಲಾ ಕಡೆ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡ ಧ್ವಜ ಕುರಿತು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹಾಗಾದ್ರೆ ನಮ್ಮ ಸಂವಿಧಾನದಲ್ಲಿ ಪ್ರತ್ಯೇಕ ನಾಡ ಧ್ವಜ ಕುರಿತು ಏನು ಹೇಳಲಾಗಿದೆ? ಭಾರತದ ಯಾವ ರಾಜ್ಯವು ಪ್ರತ್ಯೇಕ ಧ್ವಜವನ್ನು ಹೊಂದಿಲ್ಲವೇ?
ನಾವು ಮೊದಲು ಕರ್ನಾಟಕ ಧ್ವಜದ ಹಿನ್ನೆಲೆ ತಿಳಿಯೋಣ:-
1950ರಲ್ಲಿ ಭಾರತ ಗಣರಾಜ್ಯವಾಯಿತು. ಈ ವೇಳೆ, ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಸುದೀರ್ಘ ಹೋರಾಟದಿಂದ 1956ರಲ್ಲಿ ಕರ್ನಾಟಕದ ಏಕೀಕರಣವಾಯ್ತು. ಮದ್ರಾಸ್, ಹೈದರಾಬಾದ್, ಮುಂಬೈ ಭಾಗದ ಕನ್ನಡ ಮಾತನಾಡೋ ಪ್ರಾಂತ್ಯಗಳೆಲ್ಲಾ ಸೇರಿ `ಮೈಸೂರು ರಾಜ್ಯ’ ಉದಯವಾಯಿತು. ನಂತರ 1973ರಲ್ಲಿ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೇ ಮೈಸೂರು ಭಾಗಗಳನ್ನುಮೈಸೂರಿಗೆ `ಕರ್ನಾಟಕ’ ಅಂತ ಮರುನಾಮಕರಣ ಮಾಡಲಾಯಿತು. 1960ರಲ್ಲಿ ಹೋರಾಟಗಾರ ಮಾ.ರಾಮಮೂರ್ತಿ ಅವರು ಅರಿಶಿನ-ಕುಂಕುಮ ಧ್ವಜವನ್ನು ರೂಪಿಸಿದ್ದರು.
ಪ್ರತ್ಯೇಕ ನಾಡ ಧ್ವಜ ಕುರಿತು ಕುರಿತು ಸಂವಿಧಾನದಲ್ಲಿ ಏನಿದೆ?
- ಮೊದಲಿಗೆ ಭಾರತ ಒಂದು ಒಕ್ಕೂಟ
- ಹಲವು ರಾಜ್ಯಗಳಿಂದ ಭಾರತ ಒಕ್ಕೂಟವಾಗಿದ್ದು ರಾಜ್ಯ ಸರಕಾರಗಳಿಗೆ ಅದರದ್ದೇ ಆದ ಅಧಿಕಾರಗಳು ಇರುತ್ತವೆ.
- ಭಾರತದ ಸಂವಿಧಾನದಲ್ಲಾಗಲಿ (flag code of India) ನಲ್ಲಾಗಲಿ ರಾಜ್ಯಗಳು ತಮ್ಮ ಧ್ವಜವನ್ನು ಹೊಂದಬಾರದು ಎಂದು ಹೇಳಿಲ್ಲ.
- Flag code of India ಪ್ರಕಾರ ಭಾರತದ ತ್ರಿವರ್ಣ ಧ್ವಜಕ್ಕೆ ಮೊದಲ ಸ್ಥಾನ, ಅಂದರೆ ಭಾರತ ಒಕ್ಕೂಟದ ಧ್ವಜ ಬೇರೆಲ್ಲಾ ಧ್ವಜಗಳಿಗಿಂತಲೂ ಮೇಲೆ ಹಾರಾಡಬೇಕಿದೆ.
- ಕರ್ನಾಟಕ ಸರಕಾರ ತನ್ನ ಧ್ವಜವನ್ನು ಹೊಂದಲು ಸಂಪೂರ್ಣ ಸ್ವತಂತ್ರವಿದೆ.
- ಪ್ರಪಂಚದಲ್ಲಿ ಅನೇಕ ಒಕ್ಕೂಟಗಳಲ್ಲಿ ರಾಜ್ಯಗಳು ತಮ್ಮದೇ ಧ್ವಜವನ್ನು ಹೊಂದಿವೆ.
- . ರಾಜ್ಯ ತನ್ನದೇ ಧ್ವಜ ಹೊಂದಿದ ಮಾತ್ರಕ್ಕೆ ಏಕತೆಗೆ ಧಕ್ಕೆ ಅನ್ನುವುದರಲ್ಲಿ ಹುರುಳಿಲ್ಲ.
- ಅಮೇರಿಕದ 50 ರಾಜ್ಯಗಳಲ್ಲಿ ತಮ್ಮದೇ ಆದ ಧ್ವಜ ಹೊಂದಿದೆ.
- ಬ್ರೆಸಿಲ್ ನ 27 ರಾಜ್ಯಗಳು ತಮ್ಮದೇ ಆದ ಧ್ಬಜ ಹೊಂದಿವೆ
- ಆಸ್ಟ್ರೇಲಿಯಾದ 8 ಕ್ಕೂ ಹೆಚ್ಚು ರಾಜ್ಯಗಳು ತಮ್ಮದೇ ಆದ ಧ್ವಜ ಹೊಂದಿವೆ
- ಜರ್ಮನಿಯ ಸುಮಾರು 16 ರಾಜ್ಯಗಳು ತಮ್ಮದೇ ಆದ ಧ್ವಜ ಹೊಂದಿದೆ.
ಪ್ರಪಂಚದ ಅನೇಕ ಒಕ್ಕೂಟದಲ್ಲಿ ರಾಜ್ಯಗಳು ತಮ್ಮ ಧ್ವಜ ಹೊಂದಿದ ಮಾತ್ರಕ್ಕೆ ಆ ಒಕ್ಕೂಟದ ಏಕತೆಗೆ ಧಕ್ಕೆಯಾಗಿದೆಯೇ ? ಪ್ರಸ್ತುತ ಭಾರತದಲ್ಲಿ ಜಮ್ಮು ಕಾಶ್ಮೀರ ಹೊರತುಪಡಿಸಿ ಯಾವುದೇ ರಾಜ್ಯಕ್ಕೆ ಪ್ರತ್ಯೇಕ ಧ್ವಜವಿಲ್ಲ. ಸಂವಿಧಾನದ ಪ್ರಕಾರ ರಾಷ್ಟ್ರಧ್ವಜಕ್ಕಿಂತ ಸ್ವಲ್ಪ ಕೆಳಗಡೆ ನಾಡ ಧ್ವಜ ಹಾರಿಸಬಹುದು, ಎಂದು ಉಲ್ಲೇಕಿಸಲಾಗಿದೆ.ಇಲ್ಲಿ ಓದಿ:-ಕನ್ನಡಿಗರಾಗಿ ನಮ್ಮ ಮಾತೃ ಭಾಷೆ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ???