ಸುದ್ದಿ

ಪೇಪರ್ ಮಾರಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಇಂದು ಹೇಗಿದ್ದಾನೆ ಗೊತ್ತ…?

By admin

August 29, 2019

ವಿಶ್ವದ ಅತ್ಯಂತ ದೊಡ್ಡ ಕಂಪನಿ ಆಪಲ್ ನ ಸಿಇಒ ಟಿಮ್ ಕುಕ್ 23,700 ಷೇರುಗಳನ್ನು ದಾನ ಮಾಡಿದ್ದಾರೆ. ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ದಾನ ಮಾಡಿದ ಷೇರಿನ ಮೌಲ್ಯ 36 ಕೋಟಿ ರೂಪಾಯಿ ಎನ್ನಲಾಗಿದೆ. ಯಾರಿಗೆ ದಾನ ಮಾಡಲಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.

ಹಿಂದಿನ ವರ್ಷ ಇಷ್ಟೇ ಷೇರನ್ನು ಕುಕ್, ಚಾರಿಟಿ ಟ್ರಸ್ಟ್ ಒಂದಕ್ಕೆ ದಾನ ಮಾಡಿದ್ದರು. ಆಪಲ್ ಪ್ರಕಾರ, ಕುಕ್ ಬಳಿ 854,849 ಷೇರುಗಳಿವೆ. ಇದ್ರ ಬೆಲೆ 17.6 ಕೋಟಿ ಡಾಲರ್ ಅಂದ್ರೆ ಸುಮಾರು 1,267 ಕೋಟಿ ರೂಪಾಯಿ. ಈಗ ಕುಕ್ ಬಳಿ ಇಷ್ಟೊಂದು ಹಣವಿದೆ. ಅದನ್ನು ಕುಕ್ ದಾನ ಕೂಡ ಮಾಡ್ತಿದ್ದಾರೆ. ಆದ್ರೆ ಒಂದು ಸಮಯದಲ್ಲಿ ಕುಕ್, ಪೇಪರ್ ಮಾರಿ ಮನೆ ನಡೆಸುತ್ತಿದ್ದರಂತೆ.

ಕುಕ್, ಅಲಬಾಮಾದಲ್ಲಿ ‘ದಿ ಪ್ರೆಸ್ ರಿಜಿಸ್ಟರ್’ ಪತ್ರಿಕೆ ಮಾರಾಟ ಮಾಡುತ್ತಿದ್ದರಂತೆ. ಜೊತೆಗೆ ತಾಯಿಯೊಂದಿಗೆ ಫಾರ್ಮಸಿ ಕೆಲಸ ಮಾಡಿದ್ದಾರೆ. ಅವ್ರು ಹೆಸರು ಮಾಡಲು ಬಯಸಿದ್ದರು. ಸತತ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಕೆಲಸ ಮಾಡಿದ ಕುಕ್ ಈಗ ವಿಶ್ವದ ಅತಿದೊಡ್ಡ ಕಂಪನಿಯ ಸಿಇಒ ಆಗಿದ್ದಾರೆ.

AuburnUniversity ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಕುಕ್ Reynolds Aluminum ಕಂಪನಿಯಲ್ಲಿಪಾರ್ಟ್ ಟೈಂ ಕೆಲಸ ಮಾಡ್ತಿದ್ದರು. ಆ ಹಣ ಅವ್ರ ವಿದ್ಯಾಭ್ಯಾಸಕ್ಕೆ ನೆರವಾಗಿತ್ತು. ಕಂಪನಿಸಿಬ್ಬಂದಿ ಒಬ್ಬೊಬ್ಬರಾಗಿಯೇ ಕೆಲಸ ಬಿಡುತ್ತಿದ್ದ ಸಮಯದಲ್ಲಿ ಕುಕ್, ಆ ಕಂಪನಿ ಅಧ್ಯಕ್ಷರಿಗೆಸಹಾಯ ಮಾಡಿದರು. ಜೊತೆಗೆ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಮುಗಿಸಿದ್ರು.