ದೇಶ-ವಿದೇಶ

ಪೋಷಕರೇ ಹುಷಾರ್!ಈ ಗೇಮ್ ಆಡಿದ್ರೆ ನಿಮ್ಮ ಮಕ್ಕಳು ಪ್ರಾಣ ಕಳೆದುಕೊಳ್ಳಬಹುದು!ಈ ಲೇಖನಿ ಓದಿ, ಎಲ್ಲರಿಗೂ ಶೇರ್ ಮಾಡಿ…

By admin

August 11, 2017

ಆಟವಾಡುವುದೆಂದರೆ…ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ.. ಒಂದು ಕಾಲದಲ್ಲಿ ಬಯಲಲ್ಲಿ ಆಟವಾಡುತ್ತಿದ್ದ ಮಕ್ಕಳು ಈಗ ನಾಲಕ್ಕು ಗೋಡೆಗಳ ಮಧ್ಯೆ, ಆನ್ ಲೈನ್ ಆಟಗಳನ್ನು ಆಡುತ್ತಿದ್ದಾರೆ. ಈಗಂತೂ ಸಂಪೂರ್ಣ ಡಿಜಿಟಲ್ ಜಮಾನ. ಎದ್ದರೂ ಕೂತರೂ ಮೊಬೈಲ್ ಕಂಪ್ಯೂಟರ್ಗಳದ್ಧೆ ಹವಾ.. ಅದರಲ್ಲೂ ಪುಟ್ಟ ಮಕ್ಕಳು ಆನ್ ಲೈನ್ ಗೇಮ್`ಗಳಿಗೆಂದರೆ ಇನ್ನಿಲ್ಲದಂತೆ ತೊಡಗಿಕೊಳ್ಳುತ್ತಿದ್ಧಾರೆ. ರಷ್ಯಾದಲ್ಲಿ ಆನ್ ಲೈನ್ ಗೇಮ್ ಒಂದು ಮಕ್ಕಳ ಪ್ರಾಣ ತೆಗೆಯುತ್ತಿರುವ ಬಗ್ಗೆ ಸುದ್ದಿಯಾಗಿದೆ.

ಸಾವಿಗೆ ಪ್ರಚೋದನೆ ನೀಡುವ ಆಪಾಯಕಾರಿ ಮೊಬೈಲ್ ಗೇಮ್ ಆಗಿರುವ ಬ್ಲೂ ವೇಲ್ ಚಾಲೆಂಜ್ ಸ್ವೀಕರಿಸಿ ಇತ್ತೀಚೆಗಷ್ಟೇ ಮುಂಬೈನಲ್ಲಿ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಅಂಥಹದ್ದೇ ಯತ್ನಕ್ಕೆ ಮುಂದಾಗಿದ್ದ ಬಾಲಕನೊಬ್ಬನನ್ನು ಇಂದೋರ್ ನಲ್ಲಿ ರಕ್ಷಣೆ ಮಾಡಲಾಗಿದೆ.

ದೇಶದಲ್ಲಿ ಬ್ಲೂವೇಲ್ ಮೊಬೈಲ್ ಗೇಮ್ ಗೆ ನಿಷೇಧ ಹೇರಬೇಕೆಂದು ಭಾರೀ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಮತ್ತೊಬ್ಬ ಬಾಲಕ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದ್ದು ದೇಶದಾದ್ಯಂತ ಪೋಷಕರು ಬೆಚ್ಚಿ ಬೀಳುವಂತೆ ಮಾಡಿದೆ.

ಬ್ಲೂವೇಲ್ ಚಾಲೆಂಚ್ ನ 50ನೇ ಹಂತ ತಲುಪಿದ್ದ ಮಧ್ಯಪ್ರದೇಶದ ಇಂದೋರ್ ನ 13 ವರ್ಷದ ಬಾಲಕನೊಬ್ಬ ಗುರುವಾರ ಶಾಲೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಗುರುವಾರ ಮಧ್ಯಾಹ್ನ ಚಮಲೀದೇವಿ ಪಬ್ಲಿಕ್ ಸ್ಕೂಲ್ ನ ಶಾಲೆಯ 3ನೇ ಮಹಡಿಯಿಂದ ಕೆಳಗೆ ಹಾರಿ ಬಾಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ, ಸಹಪಾಠಿಗಳು, ಶಿಕ್ಷಕರು ಸ್ಥಳಕ್ಕೆ ಧಾವಿಸಿ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಾಥಮಿಕ ತನಿಖೆ ವೇಳೆ, ಬಾಲಕ ಕಳೆದ ಕೆಲ ದಿನಗಳಿಂದ ತಂದೆಯ ಮೊಬೈಲ್ ನಲ್ಲಿ ಬ್ಲೂವೇಲ್ ಗೇಮ್ ಆಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಇದರ ಅಂತಿಮ ಹಂತವಾಗಿ ಗುರುವಾರ ಆತನಿಗೆ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಅದಕ್ಕೆ ಬಾಲಕ ಯತ್ನಿಸುತ್ತಿರವಾಗಲೇ, ಸಹಪಾಠಿಗಳ ಸಮಯ ಪ್ರಜ್ಞೆಯಿಂದಾಗಿ ಬದುಕುಳಿದಿದ್ದಾನೆ.

ಏನಿದು ಭಯಾನಕ ಬ್ಲೂವೇಲ್ ಗೇಮ್!

ಮೊದಲಿಗೆ ರಷ್ಯಾದಲ್ಲಿ ಪ್ರಾರಂಭವಾದ ಈ ಅಟ ಮೆಲ್ಲನೆ ಭಾರತವನ್ನೂ ಪ್ರವೇಶಿಸಿತು. ಒಂದು ಸಾಮಾಜಿಕ ತಾಣ ಇದನ್ನು ನಿರ್ವಹಿಸುತ್ತಿದೆ. ಈ ಆಟದಲ್ಲಿ ಪಾಲ್ಗೊಳ್ಳ ಬೇಕಾದವರು… ನಿರ್ವಾಹಕರು ಹೇಳಿದಂತೆ ಮಾಡಬೇಕು.

50 ದಿನಗಳ ಕಾಲ ಅವರು ನೀಡುವ ಟಾಸ್ಕ್ ಗಳನ್ನು ಮಾಡುತ್ತಿರಬೇಕು. ಮೊದಲು ಒಂದು ಪೇಪರಲ್ಲಿ ತಿಮಿಂಗಲ ಚಿತ್ರವನ್ನು ರಚಿಸಬೇಕು. ನಂತರ ಶರೀರದಮೆಲೆ ಬರೆಸಿಕೊಳ್ಳಬೇಕು. ನಂತರ ಹಾರರ್ ಸಿನಿಮಾಗಳನ್ನು ನೋಡುತ್ತಾ, ಮಧ್ಯರಾತ್ರಿ ಎದ್ದೇಳುವುದು… ನಡೆಯುವುದು ಮೊದಲಾದ ಟಾಸ್ಕ್ ಗಳನ್ನು ಪೂರೈಸಬೇಕು.

ಈ ರೀತಿ 50 ಟಾಸ್ಕ್ ಗಳನ್ನು 50 ದಿನಗಳಲ್ಲಿ ಪೂರ್ಣಗೊಳಿಸಿದನಂತರ ಆತ್ಮಹತ್ಯೆ ಮಾಡಿಕೊಳ್ಳಬೇಕು. ಇದನ್ನೇ ಸೆಲ್ಫ್ ಡೆಸ್ಟ್ರಾಯಿಂಗ್ ಎನ್ನುತ್ತಾರೆ. ಆಟದಲ್ಲಿ ಗೆಲ್ಲಬೇಕಾದರೆ, ತಪ್ಪದೆ ಆತ್ಮಹತ್ಯೆ ಮಡಿಕೊಳ್ಳಲೇಬೇಕು ಎಂದು ನಿರ್ವಾಹಕರು ಆಟಗಾರರ ಮೇಲೆ ಒತ್ತಡ ಹೇರುತ್ತಾರೆ. ಹೀಗಾಗಿ… ಆಟವನ್ನು ಗೆಲ್ಲಲೇ ಬೇಕೆಂಬ ಹಠದಿಂದ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಸ್ಪರ್ಧಾಳುಗಳಗಳನ್ನ ಬಲವಂತವಾಗಿ ವೇಲ್ ಶೇಪ್ ಪಡೆಯುವಂತೆ ಒತ್ತಾಯಿಸಲಾಗುತ್ತಂತೆ. ಒಂದು ಕೊನೆಯ ದಿನ ಆತ್ಮಹತ್ಯೆಯಂತಹ ಸವಾಲು ಹಾಕಲಾಗುತ್ತಂತೆ. 14 ವರ್ಷದ ಹುಡುಗಿಯರೂ ಸಹ  ಈ ಗೇಮ್`ನಲ್ಲಿ ತಲ್ಲೀನರಾಗಿ 14 ಅಂತಸ್ತಿನ ಕಟ್ಟಡದಿಂದ ಧುಮುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು  ವರದಿಯಾಗಿದೆ.

ಮಕ್ಕಳನ್ನ ಈ ರೀತಿ ಸಾವಿಗೆ ನೂಕಿದ ಆನ್ ಲೈನ್ ಡೆತ್ ಗ್ರೂಪ್`ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.