inspirational

ಪ್ಯಾನ್ ಕಾರ್ಡ್ ಇಲ್ಲದೇ ಈ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ… !ತಿಳಿಯಲು ಈ ಲೇಖನ ಓದಿ..

By admin

February 24, 2018

ಈಗ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.. ಅದೇ ರೀತಿಯಾಗಿ ಪ್ಯಾನ್ ಕಾರ್ಡ್ ಕೂಡ ಕೆಲವೊಂದು ಕೆಲಸಗಳಿಗೆ ಕಡ್ಡಾಯ.. ಆ ಕೆಲಸಗಳು ಯಾವುದು?? ಇಲ್ಲಿದೆ ನೋಡಿ..

ಹೊರ ದೇಶಗಳಿಗೆ ಹೋಗಬೇಕಾದರೆ ಪ್ಯಾನ್ ಕಾರ್ಡ್ ಬೇಕು..

 

ಹೊರ ದೇಶಗಳಿಗೆ ಹೋಗುವವರು ಟಿಕೇಟ್ ಬುಕ್ ಮಾಡಲು ಪ್ಯಾನ್ ಕಾರ್ಡ್ ಬೇಕಾಗಿದೆ..

ಆಸ್ತಿಯನ್ನು ಖರೀದಿಸಲು ಪ್ಯಾನ್ ಅವಶ್ಯಕ..

ಆಸ್ತಿಯನ್ನು ಖರೀದಿ ಮಾಡಿ ರಿಜಿಸ್ಟರ್ ಮಾಡಲು ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ.

 

ಬ್ಯಾಂಕ್ ನಲ್ಲಿ ಅಕೌಂಟ್ ತೆರೆಯಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕು..

ಮೊದಲು ಪ್ಯಾನ್ ಕಾರ್ಡ್ ಕೇವಲ 50 ಸಾವಿರ ಹಣಕ್ಕಿಂತ ಜಾಸ್ತಿ ಜಮಾ ಮಾಡಿದರೆ ಅವಶ್ಯಕತೆ ಇತ್ತು.. ಆದರೆ ಇನ್ನು ಮುಂದೆ ಎಫ್ ಡಿ ಇಡಲು.. ಬ್ಯಾಂಕ್ ಖಾತೆ ತೆರೆಯಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ..

ಕ್ರೆಡಿಟ್ ಕಾರ್ಡ್ ಪಡೆಯಲು:-

ಆನ್ಲೈನ್ ವ್ಯವಹರಿಸಲು ಬಹುಮುಖ್ಯವಾಗಿ ಬೇಕಾದ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಗಳನ್ನು ಪಡೆಯಲು ಪ್ಯಾನ್ ಕಾರ್ಡ್ ಅವಶ್ಯಕವಾಗಿ ಬೇಕು..

50 ಸಾವಿರಕ್ಕಿಂತ ಹೆಚ್ಚಿನ ಬ್ಯಾಂಕ್ ವ್ಯವಹಾರಕ್ಕೆ..

ಬ್ಯಾಂಕ್ ಗಳಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಜಮೆ ಮಾಡುವುದಾಗಲಿ.. ಅಥವಾ ಇನ್ನೊಬ್ಬರ ಅಕೌಂಟ್ ಗೆ ಹಾಕುವುದಕ್ಕಾಗಲಿ ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ..